ಸತ್ಯಘಟನೆಯ ನಿಗರ್ವ
೭೦ರ ದಶಕದಲ್ಲಿ ಬೆಂಗಳೂರಿನ ರಾಮಮೋಹನಪುರದಲ್ಲಿ ನಡೆದಂತಘೋರಘಟನೆಯ ಪ್ರೇರಣೆಯನ್ನು ತೆಗೆದುಕೊಳ್ಳಲಾಗಿದೆ. ನಿರ್ದೇಶಕ ಬಿ.ಕೆ.ಜಯಸಿಂಹಮುಸುರಿ ಬಾಲ್ಯದಲ್ಲಿಕಂಡಂತ, ಕೇಳಿರುವ ವಿಷಯಗಳನ್ನು ಆಯ್ಕೆಮಾಡಿಕೊಂಡು ‘ನಿಗರ್ವ’ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಂದು ಸಾಧುಲಕ್ಷಣಗಿರಿಎನ್ನುವದುಷ್ಟ ಸ್ವಾಮಿಅಗೋಚರವಾದ ಶಕ್ತಿ ಪಡೆಯಲು ಸಣ್ಣ ಮಕ್ಕಳನ್ನು ಸಂಮೋಹನ ಮಾಡಿ ಬಲಿ ಕೊಡುತ್ತಿದ್ದನು. ಕೊನೆಗೆ ತನಿಖೆಯಾಗಿ ಬಂದಿಸುತ್ತಾರೆ.ಕೇಸ್ ನಡೆಯುತ್ತಿರುವಾಗಲೇ ಸತ್ತು ಹೋಗುತ್ತಾನೆ. ಅದು ಹೇಗೆ ಎಂಬುದುಕುತೂಹಲವಾಗಿಸಿತ್ತು.ಇಂತಹ ಬ್ಲಾಕ್ ಮ್ಯಾಜಕ್‌ನಿಂದ ಏನೇನು ಅನಾನುಕೂಲತೆಗಳು ನಡೆಯುತ್ತವೆ. ಎಷ್ಟು ಕೆಟ್ಟದುಆಗುತ್ತದೆ. ಮೂಡನಂಬಿಕೆಗೆ ಹೇಗೆ ಜನರು ಬಲಿಯಾಗುತ್ತಾರೆ. ಇದು ನಿರ್ಮೂಲನವಾಗಬೇಕೆಂದುಸಂದೇಶದಲ್ಲಿ ಹೇಳಲಾಗಿದೆ.ಬೆಂಗಳೂರು ಮತ್ತುಒಂದು ಹಾಡನ್ನು ಹೊನ್ನಾವರದಲ್ಲಿಚಿತ್ರೀಕರಿಸಲಾಗಿದೆ. ಹನ್ನೆರಡು ನಿಮಿಷ ಗ್ರಾಫಿಕ್ಸ್ ಕಾಣಿಸಿಕೊಳ್ಳುತ್ತದೆ.
ಕಳ್ಳ ಸ್ವಾಮಿ ಪಾತ್ರದಲ್ಲಿಕೃಷ್ಣೆಗೌಡ ಅಭಿನಯಿಸಿದ್ದು, ಇದರಲ್ಲಿಅವರು ಬಂದಿಯಾಗುವವರೆಗೆತೋರಿಸಲಾಗಿ, ಐದು ಗೆಟಪ್‌ಗಳಿಗೆ ತಕ್ಕಂತೆಕಂಠದಾನ ಮಾಡಿರುವುದು ವಿಶೇಷ. ಪೋಲೀಸ್ ಅಧಿಕಾರಿಗಳಾಗಿ ಭಾರತಿಹೆಗಡೆ, ಬುಲೆಟ್‌ವಿನು ಇವರೊಂದಿಗೆಆರ್ಯನ್‌ಸೂರ್ಯ, ಹರ್ಷಿತಾಗೌಡ, ರಂಜಿತರಾವ್ ಮುಂತಾದವರು ನಟಿಸಿದ್ದಾರೆ. ವಿನುಮನಸು ಸಂಗೀತದಲ್ಲಿಎರಡು ಹಾಡುಗಳು ಇದೆ.ಆರು ಸಾಹಸಕ್ಕೆ ಥ್ರಿಲ್ಲರ್‌ಮಂಜು, ಛಾಯಾಗ್ರಹಣಗುರುದತ್‌ಮುಸುರಿ, ಸಂಕಲನವನ್ನು ನಾಗೇಂದ್ರಅರಸು ನಿರ್ವಹಿಸಿದ್ದಾರೆ. ಮುಸುರಿಕೃಷ್ಣಮೂರ್ತಿ ಫಿಲಿಂಸ್ ಮುಖಾಂತರಎನ್.ಲಲಿತಾ ನಿರ್ಮಾಣ ಮಾಡಿರುವಚಿತ್ರವುಜನವರಿ ೩೧ರಂದು ಸುಮಾರು ೮೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.