Naanu Mathu Gunda.Film Success Meet.

Tuesday, January 21, 2020

298

ಗುಂಡ ಮತ್ತು ಶಿವರಾಜ್.ಕೆ.ಆರ್.ಪೇಟೆ

ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ   ಶಿವರಾಜ್.ಕೆ.ಆರ್.ಪೇಟೆ  ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ  ‘ನಾನು ಮತ್ತುಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡಅಂದರೆ ನಾಯಿ. ಇದುಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇಇದನ್ನೆಇಟ್ಟುಕೊಂಡುಯಾವರೀತಿದಂಧೆ ಮಾಡುತ್ತಾರೆಂದು ಹೇಳಲಾಗಿದೆ.  ನಾಯಕ  ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ನಾಯಿಯನ್ನುಅಕ್ಕರೆಯಿಂದ ಹೇಗೆ ನೋಡಿಕೊಳ್ಳುತ್ತಿದರು, ಅವರ ಬದುಕಿನಲ್ಲಿ  ಶ್ವಾನ ಎಷ್ಟು  ಮಹತ್ವದ್ದಾಗಿತ್ತು.  ಪ್ರೀತಿಸುವ ಪ್ರಾಣಿಗಳು  ವ್ಯಕ್ತಿಗಳ ಜೀವನದಲ್ಲಿಏನೆಲ್ಲ ಪಾತ್ರ ವಹಿಸುತ್ತವೆ.  ಅವು ದೂರವಾದಾಗಎಷ್ಟೆಲ್ಲಾ ನೋವುಗಳನ್ನು ಅನುಭವಿಸುತ್ತಾರೆಎಂಬಂತಹ ಅಂಶಗಳು ಇರುವುದರಿಂದಅಡಿಬರಹದಲ್ಲಿಒಂದು ಮರೆಯದಕಥೆಅಂತ ಹೇಳಿಕೊಂಡಿದೆ. ತಿಪಟೂರಿನಲ್ಲಿ ನಡೆದ ನೈಜಘಟನೆಯನ್ನುತೆಗೆದುಕೊಂಡಿದೆ.

        ಹೆಂಡತಿ ಪಾತ್ರದಲ್ಲಿ ಅಭಿನಯಿಸಿರುವ ನಾಯಕಿ ಸಂಯುಕ್ತಹೂರನಾಡುರಿಯಲ್‌ದಲ್ಲಿ ಪ್ರಾಣಿಪ್ರಿಯೆ, ಗುಂಡ ಹೆಸರಿನ ನಾಯಿ ಕೂಡಅವರ ಮನೆಯಲ್ಲಿಇತ್ತಂತೆ. ಅದುಅಗಲಿದಾಗಅವರು ಅನುಭವಿಸಿದ ನೋವುಗಳು ಕೂಡದೃಶ್ಯದಲ್ಲಿ ಬಂದಿದೆ.  ಮೇಲಾಗಿ ಪೂರ್ತಿ ಸಿನಿಮಾದ ಸಂಭಾಷಣೆಯು  ಹಾಸನ ಭಾಷೆಧಾಟಿಯಲ್ಲಿಇರುವುದು ವಿಶೇಷ.  ಕೆಲವು ದೃಶ್ಯಗಳಲ್ಲಿ  ಶ್ವಾನವುಡಬ್ಬಿಂಗ್‌ಕೂಡ ಮಾಡಿದೆಯಂತೆ. ಸಕಲೇಶಪುರ, ಹಾಸನ, ಅರಸಿಕೆರೆಯಲ್ಲ್ಲಿ ಚಿತ್ರೀಕರಣ ನಡೆಸಲಾಗಿದೆ.ಶ್ರೀನಿವಾಸ್‌ತಮ್ಮಯ್ಯಆಕ್ಷನ್‌ಕಟ್ ಹೇಳಿದ್ದಾರೆ.ತಾರಗಣದಲ್ಲಿಜಿ.ಗೋವಿಂದೇಗೌಡ, ಜಿಮ್‌ರವಿ, ರಾಕ್‌ಲೈನ್‌ಸುಧಾಕರ್ ಮುಂತಾದವರು ನಟಿಸದ್ದಾರೆ. ರೋಹಿತ್‌ರಮನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಕಾರ್ತಿಕ್‌ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.ಕತೆ ವಿವೇಕನಂದಾ, ಕಲಾವಿದರ ಮಾತುಗಳಿಗೆ ಶರತ್‌ಚಕ್ರವರ್ತಿ  ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಹಣಚಿದಾನಂದ, ಸೌಂಡ್‌ಡಿಸೈನ್  ನವೀನ್‌ಕುಮಾರ್,  ಸಂಕಲನ ಕೆ.ಎಂ.ಪ್ರಕಾಶ್,  ಸಾಹಸ ಕುಂಗುಫುಚಂದ್ರು, ಅವರದಾಗಿದೆ. ರಘುಹಾಸನ್ ನಿರ್ಮಾಣ ಮಾಡಿರುವಚಿತ್ರವು ೨೪ರಂದು ರಾಜ್ಯದ್ಯಂತತೆರೆಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,