Bichugathi.Film Press Meet.

Saturday, February 01, 2020

289

ಬಿಡುಗಡೆಯಸನಿಹದಲ್ಲಿ  ಬಿಚ್ಚುಗತ್ತಿ

ಐತಿಹಾಸಿಕ ಚಿತ್ರ‘ಬಿಚ್ಚುಗತ್ತಿ’  ಛಾಪ್ಟರ್-೧ ಚಿತ್ರದಕುರಿತು ಹೇಳುವುದಾದರೆ  ಗಂಡು ಮೆಟ್ಟಿದ ನಾಡುಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು.ಇವರು ೧೬೭೫ ರಿಂದ  ೧೬೮೫ರಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡಿದ್ದರು. ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು  ಪಟ್ಟಕ್ಕೆ ಕೂರಿಸಿ, ದೊರೆ,  ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ  ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು  ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಆ ಕಾಲಘಟ್ಟದಕತೆಯನ್ನು  ಸಿನಿಮಾದಲ್ಲಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ಭಾಗದವರಾದ ಹಿರಿಯ ಸಾಹಿತಿಡಾ.ಬಿ.ಎಲ್.ವೇಣುಕಾದಂಬರಿಯನ್ನುಚಿತ್ರರೂಪಕ್ಕೆರೂಪಾಂತಿಸಲಾಗಿದ್ದು, ಇವರದೇಚಿತ್ರಕತೆ,ಸಂಭಾಷಣೆಇರಲಿದೆ.

ಭರಮಣ್ಣನಾಯಕನಾಗಿರಾಜವರ್ಧನ್ ಪಾತ್ರದ ಸಲುವಾಗಿ ಕತ್ತಿವರೆಸೆ, ಕುದರೆಸವಾರಿ, ಕಲರಿ ವಿದ್ಯೆಗಳನ್ನು ಕಲಿತು ಪೂರ್ಣ ಪ್ರಮಾಣದಲ್ಲಿಕ್ಯಾಮರ ಮುಂದೆನಿಂತುಕೊಂಡಿದ್ದಾರೆ.ಸಿದ್ದಾಂಬೆಯಾಗಿ ಹರಿಪ್ರಿಯಾ ನಾಯಕಿ. ಬಾಹುಬಲಿದಲ್ಲಿಕಾಲಕೇಯನಾಗಿಕಾಣಿಸಿಕೊಂಡಿದ್ದ ರಾಯಚೂರಿನ ೬.೪ ಅಡಿ ಎತ್ತರದ ಪ್ರಭಾಕರ್‌ದಳವಾಯಿಮುದ್ದಣ್ಣನಾಗಿ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತಮ್ಮ ಪಾತ್ರಕ್ಕೆಕಂಠದಾನ ಮಾಡಿದ್ದಾರೆ. ಉಳಿದಂತೆ ಶರತ್‌ಲೋಹಿತಾಶ್ವ, ಶ್ರೀನಿವಾಸಮೂರ್ತಿ, ಸ್ಪರ್ಶಾರೇಖಾ, ಡಿಂಗ್ರಿನಾಗರಾಜ್, ಕಲ್ಯಾಣಿ,ಪ್ರಕಾಶ್‌ಹೆಗ್ಗೋಡು, ರಮೇಶ್‌ಪಂಡಿತ್, ಸುನೇತ್ರಪಂಡಿತ್,ಉಗ್ರಂರವಿ  ಮುಂತಾದವರುನಟಿಸಿದ್ದಾರೆ.

ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸಿರುವ ಹರಿಸಂತೋಷ್ ಮೊದಲ ಬಾರಿಇಂತಹಚಿತ್ರಕ್ಕೆಆಕ್ಷನ್‌ಕಟ್ ಹೇಳಿರುವುದು ವಿಶೇಷ. ಇವರು ಹೇಳುವಂತೆ  ಶೇಕಡ ೭೦ ರಷ್ಟು ಸೆಟ್‌ದಲ್ಲಿ ಆಸ್ಥಾನ, ಜೈಲ್, ದರ್ಬಾರ್ ಹಾಲ್ ಸೇರಿದೆ.  ಉಳಿದ ಭಾಗಗಳನ್ನು ಚಿತ್ರದುರ್ಗದಲ್ಲಿಒಟ್ಟಾರೆ ೧೦೦ ದಿನಗಳ ಕಾಲ  ಶೂಟ್ ಮಾಡಲಾಗಿದೆ. ಆರು ಫೈಟ್‌ಗಳು, ಈ ಪೈಕಿ ಹುಲಿಯೊಂದಿಗೆಮೂರು ಸಾಹಸಗಳು ಇರಲಿದ್ದು, ಇದರಗ್ರಾಫಿಕ್ಸ್‌ಗೆಅಂತಲೇಒಂದುಕೋಟಿಖರ್ಚುಅಗಿದೆ.ಆರು ಹಾಡುಗಳಿಗೆ ದೇಸಿದೊರೆ ಹಂಸಲೇಖಾ ಮತ್ತು ನಕುಲ್‌ಅಭ್ಯಂತರ್ ಸಂಗೀತ ಸಂಯೋಜಿಸಿದ್ದು,  ಹಿನ್ನಲೆ ಶಬ್ದವನ್ನು ಸೂರಜ್ ನಿರ್ವಹಿಸಿದ್ದಾರೆಂದು ಮಾಹಿತಿಕೊಡುತ್ತಾರೆ. ಶನಿವಾರಟೀಸರ್‌ನ್ನು ಮಾದ್ಯಮದವರಿಗೆತೋರಿಸಲಾಯಿತು.ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವಚಿತ್ರವು ಫೆಬ್ರವರಿಕೊನೆವಾರದಂದುತೆರೆಕಾಣುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,