Naanu Nan Jaanu.Film Press Meet.

Thursday, January 16, 2020

289

ನಾನು ನನ್ಜಾನುಗೆ ಹಿರಿಯರ ಶುಭ ಹಾರೈಕೆ

ಬದುಕೇಚೆಂದಇನ್ನುಅಂತಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್‌ಜಾನು’ ಚಿತ್ರದಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮಕತೆಜೊತೆಗೆ ತೆಳು ಹಾಸ್ಯಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋಜನರು ಕಡೆಗಣಿಸಿದರೂ ಕೊನೆಗೂ ತಾನುಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆಎಲ್ಲವನ್ನು ಕಳೆದುಕೊಂಡಿರುತ್ತಾನೆ. ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಕೆ ಸಿಗೋಲ್ಲ. ಸಾಧನೆ ಮಾಡಿದ ಮೇಲೆ ಸಿಗೋಬೆಲೆ ಸತ್ತರೂಕಮ್ಮಿಆಗೊಲ್ಲ. ಸಾಧನೆ ಮಾಡೋ ಮುಂಚೆ ಈ ಸಮಾಜಆಡೋ ಮಾತಿಂದ ನಾವು ಏನೆಲ್ಲಾ ಕಳೆದುಕೊಳ್ತವೆ ಎಂಬುದು ಸಾರಾಂಶವಾಗಿದೆ. ಪ್ರಚಲಿತ ವಾಸ್ತವ ಜಗತ್ತನ್ನುತೋರಿಸಲಾಗಿದೆ.ಇದರಜೊತೆಗೆ ಪ್ರೀತಿಯ ಭಾವನೆಗಳ ಸನ್ನಿವೇಶಗಳು ಬರಲಿದೆ. ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡಿರುವ ಶ್ರೀಹರಿ ರಚನೆ, ನಿರ್ದೇಶನ ಮಾಡಿರುವುದು ಹೊಸ ಅನುಭವ.  ಕರ್ನಾಟಕದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಏಳು ಹಾಡುಗಳಿಗೆ ರಾಗ ಒದಗಿಸಿರುವ ಶ್ರೀಧರ್‌ಕಶ್ಯಪ್ ಅವರಿಗೆ  ಮೂರನೇಚಿತ್ರವಾಗಿದೆ.

ಬೇಜವಬ್ದಾರಿ ಹುಡುಗ, ಅತ್ಯುನ್ನುತ ಕೆಲಸ ಸಿಕ್ಕಿ ಜವಬ್ದಾರಿ ಬಂದಾಗಅದನ್ನು ಹೇಗೆ ನಿಭಾಯಿಸುತ್ತಾನೆಎನ್ನುವಎರಡು ಶೇಡ್‌ಗಳಲ್ಲಿ ಮನು ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಜೊತೆಗೆಆಕ್ಷನ್, ಕಾಮಿಡಿತೋರಿಸಲು ಅವಕಾಶ ಸಿಕ್ಕಿದೆಯಂತೆ. ಕುಟುಂಬದ ಸಲುವಾಗಿ ಯಾವುದೇತ್ಯಾಗಕ್ಕೂ ಸಿದ್ದಳಾದಾಗ ಅಂತಿಮವಾಗಿಜಯ ಸಿಗುತ್ತದಾ ಎನ್ನುವಉಡುಪಿಯರುತ್ವಿಕಾಶೆಟ್ಟಿ ನಾಯಕಿ.ಇವರೊಂದಿಗೆ ಮಜಾಭಾರತದಕಲಾವಿದರು ಮತ್ತುಕತೆಗೆತಿರುವುಕೊಡುವ ಮಹತ್ವದ ಪಾತ್ರದಲ್ಲಿ ಸೃಜನ್‌ಲೋಕೇಶ್  ಅಭಿನಯಿಸಿರುವುದು ವಿಶೇಷ. ನೋಡುಗರಿಗೆಅವರ ಹಳೆಯ ಲವ್ ಸ್ಟೋರಿ ನೆನಪಿಗೆ ಬರುತ್ತದಂತೆ. ಛಾಯಾಗ್ರಹಣ ಆನಂದ್‌ಇಳಯರಾಜ-ಮಾರವರ್ಮನ್, ಸಂಕಲನ ವಿಶ್ವ.ಎಂ.ಎನ್, ಸಾಹಸ ಅಪ್ಪುವೆಂಕಟೇಶ್, ನೃತ್ಯ ಹೇಮಂತ್‌ರಾಜ್, ವಿಎಫ್‌ಎಕ್ಸ್ ಪ್ರಣವ್‌ಅವರದಾಗಿದೆ. ಬಿಲ್ಡರ್‌ಕೆಂಪೆಗೌಡ.ಎನ್ ಹಾಗೂ ಕಾಸ್‌ಮೋಟಿಕ್ಸ್ ಶಾಪ್ ಮಾಲೀಕ ಹರೀಶ್.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ದೇಶಕರುಗಳಾದ ಸಿ.ವಿ.ಶಿವಶಂಕರ್, ಭಗವಾನ್, ಭಾರ್ಗವ ಮತ್ತುತಿಪಟೂರುರಘುಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು.

 

 

Copyright@2018 Chitralahari | All Rights Reserved. Photo Journalist K.S. Mokshendra,