ಮದುವೆ ಮಾಡ್ರೀ ಸರಿ ಹೋಗ್ತಾನೆ
‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿದೆ.ಇತ್ತೀಚೆಗೆ ಹಾಡುಗಳು ಲೋಕಾರ್ಪಣೆಗೊಂಡಿತು. ವಿಠಲನಾಗಿ ಅಮ್ಮ ನೀಡಿದ ಕೆಲಸ ಮಾಡದೆ ಉಡಾಳನಾಗಿ ಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ, ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆ ಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ಹೇಳುವಂತೆ ಮುಖ್ಯ ಪಾತ್ರಗಳು ಹೊಸಬರಾಗಿದ್ದರೂ, ಅನುಭವಿ ತಂತ್ರಜ್ಘರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್‌ಆಗಿದೆ. ಹೆಸರಿನಲ್ಲೇಎಲ್ಲವುಇರುವುದರಿಂದ ವಿವರ ಹೇಳುವ ಅಗತ್ಯವಿಲ್ಲ. ಕ್ಯಾಚಿಇರಲೆಂದು ಮದುವೆ ಪದ ಬಳಸಿದೆ. ಪ್ರತಿಯೊಬ್ಬರಜೀವನದಲ್ಲಿಕಲ್ಯಾಣಎನ್ನುವುದು ದಿಬ್ಬಣಇದ್ದಂತೆ.ಆ ಸಿದ್ದಾಂತಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು.
. ಬಾಗಲಕೋಟೆ, ಬಾದಾಮಿ, ಕೆರೂರು, ಹಾಲಿಗೇರಿ, ಮುಚ್‌ಕಂಡಿ, ಬೆಂಗಳೂರು ಇತರೆಡೆಚಿತ್ರೀಕರಣ ನಡೆಸಲಾಗಿದೆಎಂದರು.
ನಾಯಕಿ ಹೊಸಕೋಟೆಯಆರಾಧ್ಯ, ಅರುಣ್‌ಬಾಲರಾಜ್, ಕಮಲದೇವಾಂಗ ಅವಕಾಶ ನೀಡಿದ್ದಕ್ಕೆಥ್ಯಾಂಕ್ಸ್‌ಅಂತಾರೆ. ಹನ್ನೊಂದು ಹಾಡುಗಳಿಗೆ ರಾಗ ಒದಗಿಸಿರುವ ಅವಿನಾಶ್‌ಬಾಸೂತ್ಕರ್ ಹೆಚ್ಚು ಸಮಯತೆಗೆದುಕೊಂಡರು. ನನಗೆ ಸಂಗೀತದಜ್ಘಾನಇಲ್ಲ. ಆದರೂ ಮ್ಯೂಸಿಕ್ ಟೀಚರ್ ಆಗಿ ಕಾಣಿಸಿಕೊಂಡಿದ್ದೇನೆಂದು ರಮೇಶ್‌ಭಟ್ ನಕ್ಕರು.ಛಾಯಾಗ್ರಹಣ ಸುರೇಶ್‌ಬಾಬು, ಸಂಕಲನ ವೆಂಕಿ, ಸಾಹಸ ಕೌರವವೆಂಕಟೇಶ್, ನೃತ್ಯರಾಮು-ಕಿಶೋರ್ ಮತ್ತುಡಾ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಗೋಪಿಕೆರೂರ್ ಲೇಖನಿಯಿಂದ ಸಾಹಿತ್ಯಒದಗಿಬಂದಿದೆ. ಗಂಗಾವತಿಯಉದ್ಯಮಿ ಶಿವರಾಜ್ ಲಕ್ಷಣರಾವ್‌ದೇಸಾಯಿಎಸ್.ಎಲ್.ಡಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವುದು ನೂತನ ಪ್ರಯತ್ನ.ಉತ್ತರಕರ್ನಾಟಕದತಂಡವಾಗಿದ್ದರಿಂದಜಾನಪದಗಾರುಡಿಗಗುರುರಾಜಹೊಸಕೋಟೆತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು.