Madhura Madhura Ee Manjula Gaana.Vol-2 Book Rel.

Tuesday, January 28, 2020

284

ಸಂಗೀತಕ್ಕೆಇರುವ ಶಕ್ತಿ ಬೇರಲ್ಲೂಇಲ್ಲ - ಶರಣ್

ಸೌಂಡ್‌ಆಫ್ ಮ್ಯೂಸಿಕ್ ವಾದ್ಯಗೋಷ್ಟಿ ಸಂಸ್ಥಾಪಕ ಗುರುರಾಜ್.ಕೆ.ಕನ್ನಡ ಅಭಿಮಾನಿಗಳಿಗೆ ಅಂತಲೇ ಚಿತ್ರಗಳ ಸಾಹಿತ್ಯದ ಮಾಹಿತಿಇರುವ ‘ಮಧುರ ಮಧುರವೀ ಮಂಜುಳಗಾನ’ ಪುಸ್ತಕವನ್ನುಖ್ಯಾತಗಾಯಕಎಸ್.ಬಿ.ಬಾಲಸುಬ್ರಮಣ್ಯಂ ಬಿಡುಗಡೆ ಮಾಡಿದ್ದರು. ಈಗ ಸಂಚಿಕೆ-೨ನ್ನು ಶರಣ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಕೆಲವರು ಹಾಡುಗಳನ್ನು ಕೇಳುತ್ತಾರೆ.ಅದರ ವಿವರ ತಿಳಿದಿರುವುದಿಲ್ಲ. ಅಂತಹಆಸಕ್ತರಿಗೆಇದುಉಪಕಾರಿಯಾಗಿದೆ.ಈ ಶಬ್ದ ಕೇಳಿದಾಗ ಮನಸ್ಸಿಗೆ ಉಲ್ಲಾಸತರುತ್ತದೆ.ಇದರಲ್ಲಿರುವ ಸಾಹಿತ್ಯ, ರಾಗ, ಸಂಗೀತಇವತ್ತಿಗೂಗುನುಗುವಂತೆ ಮಾಡಿದೆ.

ಅzನ್ನೆ ಹೇಳುವುದು ಸಂಗೀತಕ್ಕೆಅಗಾಧ ಶಕ್ತಿ ಇದೆ ಅಂತ. ನಾವಿಬ್ಬರೂಒಂದೇ ಪ್ರಾಂತ್ಯಉತ್ತರಕರ್ನಾಟಕದಿಂದ ಬಂದವರು.೯೦ರ ದಶಕದಲ್ಲಿಇಲ್ಲಿಗೆ ಬಂದಾಗ ಮೊದಲುಉದ್ಯೋಗಅಂತ ಆರಿಸಿಕೊಂಡಿದ್ದು ಆರ್ಕೆಸ್ಟ್ರಾ.ಯಾವಾUಲಾದರೂಖೇದಗೊಂಡಾಗಇವರು ನೆನಪಿಗೆ ಬರುತ್ತಾರೆ. ಅವರು ಈ ಪುಸ್ತಕವು ಪಿಂಚಣಿತರುತ್ತಿದೆಎಂದು ಹೇಳಿದ್ದಾರೆ.ನಿವೃತ್ತಿ ಹೊಂದುವರಿಗೆ ಮಾತ್ರ ಪೆನ್ಷನ್. ಇವರು ಸಂಗೀತಕ್ಷೇತ್ರದಲ್ಲಿ ಬ್ಯುಸಿ ಇರುವುದರಿಂದ ಈ ಪದಅನ್ವಯಿಸುವುದಿಲ್ಲವೆಂದು ನೆನಪುಗಳ ಬುತ್ತಿಯನ್ನುತೆರೆದಿಟ್ಟು ಶುಭ ಹಾರೈಸಿದರು.

೨ನೇ ಸಂಚಿಕೆಯಲ್ಲಿ ೩೫೦ ಚಿತ್ರಗೀತೆಗಳು, ಇದರಜೊತೆಗೆ ಭಕ್ತಿ, ಭಾವ, ಜಾನಪದ ಮತ್ತುದೇಶಭಕ್ತಿಕುರಿತಂತೆ ೧೫೦ಕ್ಕೂ ಹೆಚ್ಚು ಗೀತೆಗಳು ಇರುವುದು ವಿಶೇಷ. ಎರಡು ವರ್ಷದ ಶ್ರಮದ ಫಲ ಕನ್ನಡ ಗೀತೆಗಳ ಭಂಡಾರವು ಸಂಗೀತ ಪ್ರೇಮಿಗಳಿಗೆ ಅರ್ಪಿಸಲಾಗಿದೆ. ಮುಂದೆತಾಳ, ಗಾಯನ, ನೋಟೇಷನ್‌ಇರುವಕನ್ನಡದಕರೋಕೆ  ಪುಸ್ತಕವನ್ನು ಹೊರತರಲಾಗುವುದೆಂದುಗುರುರಾಜ್ ಹೇಳಿಕೊಂಡರು. ೫೩೫ ಪುಟಗಳ ಸಂಗ್ರಹದ ಬೆಲೆ ೬೦೦ ರೂ.ಇರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,