Benkiyali Aralida Hoovu.Film Press Meet.

Tuesday, January 21, 2020

276

ಬೆಂಕಿಯಲ್ಲಿ ಅರಳಿದ ಹೂವು

‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದರೆ ತಕ್ಷಣ ಕೆ.ಬಾಲಚಂದರ್, ಸುಹಾಸಿನಿ, ಕಮಲಹಾಸನ್‌ಕಣ್ಣ ಮುಂದೆ ಬರುತ್ತಾರೆ.ಇದನ್ನು ಹೇಳಲು ಪೀಠಿಕೆಇದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದಗೊಂಡಿದೆ.ಆ ಚಿತ್ರವುಮಹಿಳೆಯೊಬ್ಬರು ಕುಟುಂಬದ  ನೊಗವನ್ನು ಹೊರುವಕತೆಯಾಗಿತ್ತು.  ಇದರಲ್ಲಿ ಮಧ್ಯಮ ವರ್ಗದ ನೊಂದ ಹೆಣ್ಣಿನದೈನಂದಿನ ಬದುಕಿನನೈಜಘಟನೆಯನ್ನುತೆಗೆದುಕೊಂಡಿದೆ. ನಾಯಕ ಮತ್ತು ನಿರ್ಮಾಪಕ  ವಿಶು.ಈ.ಆಚಾರ್‌ಉದ್ಯಮಿ, ಪ್ರಾರಂಭದಲ್ಲಿಒಂದಷ್ಟು ಕಹಿ ಅನುಭವಗಳು ಆಗಿದ್ದವು, ಅಲ್ಲದೆಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ  ನಡೆಯುವ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯಗಳನ್ನು  ಕಂಡವರು. ಇದೆಲ್ಲಾವನ್ನುಜನರಿಗೆತೋರಿಸುವ ಹಂಬಲದಿಂದ ಯೋಚಿಸಿದ್ದೆ ಇಲ್ಲಿಯವರೆಗೂತಂದು ನಿಲ್ಲಿಸಿದೆ. ಜೊತೆಗೆ ನಿರ್ದೇಶಕ ದೇವಿ.ಶ್ರೀ.ಪ್ರಸಾದ್ ಹಾಸನದಲ್ಲಿ ನೋಡಿರುವ, ಕೇಳಿರುವ ಅಂಶಗಳನ್ನು ಚಿತ್ರರೂಪಕ್ಕೆತಂದಿದ್ದಾರೆ. 

ಬಿಗ್‌ಬಾಸ್‌ನಿಂದಹೊರಬಂದುಮೊದಲು ಸಹಿ ಮಾಡಿದ್ದುಇದೇ ಸಿನಿಮಾಕ್ಕೆಎಂದು ನಾಯಕಿಅನುಪಮಗೌಡ ಹೇಳಿಕೊಂಡಿದ್ದಾರೆ.ಅಮ್ಮನುಕೂಡಗಾರ್ಮೆಂಟ್ಸ್‌ದಲ್ಲಿ ಕೆಲಸ ಮಾಡುತ್ತಿದ್ದು, ಅದಕ್ಕಾಗಿಜೀವನಕ್ಕೆ ಹತ್ತಿರವಾದ ಪಾತ್ರವಾಗಿದೆ. ಚಿಕ್ಕವಯಸ್ಸಿಗೆ ಉಡಾಳ ಗಂqನೊಡನೆಕ್ಲೇಶದಬಾಳ್ವೆ ನಡೆಸುತ್ತಾ ಸಂಸಾg ಸಾಗಿಸುವ  ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆಂದು  ಖುಷಿ ಹಂಚಿಕೊಂಡರು.  ಧ್ವನಿಸಾಂದ್ರಿಕೆ ಅನಾವರಣಗೊಳಿಸಿದ ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಮಾತನಾಡಿ ಹೆಣ್ಣುಅಸಹಾಯಕತೆಯಿಂದಇರಬಾರದು. ಇತ್ಯಾರ್ಹಕ ಮೌಲ್ಯದಲ್ಲಿ, ಸುಖದ ಬದುಕಿಗಾಗಿ ಹೊರಗೆ ಬರಬೇಕು. ವಿ.ಮನೋಹರ್ ಸಂಗೀತ ಸಂಯೋಜಿಸುತ್ತಾರೆಂದುತಿಳಿದು ಸಂತಸದಿಂದ ಹಣ್ಣಿನ ಬವಣೆ ಬಗ್ಗೆ ಹಾಡು ಬರೆಯಲಾಗಿದೆ.ಇನ್ನೆನಿದ್ದರೂಜನರುಒಪ್ಪಬೇಕುಅಂತಾರೆ.

