ನಾಯಕ, ನಾಯಕಿ ನಿರ್ಮಾಪಕರು
ಚಂದನವನದಲ್ಲಿ ನಾಯಕ, ಇಲ್ಲವೆ ನಾಯಕಿ ಪ್ರತ್ಯೇಕವಾಗಿ ನಿರ್ಮಾಣ ಮಾಡುವುದನ್ನು ನೋಡಿದ್ದೇವೆ. ಮೊದಲುಎನ್ನುವಂತೆಇಬ್ಬರು ಸೇರಿಕೊಂಡು ‘ಲವ್ ಮಾಕ್‌ಟೈಲ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಾರಂಭದಿಂದಲೂಸಲಹೆ,ಪ್ರೋತ್ಸಾಹ, ತುಣುಕುಗಳಿಗೆ ಕಂಠದಾನ ಮಾಡಿರುವ ಸುದೀಪ್ ಕೊನೆಗೂ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಲು ಆಗಮಿಸಿದ್ದರು. ನಂತರ ಮಾತನಾಡುತ್ತಾಯಾರಾದ್ರೂಒಬ್ಬ ವ್ಯಕ್ತಿಗೆಕನೆಕ್ಟ್‌ಆದರೆ ಹತ್ತು ಮೈಲಿನೂ ಒಂದು ನಿಮಿಷದಲ್ಲಿ ಮಾಡಿ ಮುಗಿಸಬಹುದು.ಅದಕ್ಕೆಕಾರಣ ಹುಡುಕಬಾರದು. ಕೆಲವೊಮ್ಮೆ ಹತ್ತು ಮೈಲು ಹೋಗಬೇಕಾದರೆ ಹತ್ತು ಸಲ ಯೋಚಿಸುತ್ತವೆ. ಸಿನಿಮಾಕ್ಕೆಟ್ರೈಲರ್‌ಗೆ ವಾಯ್ಸ್ ನೀಡಿ, ಇಲ್ಲಿಗೆ ಬರುವುದುದೊಡ್ಡತನಇರೋಲ್ಲ. ಕೆಲರನ್ನು ಪ್ರೀತಿಸ್ತೇವೆ. ಅದಕ್ಕೆಕಾರಣ ತಿಳಿದಿರುವುದಿಲ್ಲ. ಬಾಂದವ್ಯ ಬೆಳದ ಮೇಲೆ ಒಬ್ಬರಿಗೊಬ್ಬರು ನಿಲ್ಲೋದು ಮನುಷ್ಯತ್ವ. ಈ ಉದ್ಯಮದಲ್ಲಿನಾನು ಅದೃಷ್ಟವಂತಎನ್ನಬಹುದು. ಹಲವು ಒಳ್ಳೆಯ ನಿರ್ಮಾಪಕರು,ನಿರ್ದೇಶಕರು ಸಿಕ್ಕಿದ್ದಾರೆ. ಕೃಷ್ಣ ಅವರ ಮಾತಿನಲ್ಲಿ ಮುಗ್ದತೆಇದೆ.ಎಲ್ಲವನ್ನು ಮನಸ್ಸು ಬಿಚ್ಚಿ ಹೇಳಿದ್ದಾರೆ.
ಸಕ್ಸಸ್‌ಅನ್ನುವುದು ಪ್ರತಿಯೊಬ್ಬರಲ್ಲೂಇರುತ್ತದೆ.ಬೇರೆವರೊಂದಿಗೆ ಹೋಲಿಸಿ ನನಗೆ ಅದು ಸಿಕ್ಕಲ್ಲ ಅಂದುಕೊಂಡರೆ ನಾವು ಚಿಕ್ಕವರಾಗುತ್ತೇವೆ. ಪ್ರಪಂಚದಲ್ಲಿತಂದೆತಾಯಿಕೊಡುವಂತ ಪ್ರೀತಿ ಬೇರೆಲ್ಲೋ ಸಿಗುವುದಿಲ್ಲ. ಅಂತಹವರು ಪ್ರೀತಿ ತೋರಿಸಿದ್ದರಿಂದಲೇ ನಾವುಗಳು ಈ ಮಟ್ಟಕ್ಕೆ ಬಂದಿರುವುದು.ರಘುದೀಕ್ಷಿತ್ ಒಳ್ಳೆಯ ತಂತ್ರಜ್ಘ. ಅವರ ಫ್ಯಾನ್‌ಆಗಿದ್ದೇನೆ. ಆದರೂಅವರುಕಮರ್ಷಿಯಲ್ ಆಗಿ ಬದಲಾವಣೆಆಗಬೇಕಾಗಿದೆ. ಬಿಡುಗಡೆ ದಿವಸ ಮೊದಲ ಟಿಕೆಟ್‌ಖರೀದಿ ಮಾಡುತ್ತೇನೆ. ಒಳ್ಳೆಯದಾಗಲಿ ಎಂದರು,
ನಾಲ್ಕೈದು ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿದರೆಅದಕ್ಕೆಮಾಕ್‌ಟೈಲ್‌ಎನ್ನುತ್ತಾರೆ. ಅದರಂತೆಕತೆಯಲ್ಲಿ ಮೂರುಘಟ್ಟದ ಪ್ರೀತಿ ಸನ್ನಿವೇಶಗಳು ಬರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ.ಕಾಲೇಜು, ಯೌವ್ವನ ಮತ್ತುಜವಬ್ದಾರಿ ಹುಡುಗನಾಗಿ ಕೃಷ್ಣ ನಾಯP ಮತ್ತು ನಿರ್ದೇಶಕನಾಗಿ ಹೊಸ ಅನುಭವ.ಕೊನೇ ಶೇಡ್‌ದಲ್ಲಿ ಕಾಣಿಸಿಕೊಳ್ಳುವ ಮಿಲನನಾಗರಾಜ್ ನಾಯಕಿ.ಉಪನಾಯಕಿಯಾಗಿಅಮೃತಅಯ್ಯಂಗಾರ್‌ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.ರಾಘವೇಂದ್ರಕಾಮತ್-ಅರುಣ್‌ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತವಿದೆ.ಶ್ರೀಕ್ರೇಜಿ ಮೈಂಡ್ಸ್ ಸಂಕಲನದಜೊತೆಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದಾರೆ.ಬೆಂಗಳೂರು, ಚಿಕ್ಕಮಗಳೂರು, ಕಳಸ,ಮೈಸೂರು, ಉಡುಪಿದಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಕೃಷ್ಣ ಟಾಕೀಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರವುಜನವರಿ ೩೧ರಂದು ತೆರೆಕಾಣಲಿದೆ.