ಪ್ರಶಸ್ತಿ ಚಿತ್ರ ವೀಕ್ಷಣೆಗೆ ಲಭ್ಯ
ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು, ಅಪ್ಪ-ಅಮ್ಮನೊಂದಿಗೆಇರಲುಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದಇಬ್ಬರೂ ಬೇರೆಯಾಗಿಪುಟ್ಟರಾಮಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿಅಪ್ಪನು ಮಗನನ್ನುಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.ನಿಮಗೆ ಬೇಕಾದಂತೆಆಟವಾಡಿ ಮಕ್ಕಳ ಮನಸ್ಸನ್ನುಕದಡಬೇಡಿ.ಅವರು ನಿರ್ಜೀವ ಬೊಂಬೆಯಲ್ಲಎಂದುಬುದ್ದಿವಾದ ಹೇಳಿ ಇಬ್ಬರನ್ನುಒಂದುಗೊಡಿಸುತ್ತಾರೆ.ರಾಮನುಪೋಷಕರೊಂದಿಗೆಅಜ್ಜನ ಹಳ್ಳಿ ತೊರೆದುತನ್ನಮನೆಗೆ ಹೋಗಿ ಗೆಳಯ ನೀಡಿದದುರ್ಬೀನಿನಲ್ಲಿನೋಡುತ್ತಾ ಸಂತೋಷ ಪಡುತ್ತಾನೆ. ಇದು ‘ರಾಮನ ಸವಾರಿ’ ಮಕ್ಕಳ ಚಿತ್ರದಕತೆಯಾಗಿದೆ. ಕೆ.ಸದಾಶಿವ ಬರೆದಿರುವಕಾದಂಬರಿಗೆಚಿತ್ರರೂಪ ನೀಡಿರುವುದು ನಿರ್ದೇಶಕ ಕೆ.ಶಿವರುದ್ರಯ್ಯ.ಚಿತ್ರಕತೆ,ಸಂಭಾಷಣೆ ಗಿರೀಸ್‌ಕಾಸರವಳ್ಳಿ, ಸಂಗೀತಕೆ.ಕಲ್ಯಾಣ್, ಸಂಕಲನ ಎಂ.ಎನ್.ಸ್ವಾಮಿಅವರದಾಗಿದೆ.
ಮುಖ್ಯ ಪಾತ್ರದಲ್ಲಿ ಮಾಸ್ಟರ್‌ಆರೋನ್, ಪೋಷಕರಾಗಿರಾಜೇಶ್‌ನಟರಂಗ, ಸೋನುಗೌಡ, ಉಳಿದಂತೆ ಭಾರ್ಗವಿನಾರಾಯಣ್, ಶೃಂಗೇರಿರಾಮಣ್ಣ, ವಿಜಯ್‌ಕುಮಾರ್, ಮಾಸ್ಟರ್‌ಆಯುಷ್, ಕಾರ್ತಿಕ್‌ಥಿಪಾರಿ ಮುಂತಾದವರು ನಟಿಸಿದ್ದಾರೆ.ಮಗನನ್ನುತೆರೆಯ ಮೇಲೆ ನೋಡುವ ಸಲುವಾಗಿ ಸ್ಟ್ರೋಯ್ನಿಜೋಸೆಫ್‌ಪಾಯ್ಸ್ ಸುಧಾಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ೨೦೧೮ನೇ ಸಾಲಿನ ದ್ವಿತೀಯಅತ್ಯುತ್ತಮಚಿತ್ರವೆಂದುರಾಜ್ಯ ಸರ್ಕಾರದಿಂದ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿನಿಮಾವುಇದೇ ಶುಕ್ರವಾರದಂದುರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.