ಮಹಿಳಾ ಪ್ರಧಾನಚಿತ್ರಓಜಸ್
ಒಂದು ಹೆಣ್ಣು ಮನೆಗೆ ಕಣ್ಣುಆಗಿದ್ದು, ಸಮಾಜಕ್ಕೆ ಕಣ್ಣಾಗುತ್ತಾಳೆ ಎಂಬುದನ್ನು ‘ಓಜಸ್’ ಮಹಿಳಾ ಪ್ರಧಾನಚಿತ್ರದಲ್ಲಿತೋರಿಸಲಾಗಿದೆ.ಆಕೆಯಜನ್ಮ ಮನೆಗೆ ಬೆಳಕು ಚೆಲ್ಲುತ್ತದೆ, ಗಂಡನ ಮನೆಗೆ ಹೋದಾಗಬೆಳಕಾಗುತ್ತಾಳೆ.ಕತೆಯು ಅವಳ ಮನೆಯಲ್ಲಿ ನಡೆದಂತದುರ್ಘಟನೆಯಿಂದ ದಿಗ್ರಮೆಗೊಳ್ಳದೆ, ಇದನ್ನೆ ಸ್ಪೂರ್ತಿಯನ್ನುತೆಗೆದುಕೊಂಡು, ಇದೇ ಪರಿಸ್ಥಿತಿ ಬೇರೆಕುಟುಂಬದಲ್ಲಿಆಗಬಾರದೆಂದುಉನ್ನತ ವ್ಯಾಸಾಂಗ ಮಾಡಿಜಿಲ್ಲಾಧಿಕಾರಿಯಾಗಿಇಡೀಊರನ್ನು ಹೇಗೆ ಅಭ್ಯುದಯಗೊಳಿಸುತ್ತಾಳೆ.ಅಲ್ಲಿರಾವಣನಂತಿದ್ದದುಷ್ಟನನ್ನುರಾಮನಾಗಿ ಹೇಗೆ ಪರಿವರ್ತಿಸುತ್ತಾಳೆ ಎಂಬುದು ಸಿನಿಮಾದ ಸಾರಾಂಶವಾಗಿದೆ.ಹೆಣ್ಣೊಂದುಕಲಿತರೆ ಶಾಲೆಯೊಂದುಕಲಿತಂತೆ, ಸಾಮಾಜಿಕ ಪಿಡುಗನ್ನು ಹೋಗಲಾಡಿಸಿ, ಕುಡಿತದಿಂದ ಆಗುವ ಕ್ಲೇUಳು.ಇವೆಲ್ಲಾವು ಸಂದೇಶದ ಮೂಲಕ ಬರಲಿದೆ.ಅದಕ್ಕಾಗಿಅಡಿಬರಹದಲ್ಲಿ ಬೆಳಕು ಎಂದು ಹೇಳಲಾಗಿದೆ.ಅಲ್ಲದೆ ಹೊಡೆದಾಟ, ರಕ್ತಪಾತ, ಹಿಂಸೆಯನ್ನುತೋರಿಸದೆ ಭಾವನೆಗಳ ಮೂಲಕ ಸನ್ನಿವೇಶಗಳನ್ನು ಸೃಷ್ಟಿಸಿರುವುದು ವಿಶೇಷ. ಬೆಂಗಳೂರು, ಮದ್ದೂರು ಮತ್ತುತುಮಕೂರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ನೇಹಾಸಕ್ಸೇನ ಡಿಸಿ ಸುಮಳಾಗಿ ಅಭಿನಯಿಸಿದ್ದಾರೆ.೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವು ಬಗೆಯಲ್ಲಿ ನಟಿಸಿದ್ದ ಯತಿರಾಜ್ ಮೊದಲಬಾರಿ ಮುಖ್ಯ ಖಳನಾಯಕನಾಗಿ ಪರದೆ ಮೇಲೆ ಅಬ್ಬರಿಸಿದ್ದಾರೆ.ಪೋಷಕರಾಗಿ ಭವ್ಯಾ-ಹನುಮಂತರಾಜು, ಇವರೊಂದಿಗೆ ಶೋಭರಾಜ್, ಡಿಂಗ್ರಿನಾಗರಾಜ್, ಮೈಸೂರುರಮಾನಂದ್, ಸ್ವಾಮೀಜಿಯಾಗಿ ಜಿ.ಮೂರ್ತಿ, ಸಂಪಾದಕನಾಗಿ ಪ್ರವೀಣ್, ಮಮತಾ, ಶೋಭಾ,ಶಿವಾನಿ, ದುಬೈರಫೀಕ್, ಮಾಂತೇಶ್, ಮಲ್ಲಿಕಾರ್ಜುನ್‌ಮುಂತಾವರು ಬಣ್ಣ ಹಚ್ಚಿದ್ದಾರೆ. ಸಿಜೆ.ವರ್ಧನ್ ರಚಿಸಿ ನಿರ್ದೇಶನ ಮಾಡಿರುವುದು ಹೊಸ ಅನುಭವ. ಹಾಡಿಗೆಕಾರ್ತಿಕ್‌ವೆಂಕಟೇಶ್ ಸಂಗೀತ, ಪಿ.ವಿ.ಅರ್.ಸ್ವಾಮಿಛಾಯಾಗ್ರಹಣ, ಜೆ.ಗುರುಪ್ರಸಾದ್ ಸಂಕಲನವಿದೆ.ಡಾ.ಎಡ್ವರ್ಡ್‌ಡಿಸೋಜ-ರಜತ್‌ರಘುನಾಥ್‌ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅದರಲ್ಲೂಡಿಸೋಜರವರು ಹಣ ಹೂಡುವುದರಜೊತೆಗೆ ಮುಖ್ಯಮಂತ್ರಿಯಾಗಿ, ಪತ್ನಿ ಮಮತಾ ಪತ್ರಕರ್ತೆ, ಪುತ್ರಿ ಎಲಿವಿಯಾ ಬಾಲಕಿಯಾಗಿ ಕಾಣಿಸಿಕೊಂಡಿದ್ದಾರೆ.ಮೌಲ್ಯಚೇತನ್ ಮೂವೀಸ್ ಮುಖಾಂತರಚಿತ್ರವು ಮುಂದಿನ ತಿಂಗಳು ಏಳರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.