ಬಿಡುಗಡೆಗೆ ಸಿದ್ದ ಲವ್ ಮಾಕ್ಟೈಲ್
ನಾಲ್ಕೈದು ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿದರೆಅದಕ್ಕೆಮಾಕ್‌ಟೇಲ್‌ಎನ್ನುತ್ತಾರೆ.ಅದರಂತೆ ‘ಲವ್ ಮಾಕ್‌ಟೇಲ್’ ಚಿತ್ರದಕತೆಯಲ್ಲಿ ಮೂರುಘಟ್ಟದ ಪ್ರೀತಿ ಸನ್ನಿವೇಶಗಳು ಬರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತುಜವಬ್ದಾರಿ ಹುಡುಗನಾಗಿ ಕೃಷ್ಣ ನಾಯP ಮತ್ತು ನಿರ್ದೇಶಕನಾಗಿ ಹೊಸ ಅನುಭವ.ಕೊನೇ ಶೇಡ್‌ದಲ್ಲಿಬರುವಮಿಲನನಾಗರಾಜ್ ನಾಯಕಿ.ಶಾಲೆಯಲ್ಲಿ ಬರುವ ಸನ್ನಿವೇಶದಲ್ಲಿಆಂದ್ರದಕನ್ನಡತಿರಚನಾ, ಡ್ಯಾನ್ಸರ್‌ಧನುಷ್‌ಪ್ರಣಾಮ್. ಕಾಲೇಜು ಲವ್ ಸ್ಟೋರಿಯಲ್ಲಿಅಮೃತಅಯ್ಯಂಗಾರ್ ಈಗಿನ ಹುಡುಗಿಯರು ಏನು ಬೇಕು, ಬೇಡಎಂಬುದನ್ನುತೋರಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಗೆಳಯನಾಗಿ ಮೈಸೂರುರಂಗಭೂಮಿ ಪ್ರತಿಭೆಅಭಿಲಾಷ್, ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ರಾಘವೇಂದ್ರಕಾಮತ್-ಅರುಣ್‌ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತವಿದೆ.ಶ್ರೀಕ್ರೇಜಿ ಮೈಂಡ್ಸ್ ಸಂಕಲನದಜೊತೆಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದಾರೆ.ಬೆಂಗಳೂರು, ಚಿಕ್ಕಮಗಳೂರು, ಕಳಸ, ಮೈಸೂರು, ಉಡುಪಿದಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಕೃಷ್ಣ-ಮಿಲನನಾಗರಾಜುಜಂಟಿಯಾಗಿ ಹಣ ಹೊಂದಿಸಿಕೊಂಡು ನಿಗದಿತ ಬಜೆಟ್‌ದಲ್ಲಿನಿರ್ಮಾಣ ಮಾಡಿರುವುದು ವಿಶೇಷ. ಅದಕ್ಕಾಗಿಎಲ್ಲಾ ಕೆಲಸವನ್ನುತಾವೇ ನಿಭಾಯಿಸಿ, ಕಲಾವಿದರು ಸೆಟ್‌ದಲ್ಲಿ ಸೈಕೆಲ್ ಹೊಡೆಯದಂತೆ, ಮುಂಚಿತವಾಗಿ ಮೂವತ್ತು ದಿನಗಳ ಕಾಲ ತಾಲೀಮು ನಡೆಸಿ ಕ್ಯಾಮಾರ ಮುಂದೆ ನಿಲ್ಲಿಸಿದ್ದಾರಂತೆ.ಕೃಷ್ಣ ಟಾಕೀಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರವುಜಾಕ್‌ಟಾಕೀಸ್ ಮುಖಾಂತರಜನವರಿ ೩೧ರಂದು ತೆರೆಕಾಣಲಿದೆ.