ಲೋಕಲ್ ಪ್ರೀತಿಕಥೆ
ನೇಹಎನ್ನುವುದುಎಲ್ಲಿ ಬೇಕಾದರೂ ಅರಳಬಹುದು.ಅದಕ್ಕೆಇಂತಹುದೇ ಸ್ಥಳ ಇರಬೇಕೆಂದು ಹೇಳಲಿಕ್ಕೆ ಆಗುವುದಿಲ್ಲ. ಅದರಂತೆ ‘ಲೋಕಲ್‌ಟ್ರೈನ್’ ಎನ್ನವ ಸಿನಿಮಾವುರೈಲಿನಲ್ಲಿ ಪ್ರಯಾಣ ಮಾಡುವಾಗ ಹುಟ್ಟುವ ಪ್ರೇಮಕತೆಯನ್ನು ಹೇಳಲು ಹೊರಟಿದೆ. ಕಾಲ್ಪನಿಕಶಹರದಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೈನ್‌ದಲ್ಲಿಸಂಕೀರ್ಣ ಪ್ರಯಾಣಿಕರ ಪೈಕಿ ಅನುದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇರುತ್ತಾರೆ. ಇದನ್ನೆಆಧಾರವಾಗಿಟ್ಟುಕೊಂಡುಇದರಲ್ಲಿ ಬರುವ ಹಲವು ಸನ್ನಿವೇಶಗೊಂದಿಗೆ ನವಿರಾದ ಲವ್ ಸ್ಟೋರಿತೆರೆದುಕೊಳ್ಳುತ್ತದೆ. ಪೂರಕವಾಗಿಚಿನ್ನಚಿನ್ನ ಆಸೆ ಎಂದುಅಡಿಬರಹದಲ್ಲಿದೆ. ಶೀರ್ಷಿಕೆ ಅದೇಆಗಿದ್ದರೂ ದೃಶ್ಯಗಳು ಹೈಕ್ಲಾಸ್‌ಟ್ರೈನ್‌ತರಹ ಬಂದಿದೆಯಂತೆ.ನಿರ್ದೇಶಕರುದ್ರಮುನಿ.ವೈ.ಎನ್ ಫಸ್ಟ್ ಪ್ರಿಂಟ್ ಬರುವತನಕ ಕೆಲಸ ಮಾಡಿಕೊನೆಯಲ್ಲಿತಂಡದೊಂದಿಗೆ ಭಿನ್ನಾಭಿಪ್ರಾಯಮಾಡಿಕೊಂಡುಚಿತ್ರದಿಂದ ಹೊರಬಂದಿದ್ದಾರೆ.ಇವರಜಾಗಕ್ಕೆ ಸಹ ನಿರ್ದೇಶPಮಾರುತಿಜವಬ್ದಾರಿ ಹೊತ್ತುಕೊಂಡಿದ್ದಾರೆ.
ಮದರಂಗಿಖ್ಯಾತಿಯಡಾರ್ಲಿಂಗ್ ಕೃಷ್ಣ ಕಾಲೇಜು ಹುಡುಗನಾಗಿ ನಾಯಕ.ಮಂಗಳೂರಿನ ಎಸ್ತರ್‌ನರೋನ ಮತ್ತು ಬಾಂಬೆ ಮೂಲದ ಮೀನಾಕ್ಷಿದೀಕ್ಷಿತ್ ನಾಯಕಿಯರು.ಇವರೊಂದಿಗೆ ಖಳನಾಗಿ ಭಜರಂಗಿಲೋಕಿ, ನಗಿಸಲು ಟೆನ್ನಿಸ್‌ಕೃಷ್ಣ, ಸಾಧುಕೋಕಿಲ, ಸೆಂಟಿಮೆಂಟ್‌ಗಾಗಿ ಸುಚೇಂದ್ರಪ್ರಸಾದ್, ಗುರುದತ್ ಸೇರಿದಂತೆ ೬೫ಕ್ಕೂ ಹೆಚ್ಚು ಪೋಷಕ ಪಾತ್ರಗಳು ಇರುವುದು ವಿಶೇಷ.ಜಯಂತ್‌ಕಾಯ್ಕಣಿ ಸಾಹಿತ್ಯದಐದು ಗೀತೆಗಳಿಗೆ ಅರ್ಜುನ್‌ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ತೂಕ ಬರಲು ಹಿರಿಯ ಕೋರಿಯಾಗ್ರಾಫರ್‌ಗಳಾದ ಚಿನ್ನಿಪ್ರಕಾಶ್, ರಾಜುಸುಂದರ್ ಮತ್ತುಗಣೇಶ್ ಕೆಲಸ ಮಾಡಿರುವುದು ಮತ್ತೋಂದು ಹಿರಿಯೆಯಾಗಿದೆ. ಈ ಪೈಕಿ ಒಂದು ಹಾಡಿಗೆ ೨೦೦ ಹೆಚ್ಚು ನೃತ್ಯಕಲಾವಿದರನ್ನುತೋರಿಸಲಾಗಿ, ಅದ್ದೂರಿ ಏಳು ಸೆಟ್‌ಗಳಲ್ಲಿ ಸೆರೆಹಿಡಿದಿರುವುದು ವಿಶೇಗಳಲ್ಲಿ ಇದು ಸೇರಿಕೊಂಡಿದೆ.
ಛಾಯಾಗ್ರಹಣರಮೇಶ್‌ಬಾಬು, ಸಂಕಲನ ಕೆ.ಎಂ.ಸೌಂದರ್‌ರಾಜು, ಕಲೆ ಈಶ್ವರಿಕುಮಾರ್, ಸಾಹಸ ಮಾಸ್‌ಮಾದಅವರದಾಗಿದೆ. ಹರಹುವ ಸಲುವಾಗಿ ಧ್ವನಿಸಾಂದ್ರಿಕೆಲೋಕಾರ್ಪಣೆಕಾರ್ಯಕ್ರಮ ನಡೆಯಿತು. ಪುನೀತ್‌ರಾಜ್‌ಕುಮಾರ್ ಹಾಡುಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಕೃಷ್ಣ ಅವರುಜಾಕಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರಿಂದ ಪರಿಚಯವಾಗಿದ್ದಾರೆ. ಹಾಡುಗಳು ಶ್ರೀಮಂತವಾಗಿ ಬಂದಿದೆ. ರವಿಚಂದ್ರನ್‌ಚಿತ್ರಕ್ಕೆ ನೃತ್ಯ ಮಾಡಿಸಿರುವ ಚಿನ್ನಿಪ್ರಕಾಶ್‌ಇರುವುದು ಸಿನಿಮಾಕ್ಕೆಕಳೆ ಬಂದಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು. ಚಿತ್ರವುಚೆನ್ನಾಗಿ ಬರಲೆಂದುಎಲ್ಲಿಯೂಚೌಕಾಶಿ ಮಾಡದೆ ನೀರಿನಂತೆಖರ್ಚು ಮಾಡಿರುವಕುಮುಟದ ಸುಬ್ರಾಯ ವಾಳ್ಕೆ ಸಂಜನಾ ಸಿನಿ ಆರ್ಟ್ಸ್ ಮುಖಾಂತರ ಬಂಡವಾಳ ಹೊಡಿದ್ದು, ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆಇದೆ. ಇದಕ್ಕೂ ಮುನ್ನಶ್ರೀಮಂತದಿಂದ ಇರಲಾದ ಮೂರು ಗೀತೆಗಳನ್ನು ತೋರಿಸಲಾಯಿತು.