ಏಳು ಸ್ವರಗಳ ಪ್ರೇಮಕತೆಗಳು
ಚಂದನವನದಲ್ಲಿಒಂದು, ಎರಡು ಹಾಗೂ ಮೂರು ಪ್ರೇಮ ಕತೆಗಳ ಕುರಿತಂತೆ ಚಿತ್ರಗಳನ್ನು ನೋಡಿದ್ದೇವೆ. ಇಲ್ಲೋಂದುಚಿತ್ರತಂಡವು ‘ಪ್ರೇಮ ಸ್ವರ’ ಶೀರ್ಷಿಕೆಯಲ್ಲಿ ಏಳು ತರದವಿಭಿನ್ನಪ್ರೀತಿಕತೆಯನ್ನು ಹೇಳುತ್ತಿದೆ. ಸಪ್ತ ಸ್ವರಗಳಾದ ‘ಸ ರಿ ಗ ಮ ಪ ದ ನಿ’ಪ್ರತೀಕವಾಗಿ ಸಂಗೀತ, ರಿಷಬ, ಗಾನವಿ, ಮಂಜರಿ, ಪಲ್ಲವಿ, ದಮನಿ ಮತ್ತು ನಿಷಾದ ಪಾತ್ರದ ಹೆಸರಿನೊಂದಿಗೆಕಲಾವಿದೆಯರುನಟಿಸಿದ್ದಾರೆ. ಪ್ರತಿ ಸ್ವರಕ್ಕೂ ಹಣಬರೆಹವನ್ನು ಹೇಳಲಾಗಿದೆ.೨೦೦೨ ರಿಂದ ೧೭ರ ವರೆಗಿನಒಬ್ಬ ಮನುಷ್ಯನಜೀವನದಲ್ಲಿ ನಡೆದ ಸತ್ಯಘಟನೆಯನ್ನುತೆಗೆದುಕೊಂಡಿದೆ. ಈ ಪೈಕಿ ಆತನ ಬದುಕಿನಲ್ಲಿ ಬಂದುಹೋದ ಹುಡುಗಿಯೊಬ್ಬಳು ನಟಿಸಿರುವುದು ವಿಶೇಷ. ಸಿದ್ದರಾಮಯ್ಯ ಲಕ್ಷೀನರಸಿಂಹ ಚಿತ್ರಕ್ಕೆಕತೆ, ಚಿತ್ರಕತೆ, ಸಂಕಲನ, ನಿರ್ದೇಶನ, ನಿರ್ಮಾಣ ಮಾಡುವಜೊತೆಗೆ ನಾಯಕನಾಗಿ ಪಾದರ್ಪಣೆ ಮಾಡಿದ್ದಾರೆ. ಅಭಿಮಾನಿಗಳು ಎನ್‌ಟಿಆರ್, ಎಂಜಿಆರ್‌ಎಂದುಕರೆಯುವಂತೆತಾನು ಸಹ ಅದೇರೀತಿ ಕರೆಸಿಕೊಳ್ಳಬೇಕೆಂಬ ಅದಮ್ಯ ಬಯಕೆಯಿಂದಎಸ್.ಎಲ್.ಎನ್‌ಅಂತ ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿಡಾಟ ವಿಜ್ಘಾನಿ.ಸಿಎಸ್‌ಐ ಫಿಲ್ಮಿ ವರ್ಲ್ಡ್ ಸಂಸ್ಥೆ ಹುಟ್ಟುಹಾಕಿದ್ದುಇದರಲ್ಲಿಆಡಿಯೋ, ಸ್ಟುಡಿಯೋ, ಅಡಿಷನ್, ಯೂನಿಟ್, ಪ್ರೊಡಕ್ಷನ್ ಹೌಸ್, ಕ್ಯಾಮರಾ ಸಲಕರಣೆಗಳನ್ನು ವಿತರಣೆ ಮಾಡುತ್ತಿರುತ್ತಾರೆ.ಅದಕ್ಕಾಗಿಇದೇ ಹಸರಿನೊಂದಿಗೆ ಬಂಡವಾಳ ಹೂಡಿದ್ದಾರೆ.
ಮನುಷ್ಯನಜೀವನದಲ್ಲಿ ಪ್ರೀತಿಎನ್ನುವುದು ಮುಖ್ಯವಾಗಿರುತ್ತದೆ.ಅದರಲ್ಲಿಯಶಸ್ಸು ಕಂಡಕೊಳ್ಳಬೇಕೆಂದು ಕಾತುರದಿಂದಕಾದಿರುತ್ತಾನೆ. ಆದರೆ ಗೆಲುವು, ಸೋಲು ಕಂಡಲ್ಲಿಅದನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಬೇಕಾಗುತ್ತದೆ.ಏಕೆಂದರೆ ನಾವು ಕೇಳೋದನ್ನು ಪ್ರಕೃತಿಕೊಡೊಲ್ಲ. ಅದಕ್ಕಾಗಿಚಿತ್ರದಲ್ಲಿಡೈಲಾಗ್ ಹೇಳಿಸಲಾಗಿದೆ. ‘ಪ್ರತಿಯೊಬ್ಬರು ಪ್ರೀತಿಸಿ, ಪ್ರೀತಿಸಿಲ್ಲ ಅಂದರೆ ಪ್ರೀತಿಸಲು ಪ್ರಯತ್ನ ಮಾಡಿ, ಬಹುಶ: ಪ್ರೀತಿ ಮಾಡೇಇಲ್ಲಎನ್ನುವುದಾದರೆಜೀವನದಲ್ಲಿ ಏನೋ ಕಳೆದುಕೊಳ್ತೀರಾ. ಬದುಕಿನಲ್ಲಿಎಲ್ಲದಕ್ಕೂ ಕೊನೆ ಇರುತ್ತದೆ.ಆದರೆ ಪ್ರೀತಿಗೆಅಂತ್ಯಇರುವುದಿಲ್ಲ’.ಇಲ್ಲಿರುವ ಪಾತ್ರಗಳು ನಾಯಕ ನಾಯಕಿಆಗಿರುವುದಿಲ್ಲ. ನೋಡುಗರಿಗೆದೃಶ್ಯಗಳುತಾನೇ ಹೀರೋ, ಹೀರೋಯಿನ್‌ಎನ್ನುವಂತೆ ಭಾಸವಾಗುತ್ತದೆ.ಇಂತಹ ಸನ್ನಿವೇಶಗಳು ಸಿನಿಮಾದಲ್ಲಿ ಪಯಣದಂತೆ ಬರುತ್ತದೆ.
ವಿಜಯರಂಜಿನಿ, ನಿರೋಷ, ಅಮೃತ, ಲಕ್ಷೀ, ಕೃತಿಕ, ನೀತು ಮತ್ತುರಂಜಿತ ನಾಯಕಿಯರು. ಖಳನಾಗಿ ಅಪ್ಪಿ, ಇವರೊಂದಿಗೆ ಶಾಂತಮ್ಮ, ಶಿವಮೊಗ್ಗ ರಾಮಣ್ಣ, ಕೃಷ್ಣಪ್ಪ, ರಮೇಶ್, ಸುಬ್ರಮಣ್ಯ, ಯಶವಂತ್‌ರಾವ್ ಮುಂತಾದವರು ನಟಿಸಿದ್ದಾರೆ.ಏಳು ಹಾಡುಗಳಿಗೆ ಕಮಲೇಶ್.ಪಿ.ಎ ಸಂಗೀತವಿದೆ.ಛಾಯಾಗ್ರಹಣ ಹರೀಶ್-ಶಿವು-ಮಧು-ಮಂಜುನಾಥ್, ನೃತ್ಯ ದಿವಾಕರ್, ಸಾಹಸ ಶ್ರೀರಾಮ್ ನಿರ್ವಹಿಸಿದ್ದಾರೆ. ಶಿವಮೊಗ್ಗ, ಸಕಲೇಶಪುರ, ಮಡಕೇರಿ, ತುಮಕೂರು ಹಾಗೂ ಬೆಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಮಾನಸ-ವಿಜಯ್‌ಕುಮಾರ್-ಹರೀಶ್ ಸಹ ನಿರ್ಮಾಪಕರಾಗಿರುವಯುಎ ಪ್ರಮಾಣ ಪತ್ರ ಪಡೆದುಕೊಂಡರುವಚಿತ್ರವು ಪ್ರೇಮಿಗಳ ದಿನದಂದುಅಂದರೆ ಫೆಬ್ರವರಿ ೧೪ರಂದು ಬಿಡುಗಡೆಯಾಗಲಿದೆ.