Godhra.Film Teaser Rel.

Friday, January 17, 2020

261

ಹುಟ್ಟುದರಿದ್ರ  ಸಾವು  ಚರಿತ್ರೆ

ಭೂಮಿ ಮೇಲೆ ಹಲವರುದರಿದ್ರರಾಗಿ ಹುಟ್ಟುತ್ತಾರೆ.ನಂತರಅವರ ಸಾವು ಚರಿತ್ರೆಯಾಗುತ್ತದೆ. ‘ಗೋದ್ರಾ’ ಚಿತ್ರದಲ್ಲಿ ನಾಯಕಸತೀಶ್‌ನೀನಾಸಂ  ಪಾತ್ರವುಇದೇರೀತಿಯಲ್ಲಿ ಸಾಗುತ್ತದೆ. ಕಾಶ್ಮೀರ, ಗೋದ್ರಾ ಮತ್ತುಅಯೋಧ್ಯೆ ಸಮಸ್ಯೆಗಳು ದೇಶದಲ್ಲಿಕಾಡುತ್ತಿವೆ. ಇದರ ಹಿಂದೆ ನೂರಾರು ಮುಖಗಳು ಇದೆ.ಏನು ನಡಿತಿದೆಎಂದು ಕೆಲವರಿಗೆಗೊತ್ತದೆ.ಒಂದಷ್ಟುಜನರಿಗೆ ತಿಳಿದಿಲ್ಲ. ಈ ನೂರಾರು ಮುಖದಲ್ಲಿಶೀರ್ಷಿಕೆ ಕೂಡಒಂದಾಗಿದೆ.ನಕ್ಸಲೈಟ್ ವಿಚಾರಗಳು ಬಂದು ಹೋಗುತ್ತವೆ. ಪ್ರಸಕ್ತರಾಜಕೀಯ ವ್ಯಕ್ತಿಗಳು ನಮ್ಮಂದಿಲೇ ಆರಿಸಿ, ಮುಂದೆ ನಾವು ತಿನ್ನುವಅನ್ನಕ್ಕೂ ಬೆಲೆ ಕಟ್ಟುತ್ತಾರೆ.ಇಂತಹ ಹೋರಾಟಗಳಿಗೆ ಕ್ರಾಂತಿಯಾಗಬೇಕು.ಅದುಗಾಂದಿತತ್ವಅಥವಾ ಬಂಡಾಯಆಗಿರಲೂ ಬಹುದು. ಅದಕ್ಕಾಗಿಎಂದೂ ಮುಗಿಯದಯುದ್ದವೆಂದುಅಡಿಬರಹದಲ್ಲಿ ಹೇಳಲಾಗಿದೆ.ಇವೆಲ್ಲಾದರಜೊತೆಗೆ ಕೆಲವು ಕಡೆ ನಡೆದ ನೈಜ ಘಟನೆಗಳನ್ನು  ಸನ್ನಿವೇಶಕ್ಕೆ ಬಳಸಲಾಗಿದೆ.

ಗ್ಯಾಪ್ ನಂತರ ಶ್ರದ್ದಾಶ್ರೀನಾಥ್ ನಟಿಸಿದ್ದಾರೆ.ರಕ್ಷಾಉಪನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ  ವಸಿಷ್ಟಸಿಂಹ, ಇವರೊಂದಿಗೆಅಚ್ಯುತರಾವ್,ಬಲರಾಜವಾಡಿ  ಮುಂತಾದವರು ಅಭಿನಯಿಸಿದ್ದಾರೆ.  ಆಂಧ್ರ್ರ, ಕೇರಳ, ಸಕಲೇಶಪುರ, ಭಟ್ಕಳ, ಬೆಂಗಳೂರು ಹಾಗೆಯೇ ಬೇಸಿಗೆ, ಮಳೆಗಾಲ, ಅಲ್ಲದೆತುಂಬಿದ ನದಿ ಅವಶ್ಯಕತೆಇತ್ತು. ಇವೆಲ್ಲಾಕ್ಕೆಕಾದುಚಿತ್ರೀಕರಣ ಮುಗಿಸಿರುವುದರಿಂದ ಎರಡು ವರ್ಷ ಸಮಯತೆಗೆದುಕೊಂಡಿದೆ.  ಸವಾರಿ,ಚಂಬಲ್ ಚಿತ್ರಗಳಿಗೆ ಸಹಾಯಕರಾಗಿದ್ದ ಕೆ.ಎಸ್.ನಂದೀಶ್ ಸಿನಿಮಾಕ್ಕೆಕತೆ,ಚಿತ್ರಕತೆ ಬರೆದು  ನಿರ್ದೇಶನ ಮಾಡಿರುವುದು ಹೊಸ ಅನುಭವ. ಚೇತನ್‌ಕುಮಾರ್ ಸಾಹಿತ್ಯದ ಗೀತೆಗಳಿಗೆ ಜ್ಯೂಡಸ್ಯಾಂಡಿ-ಟೋನಿಜೋಸೆಫ್-ನವೀನ್ ಸಜ್ಜು ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಶಸಿಕುಮಾರ್-ಜೇಬಜ್.ಕೆ.ಗಣೇಶ್, ಸಂಕಲನ ಶ್ರೀಕಾಂತ್ ಅವರದಾಗಿದೆ. ಜಾಕೋಬ್ ಫಿಲ್ಸ್ ಮತ್ತು ಲೀಡರ್ ಫಿಲ್ಮ್ ಪ್ರೊಡಕ್ಷನ್‌ಸಂಘಟಿತವಾಗಿ ಬಂಡವಾಳ ಹೂಡಿದ್ದಾರೆ.ಪ್ರಚಾರದ ಹಂತವಾಗಿ ಯಶಸ್ವಿ ನಿರ್ಮಾಪಕರುಗಳು ಟೀಸರ್‌ಗೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.ಅಂದುಕೊಂಡಂತೆಆದರೆಚಿತ್ರವು ಮಾರ್ಚ್ ತಿಂಗಳಲ್ಲಿ ತೆರೆಕಾಣುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,