ಭಾರತದೇಶಅರಿವು ಮೂಡಿಸುವಚಿತ್ರ
ಸ್ವಾತಂತ್ರ ಬಂದು ಸಾಕಷ್ಟು ವರ್ಷಗಳಾದರೂ ಈಗಿನ ಯುವಜನಾಂಗಕ್ಕೆಇದರವಿಷಯವುತಿಳಿದಿಲ್ಲ. ದೇಶದ ಬಗ್ಗೆ ಮಾಹಿತಿ, ಅದರ ಬೆಲೆ, ರಾಷ್ಟ್ರಧ್ವಜದ ಸ್ಥಾನಮಾನ, ಗೌರವ ಮುಂತಾದ ವಿಷಯಗಳ ಕುರಿತಂತೆಅರಿವು ಮೂಡಿಸುವುದು.ಮತ್ತು ಸ್ವಾತಂತ್ರ ಹೋರಾಟಗಾರನಆದರ್ಶ, ತತ್ವಗಳು ವಿದ್ಯಾರ್ಥಿಯಲ್ಲಿಕಂಡಾಗ, ಆತನಅಭ್ಯುದಯಕ್ಕೆ ಸಹಕಾರಿಯಾಗುವುದು.ಇಂತಹ ಅಂಶಗಳು ‘ನಮ್ಮ ಭಾರತ’ ಎನ್ನವಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಧರ್ಮಸೆರೆ, ಒಲವು ಗೆಲುವು ಚಿತ್ರಗಳಿಗೆ ಸಹಾಯಕಛಾಯಾಗ್ರಾಹಕರಾಗಿದ್ದ ಕೆ.ಆರ್.ನಗರದಕುಮಾರಸ್ವಾಮಿಅಂದೇ ನಿರ್ದೇಶನ ಮಾಡುವ ಕನಸು ಕಂಡಿದ್ದರು. ಅದರ ಫಲ ನಾಲ್ಕು ದಶಕದ ನಂತರಇದೇಚಿತ್ರಕ್ಕೆಛಾಯಾಗ್ರಹಣ, ನಿರ್ಮಾಣ ಮಾಡುವುದರಜೊತೆಗೆಆಕ್ಷನ್‌ಕಟ್ ಹೇಳಿದ್ದಾರೆ.ಪಿರಿಯಾಪಟ್ಟಣ್ಣದ ಬೆಟ್ಟದತುಂಗ, ಕಣಗಾಲ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಸ್ವಾತಂತ್ರ ಹೋರಾಟಗಾರನಾಗಿ ಗಣಪತಿಶಾಸ್ತ್ರೀ, ವಿದ್ಯಾರ್ಥಿಯಾಗಿ ಮಾಸ್ಟರ್ ಪ್ರಜ್ವಲ್, ತಾರಗಣದಲ್ಲಿಅಮಲ, ಯಶೋಧ, ಪುಟ್ಟಣ್ಣ, ಗೋಪಿನಾಥ್, ವಡ್ಡನಾಗರಾಜ್ ಮುಂತಾದವರು ನಟಿಸಿದ್ದಾರೆ.ಕತೆ,ಚಿತ್ರಕತೆ, ಸಂಭಾಷಣೆರವಿಶಂಕರ್ ಮಿರ್ಲೆ, ಸಂಗೀತಕುಮಾರ್‌ಈಶ್ವರ್, ಸಂಕಲನ ಸಂಜೀವರೆಡ್ಡಿ, ಪ್ರಸಾದನ ಸ್ವಾಮಿಅವರದಾಗಿದೆ. ನೀಲಾ ನೀಲಕಂಠ ಫಿಲಿಂಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರವು ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆಇದೆ.