ಕಾಣದಂತೆ ಮಾಯವಾದನು ಬಿಡುಗಡೆ ಮೋಕ್ಷ
‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದಚಿತ್ರಕ್ಕೆರಾಜ್ ಪತ್ತಿಪಾಟಿಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ ಪವರ್‌ಇರುತ್ತದೆ. ಇದರಲ್ಲಿ ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ಭಟ್ಟರಕ್ಯಾಂಪಿನಲ್ಲಿ ಸಹಾಯಕ ನಿರ್ದೇಶನ, ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ನಾಯಕ.
ಸಿಂಧೂಲೋಕನಾಥ್ ಎನ್‌ಜಿಓದಲ್ಲಿ ಕೆಲಸ ಮಾಡುತ್ತಾ,
ನಿರ್ಗತಿಕರಿಗೆಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿ ನಾಯಕಿ.ಸೀನಿಯರ್ ಆತ್ಮವಾಗಿಅಚ್ಯುತಕುಮಾರ್, ಖಳನಟ ಉದಯ್‌ಮರಣ ನಂತರ, ಅದೇ ಪಾತ್ರಕ್ಕೆ ಭಜರಂಗಿ ಲೋಕಿ ವಿರಾಮದ ನಂತರ ಕಾಣಿಸಿಕೊಂಡಿದ್ದಾರೆ.ಟ್ರಕ್ ಚಾಲಕ, ಆಕಸ್ಮಿಕವಾಗಿ ಲಕ್ಷ ಸಿಗುತ್ತದೆ. ಅದುಎಲ್ಲಿಂದ ಬಂತುಎಂದು ತಿಳಿಯುವಷ್ಟರಲ್ಲೆ ಕಷ್ಟಕ್ಕೆ ಸಿಲುಕಿ ಅದರಿಂದ ತಪ್ಪಿಸಿಕೊಂಡು ಹೂರಬರುವ ಹಾಸ್ಯ ಪಾತ್ರಕ್ಕೆಧರ್ಮೇಂದ್ರ, ತಾಯಿಯಾಗಿ ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸುಜ್ಘಾನ್‌ಮೂರ್ತಿ, ಸಂಕಲನ ಸುರೇಶ್‌ಆರುಮುಗಮ್, ಸಾಹಸ ವಿನೋಧ್ ನಿರ್ವಹಿಸಿದ್ದಾರೆ. ನಿರ್ದೇಶಕರತಂದೆಚಂದ್ರಶೇಖರ್‌ನಾಯ್ಡು, ಇವರೊಂದಿಗೆ ಸೋಮ್‌ಸಿಂಗ್,ಪುಷ್ಟಸೋಮ್‌ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಇದೇಚಿತ್ರವನ್ನುತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡುವ ನಿರ್ಮಾಪಕರಿಗೆ ಹಿಂದಿ ಭಾಷೆಗೆ ಬೇಡಿಕೆ ಬಂದಿದೆಯಂತೆ.೨೦೧೬ರಲ್ಲಿ ಶುರುವಾಗಿದ್ದಚಿತ್ರವುಕೊನೆಗೂ ಇದೇ ೩೧ರಂದು ರಾಜ್ಯಾದ್ಯಂತಬಿಡುಗಡೆಯಾಗುತ್ತಿದೆ.