Prayag Studio.Press Meet.

Saturday, February 01, 2020

700

ಪ್ರಯಾಗ್ ಪ್ರೊಡಕ್ಷನ್ಸ್ದಲ್ಲಿ ಲಾಟರಿಕಿರುಚಿತ್ರ

೨೦೧೮ರಲ್ಲಿ ಸ್ಥಾಪಿತಗೊಂಡ ‘ಪ್ರಯಾಗ್ ಸ್ಟುಡಿಯೋ’ದಲ್ಲಿಚಿತ್ರಕ್ಕೆಅಗತ್ಯವಿರುವಡಬ್ಬಿಂಗ್, ಹಿನ್ನಲೆ ಶಬ್ದ, ರೆರ್ಕಾಡಿಂಗ್ ಮುಂತಾದವು ಲಭ್ಯವಿದೆ.ಸಂಗೀತ ಸಂಯೋಜಕ ಪ್ರದೀಪ್ ಮುಲ್ಲೂರು ಸಾರಥ್ಯದ ಸ್ಟುಡಿಯೋ ಈಗ ಎರಡನೇ ವರ್ಷಕ್ಕೆ ಹೆಜ್ಜೆಇಟ್ಟಿದೆ.ಈ ಸಂದರ್ಭದಲ್ಲಿ ಸಣ್ಣದೊಂದುಕಾರ್ಯಕ್ರಮ ನಡೆಯಿತು.ಅತಿಥಿಯಾಗಿ ಆಗಮಿಸಿದ್ದ ವಿ.ಮನೋಹರ್ ಮಾತನಾಡಿ ಪ್ರದೀಪ್‌ಅಂದರೆ ಪ್ರಯೋಗ್‌ಅಂತಲೇಕರೆಯಬಹುದು.ಪ್ರಾರಂಭದಲ್ಲಿ ವಿಷಯವನ್ನು ತಿಳಿಸಿದಾಗ ದಯವಿಟ್ಟು ಮಾಡಬೇಡಿ. ಹಲವು ಸ್ಟುಡಿಯೋಗಳು ನಷ್ಟದಲ್ಲಿ ನಡೆಯುತ್ತಿದೆಎಂದು ಹೇಳಿದ್ದೆ. ಆದರೂ ಭಂಡಧೈರ್ಯ ಮಾಡಿ ಸಾಧನೆ ಮಾಡಿರುವುದು ಪ್ರಶಂಸನಿಯವಾಗಿದೆ.ನಿರ್ದೇಶಕ ಜಗದೀಶ್‌ನಡಹಳ್ಳಿ ೨೦ ನಿಮಿಷದಲ್ಲಿಅದ್ಬುತವಾಗಿಚಿತ್ರಕೊಟ್ಟಿದ್ದಾರೆ.ಅವರು ಈ ಹಿಂದೆಉಪೇಂದ್ರ ಮನೆಯಲ್ಲಿ ಕೆಲಸ ಕಲಿತವರು.ಉಪ್ಪಿ ಮನೆ ಅಂದರೆ ಸಿನಿಮಾ ಶಾಲೆ ಇದ್ದಂತೆಎಂದರು.

ಸ್ಥಳೀಯ ಏರಿಯಾಗಳಲ್ಲಿ ಇಂತಹಚಿತ್ರಮಂದಿರಇದ್ದರೆ ಸಣ್ಣ ಸಣ್ಣ ಚಿತ್ರಗಳಿಗೆ ಅನುಕೂಲವಾಗುತ್ತದೆಂದು ಸುಮನ್‌ನಗರ್‌ಕರ್‌ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ  ನಂದನ್,ಶ್ರೀವಿದ್ಯಾ, ಗುರುದೇವ್‌ನಾಗರಜ್‌ಅಭಿನಯದ ‘ಲಾಟರಿ’ ಕಿರುಚಿತ್ರ ಪ್ರದರ್ಶನಗೊಂಡಿತು. ತಂಡಕ್ಕೆ ಶುಭ ಹಾರೈಸಲು ನಿರ್ದೇಶಕ ದೀಪಕ್‌ಮಧುವನಹಳ್ಳೀ, ರಾಮರಾಮರೇ ನಾಯಕ ನಟರಾಜ್, ವಿಕೆಂಡ್ ನಿರ್ಮಾಪಕ ಮಂಜುನಾಥ್,  ಕಟ್ಟಡ ಮಾಲೀಕಆನಂದ್ ಉಪಸ್ತಿತರಿದ್ದರು. ಮುಂದೆ  ಪ್ರಯಾಗ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಲುಯೋಜನೆ ರೂಪಿಸಿಕೊಂಡಿದ್ದು, ಎರಡು ಕತೆಗಳನ್ನು  ಆಲಿಸಿದ್ದಾರೆ. 

 

Copyright@2018 Chitralahari | All Rights Reserved. Photo Journalist K.S. Mokshendra,