ಶೀರ್ಷಿಕೆ ನಿಜವಾಗಲೂ ಈಗಿನ ನಿರ್ಮಾಪಕರಿಗೆಅನ್ವಯಿಸುತ್ತದೆ.ಅವರು ಬೆಂಕಿಯಲ್ಲಿ ಬೀಳದೆ, ಬಂಗಾರದಲ್ಲಿ ಬಿದ್ದುಆಭರಣವಾಗಲಿ.ಪೋಸ್ಟರ್ ಕ್ಲಾಸಿಕ್ ಆಗಿದೆ.ಕನ್ನಡಚಿತ್ರವನ್ನು ನಿಜವಾಗಿಯೂ ನೋಡುವವರುಆಟೋಚಾಲಕರು, ಗಾರ್ಮೆಂಟ್ಸ್, ಹೋಟೆಲ್ ನೌಕರರು, ಕಾರ್ಮಿಕರು.ಇವರುಗಳು ಮಾಲ್‌ಗೆ ಹೋಗುವ ಶಕ್ತಿ ಇರುವುದಿಲ್ಲ. ಏನಿದ್ದರೂಚಿತ್ರಮಂದಿರವನ್ನುನಂಬಿಕೊಂಡಿರುತ್ತಾರೆ.ಆದಕಾರಣಟಾಕೀಸ್‌ನನ್ನು ಸುವ್ಯವಸ್ಥಿತವಾಗಿಡಬೇಕೆಂದು ಮಾಲೀಕರಿಗೆ ಕಿವಿಮಾತು ಹೇಳಿದರು.ಇವರ ಮಾತಿಗೆದಸ್‌ಕತ್ ಹಾಕಿದಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಎಸ್.ಕೃಷ್ಣಗೌಡ ಹೇಳುವಂತೆ ಇಂದು ಹಲವು ಚಿತ್ರಮಂದಿರಗಳು ಗುತ್ತಿಗೆಆಧಾರದ ಮೇಲೆ ನಡೆಯುತ್ತಿದೆ.ಮೂಲ ಮಾಲೀಕರುಇಲ್ಲದೆಇರುವುದರಿಂದ ಇವರುಗಳು ಹೆಚ್ಚಿನಜವಬ್ದಾರಿ ಹೊತ್ತುಕೊಳ್ಳದೆ ವ್ಯವಹಾರದಕಡೆಗೆ ಗಮನ ಹರಿಸುವುದರಿಂದಈಗೆಲ್ಲಾಆಗುತ್ತದೆ.ಇದರ ಬಗ್ಗೆ ಒಂದು ಮಟ್ಟದ ಹೋರಾಟ ಶುರು ಮಾಡಿದ್ದೇನೆಎಂದರು.

ಸಾಹಿತಿಡಾ.ನಾಗೇಂದ್ರಪ್ರಸಾದ್,  ಖಳನಟ ಲಕ್ಷಣ್, ಕಲಾವಿದರು, ತಂತ್ರಜ್ಘರು ಉಪಸ್ತಿತರಿದ್ದರು. ಇದಕ್ಕೂ ಮುನ್ನ ಸಿನಿಮಾದ ಹಾಡುಗಳು,  ತುಣುಕುಗಳುದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿತು.

 

 

Copyright@2018 Chitralahari | All Rights Reserved. Photo Journalist K.S. Mokshendra,