ಗಡಿನಾಡಿನಲ್ಲಿ ಭಾಷಾಭಿಮಾನ
ಗಡಿನಾಡಿನ ಸಮಸ್ಯೆಗತಕಾಲದಿಂದಲೂ ನಡೆಯುತ್ತಾ ಬಂದಿದೆ.ಯಾರೇಅಧಿಕಾರಕ್ಕೂ ಬಂದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಅಲ್ಲಿನ ಕಷ್ಟ, ತೊಂದರೆ, ಕನ್ನಡ ಭಾಷೆ, ನಾಡು ನುಡಿಯ ಹಿರಿಮೆ ಬಗ್ಗೆ ತಿಳಿಸಲು ‘ಗಡಿನಾಡು’ ಚಿತ್ರವು ಸಿದ್ದಗೊಂಡಿದೆ.ಬೆಳಗಾವಿ ಗಡಿ ಬಗ್ಗೆ ಕರ್ನಾಟಕ-ಮಹಾರಾಷ್ಟ್ರಜನರಲ್ಲಿತಂಟೆತಕರಾರುಇದೆ.ಇದನ್ನು ಬಗೆಹರಿಸಲು ಸರ್ಕಾರದಿಂದಲೂ ಸಾದ್ಯವಾಗುತ್ತಿಲ್ಲ. ಆ ಭಾಗದ ತೊಂದರೆಗಳು ಆಗುವ ಘಟನೆಗಳ ಸುತ್ರ ಸಿನಿಮಾದಕತೆಇದೆ.ಕನ್ನಡ ಹುಡುಗ-ಮರಾಠಿ ಹುಡುಗಿ ನಡುವಿನ ಪ್ರೇಮಕತೆಯೇ ಹೈಲೈಟ್‌ಆಗಿದೆ. ವಿದ್ಯಾಭ್ಯಾಸ ಮುಗಿಸಿ ಅಲ್ಲಿಗೆ ಹೋಗುವ ಕಥಾನಾಯಕ, ಅಲ್ಲಿನಗಡಿ ಸಮಸ್ಯೆಕಂಡು ‘ಗಡಿನಾಡ ಸೇನೆ’ ಕಟ್ಟುತ್ತಾನೆ. ಈ ಮಧ್ಯ್ಯೆ ಪ್ರೀತಿಯ ಬಲೆಗೆ ಬೀಳುತ್ತಾನೆ.
ಮುಂದೆಏನಾಗುತ್ತದೆಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕು.ಚಿಕ್ಕೋಡಿ,ಅಥಿಣಿ, ಬೆಳಗಾವಿ ಮುಂತಾದಕಡೆಚಿತ್ರೀಕರಣ ನಡೆಸಲಾಗಿದೆ.
ಪ್ರಭುಸೂರ್ಯ ನಾಯಕ. ಸಂಚಿತಾಪಡುಕೋಣೆ ನಾಯಕಿ.ಇವರೊಂದಿಗೆಚರಣ್‌ರಾಜ್, ಶೋಭರಾಜ್, ದೀಪಕ್‌ಶೆಟ್ಟಿ, ರಘುರಾಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಘುಸೀರುಂಡೆ, ಮಮತಾ, ಪುಷ್ಪ ಮುಂತಾದವರು ನಟಿಸಿದ್ದಾರೆ. ನಾಗ್‌ಹುಣಸೋಡ್‌ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿಗೆ ಎಲ್ವಿನ್‌ಜೋಶ್ವಾ ಸಂಗೀತ, ಗೌರಿವೆಂಕಟೇಶ್‌ಛಾಯಾಗ್ರಹಣ, ವೆಂಕಿ ಸಂಕಲನವಿದೆ.ಅದೇ ಭಾಗದ ನಿವಾಸಿ ವಸಂತ್‌ಮುರಾರಿ ದಳವಾಯಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅಲುಗಾಡದ ಬಂಡೆಎಂದುಅಡಿಬರಹದಲ್ಲಿಇರುವಂತೆಚಿತ್ರಕ್ಕೆ ಪ್ರಾರಂಭದಿಂದಇಲ್ಲಿಯವರೆಗೂ ಬೆದರಿಕೆ ಕರೆಗಳು ಬಂದರೂ, ಅದನ್ನು ಪರಿಗಣಿಸಿದೆ ತಂಡವುಧೈರ್ಯ ಮಾಡಿ ಶುಕ್ರವಾರದಿಂದಜನರಿಗೆತೋರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.