Purushothrama.Film Audio Rel.

Monday, January 27, 2020

296

ಪುರುಸೋತ್ ಸಮಯದಲ್ಲಿ ಪುರುಸೋತ್‌ರಾಮನ ಹಾಡುಗಳು

೨೫,೩೦ ಮತ್ತು ೪೦ ವಯಸ್ಸಿನ ಮೂವರು ನಿರ್ಲಿಪ್ತ ಹುಡುಗರುಜವಬ್ದಾರಿಯನ್ನು ತೆಗೆದುಕೊಳ್ಳದೆ ಪುರುಸೋತ್‌ಗಳು ಆಗಿದ್ದು ಸದಾ ಬ್ಯುಸಿ ಇರುತ್ತಾರೆ. ಎಲ್ಲಾ ವಿಷಯಗಳನ್ನು ತಿಳಿದ ಸುಜ್ಘಾನಿಗಳು. ವಿದ್ಯಾವಂತರು, ಬುದ್ದಿವಂತರು, ಪ್ರಪಂಚಜ್ಘಾನ ಬಲ್ಲವರು.ಆದರೆಉದ್ಯೋಗಕ್ಕೆ ಹೋಗಲು ಬಯಸುವುದಿಲ್ಲ. ಕೇವಲ ೧೫-೨೦ ಸಾವಿರಕ್ಕೆಯಾಕೆ ಕೆಲಸಕ್ಕೆ ಹೋಗಬೇಕುಎನ್ನುವಧೋರಣೆಗುಣದವರು. ಹೀಗೆ ದಿನಾ ಪೂರ್ತಿಎಲ್ಲರಿಗೂ ಕಾಲು ಏಳೆಯುತ್ತಾ, ಬೇರೆಯವರ ಬಗ್ಗೆ ನಕರಾತ್ಮಕವಾಗಿ ಟೀಕೆಗಳನ್ನು ಮಾಡುತ್ತಾ,ಕೊನೆಗೆ ಏನಾಗುತ್ತಾರೆಎಂಬುದನ್ನು ‘ಪುರುಸೋತ್‌ರಾಮ’ ಚಿತ್ರದಲ್ಲಿತೋರಿಸಲಾಗಿದೆ.ಇದಕ್ಕೆ ಪೂರಕವಾಗಿ ಫುಲ್ ಬ್ಯುಸಿ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಯುವಕನಾಗಿರಿಕಿತ್‌ಸರು ನಟನೆ ಹಾಗೂ ನಿರ್ದೇಶPನಾಗಿ ಗುರುತಿಸಿಕೊಂಡಿದ್ದಾರೆ.೩೦ರ ವಯಸ್ಸಿನವನಾಗಿ ಶಿವರಾಜ್.ಕೆ.ಆರ್.ಪೇಟೆ, ಮಧ್ಯ ವಯಸ್ಕನಾಗಿರವಿಶಂಕರ್‌ಗೌಡ. ಕ್ರಮವಾಗಿರಕ್ಷಾ, ಅನುಷಾಪಕಾಲಿ ಮತ್ತು ಮಾನಸಜೋಡಿಯಾಗಿ ಅಭಿನಯಿಸಿದ್ದಾರೆ.ಅದರಲ್ಲೂ ಮಾನಸ ನಿರ್ಮಾಣ ಮಾಡಿರುವುದು ವಿಶೇಷ.

ಹರಹುವ ಸಲುವಾಗಿ ಚಿತ್ರದ ಹಾಡುಗಳು ಮತ್ತು ತುಣುಕುಗಳನ್ನು ಗಣ್ಯರುಗಳು ಅನಾವರಣಗೊಳಿಸಿದರು. ಟ್ರೈಲರ್‌ಗೆ ಚಾಲನೆ ನೀಡಿದರಾಘವೇಂದ್ರರಾಜ್‌ಕುಮಾರ್ ಮಾತನಾಡಿ ೧೯೭೧ರಲ್ಲಿ ಅಮ್ಮ ಮೊದಲಬಾರಿ ನಿರ್ಮಾಣ ಮಾಡುವಾಗ ಹಿರಿಯ ಆರ್ಶಿವಾದ ಪಡೆದಿದ್ದರು. ಅವರಿಗೆ ಮೊದಲು ಪ್ರೋತ್ಸಾಹ, ಧೈರ್ಯತುಂಬಿದ್ದುಎನ್.ವೀರಾಸ್ವಾಮಿ. ಮೊದಲು ಸೋಲಬೇಕು, ನಂತರ ಗೆಲುವು ಕಾಣಬೇಕೆಂದು ಹೇಳುತ್ತಿದ್ದರು. ಅಮ್ಮನು ಸೋತುಗೆದ್ದು ಬಂದಿದ್ದರು.ಈ ನಿಟ್ಟಿನಲ್ಲಿ ನೀವು ಮುಂದೆ ಒಳ್ಳೆ ಚಿತ್ರಗಳನ್ನು ನಿರ್ಮಾಣ ಮಾಡಿರೆಂದು ಶುಭ ಹಾರೈಸಿದರು.

ಮಾನಸರವರು ಮನೆಗೆ ಬಂದು ಆಹ್ವಾನಿಸಿದಾಗ ಇವರು ನಟಿಸಿದ್ದಾರೆಂದು ತಿಳಿದಿರಲಿಲ್ಲ. ಇಲ್ಲಿ ನೋಡಿದಾಗಚೆನ್ನಾಗಿಕಾಣುತ್ತಾರೆ.ಒಳ್ಳೆಯದಾಗಲಿ ಅಂತ ಮನುರವಿಚಂದ್ರನ್ ಹರಸಿದರು. ಹಾಡುಗಳಿಗೆ ಸುಧ್ದೋರಾಯ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣಕಿರಣ್‌ಕುಮಾರ್.ಎಂ, ನೃತ್ಯರಾಜ್‌ಕಿಶೋರ್, ಚಿತ್ರಕತೆ-ಸಂಭಾಷಣೆಗೆ ಪ್ರಭುದೇವ ಲೇಖನಿ ಇದೆ. ಈ ಸುಸಂದರ್ಭದಲ್ಲಿಡಾ.ರಾಜ್ ಪುತ್ರಿಲಕ್ಷೀ, ಅಳಿಯಗೋವಿಂದರಾಜು, ರಥಾವರ ನಿರ್ದೇಶಕಚಂದ್ರಶೇಖರಬಂಡಿಯಪ್ಪ, ರಾಜಕೀಯಧುರೀಣರು ಹಾಜರಿದ್ದರು. ಮಾನಸದೇವಿ ಪ್ರೊಡಕ್ಷನ್ ಮುಖಾಂತರ ಸಿದ್ದಗೊಂಡಿರುವ ಚಿತ್ರವುಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,