ಮತ್ತೆಉದ್ಬವಕ್ಕೆದರ್ಶನ್ ಸಾಥ್
ಹೊಸ ಪ್ರತಿಭೆಗಳು, ನಿರ್ಮಾಪಕರಿಗೆ ಪ್ರೋತ್ಸಾಹಕೊಡುತ್ತಿರುವದರ್ಶನ್ ‘ಮತ್ತೆಉದ್ಬವ’ ಚಿತ್ರದಟ್ರೈಲರ್‌ನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಮಟ್‌ಆಗಿದೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆ ‘ಮತ್ತೆಉಧ್ಭವ’ ಆಗಿದೆ.ಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾರ್ಪೋರೇಶನ್ ಲೆವಲ್‌ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗನಾಗಿ ನಾಯಕ. ವಕೀಲನಾಗಿ ಮಂಡ್ಯಾರವಿ ಕಿರಿಮಗ. ಅದೇ ಗುಣವುಳ್ಳ ಮತ್ತು ಪರಿಸರ ಪ್ರೇಮಿ, ರಾಜಕಾರಿಣಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಮಿಲನನಾಗರಾಜು ನಾಯಕಿ. ಶೃಂಗಾರಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಸಿದ್ದಾರೆ.ಇವರ ಆಪ್ತ ಭಕ್ತೆಯಾಗಿ ಶುಭರಕ್ಷಾ ನಟನೆಇದೆ.
ಎರಡೂಚಿತ್ರಕ್ಕೂಕತೆ ಬರೆದಿರುವ ನಿರ್ದೇಶಕಕೂಡ್ಲುರಾಮಕೃಷ್ಣ ಹೇಳುವಂತೆ ಎಲ್ಲೆ ಹೋದರೂಇದೇಚಿತ್ರದಕುರಿತಂತೆ ಕೇಳುತ್ತಾರೆ. ಅದಕ್ಕಾಗಿಯೇ ಸಿನಿಮಾವನ್ನು ಮಾಡಬೇಕಾಯಿತು.ಡ್ಯಾನ್ಸ್, ಫೈಟು, ಕಾಮಿಡಿಇರುವುದರಿಂದ ಮಾಸ್‌ಚಿತ್ರ ಮಾಡಿದ ನೆಮ್ಮದಿ ಸಿಕ್ಕಿದೆ. ಪಾತ್ರಗಳನ್ನು ಹಾಗಯೇ ಉಳಿಸಿಕೊಂಡು ಕಲಾವಿದರನ್ನು ಬದಲಾವಣೆ ಮಾಡಿಕೊಂಡಿದೆ. ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ, ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಪ್ರಸ್ತುತರಾಜಕಾರಣ ಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕುಎನ್ನುತ್ತಾರೆ.
ಉಳಿದಂತೆ ಸುಧಾಬೆಳವಾಡಿ,ಅವಿನಾಶ್, ಪಿ.ಡಿ.ಸತೀಶ್, ಗಿರೀಶ್‌ಭಟ್, ಚೇತನ್‌ಚಮನ್, ನರೇಶ್, ಶಂಕರ್‌ಅಶ್ವಥ್, ನಿರಂಜನ್‌ನಟಿಸಿದ್ದಾರೆ. ಜಯಂತ್‌ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ, ಮೋಹನ್‌ಛಾಯಾಗ್ರಹಣವಿದೆ. ಕಿರುತೆರೆ ಸ್ಟಾರ್ ನಿರ್ದೇಶಕ ಟಿ.ಎನ್.ಸೀತಾರಾಮ್ ಮುಂತಾದಗಣ್ಯರುಕಾರ್ಯಕ್ರಮದಲ್ಲಿ ಹಾಜರಿದ್ದರು. ನಿತ್ಯಾನಂದಭಟ್,ಸತ್ಯ, ಮಹೇಶ್‌ಮುದ್ಗಲ್ ಮತ್ತುರಾಜೇಶ್‌ಜಂಟಿಯಾಗಿ ವೈಟ್ ಪ್ಯಾಂಥರ‍್ಸ್‌ಕ್ರಿಯೇಟೀವ್ ಹಾಗೂ ಇನ್‌ಫಾನಿಟಿ ಫಿಲ್ಸ್, ಮುಂಬಯಿ ಇದರ ಮೂಲಕ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಧೀರಜ್‌ಎಂಟರ್ ಪ್ರೈಸಸ್‌ನ ಮೋಹನ್‌ದಾಸ್‌ಪೈಮೂಲಕ ಸಿನಿಮಾವು ಫೆಬ್ರವರಿ ಏಳರಂದು ತೆರೆಗೆ ಬರಲಿದೆ.