Malgudi Days.Film Press Meet.

Saturday, February 01, 2020

715

ಚಿತ್ರಮಂದರದಲ್ಲಿ ಮಾಲ್ಗುಡಿಡೇಸ್

ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿಡೇಸ್’ ಕತೆಯನ್ನುಕರಾಟೆಕಿಂಗ್ ಶಂಕರ್‌ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು.  ಈಗ ಅದೇ ಹೆಸರಿನಲ್ಲಿಕಿಶೋರ್‌ಮುಡಬಿದ್ರೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಳೇ ಮಾಲ್ಕುಡಿಡೇಸ್‌ಇದಕ್ಕೂ ಸಾಮ್ಯತೆಇರುವುದಿಲ್ಲ. ಶೀರ್ಷಿಕೆಯನ್ನು ಮಾತ್ರ ಬಳಸಲಾಗಿದೆ.  ಪ್ರತಿಯೊಬ್ಬರಜೀವನದಲ್ಲಿ ನೆನಪುಗಳು ಅನ್ನುವುದುಇರುತ್ತದೆ.ಅದರಲ್ಲಿ ಸ್ಥಳ, ಗುರಿ ಬರಲಿದ್ದು, ಯಾತಕ್ಕಾಗಿ ಬರುತ್ತದೆ.ಅದು ಮುಂದಕ್ಕೆ ಹೋದಾಗ ನೆನಪುಗಳೊಂದಿಗೆ ಬೇರೆಊರಿಗೆಕರೆದುಕೊಂಡು ಹೋಗುತ್ತದೆ. ಹಾಗಂತ ಹಳೆಯದಾಗಿರುವುದಿಲ್ಲ. ಎಲ್ಲವು ಹೊಸ ಹೊಸ ನೆನಪುಗಳು. ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ ಸುಂದರ ತಾಣಗಳಲ್ಲಿ ಸೆರೆಹಿಡಿಯಲಾಗಿದೆ.

ಕಾಲ್ಪನಿಕಟೈಟಲ್‌ನಲ್ಲಿ ಸಿನಿಮಾ ಸಾಗುತ್ತದೆ. ನೋಡುಗನಿಗೆ ನಮ್ಮದೆಇದ್ದಂತೆ ಭಾಸವಾಗುತ್ತದೆ.ಹಿರಿಯ ಸಾಹಿತಿ ಲಕ್ಷೀನಾರಾಯಣ ಮಾಲ್ಗುಡಿ ಹೆಸರಿನಲ್ಲಿ ೭೫ ವರ್ಷದ ಮುತ್ಸದ್ದಿ ಪಾತ್ರ ಮತ್ತು ವಿದ್ಯಾರ್ಥಿಯಾಗಿಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕೇರಳ ಮೂಲದರೋಷನ್.ಎನ್.ಜಿ ಮೇಕಪ್ ಮಾಡಿದ್ದು, ಮುದಕನಾಗಿ ಮಾಡಲು ಸಮಯ ಹಾಕಲು ಐದುಗಂಟೆ, ತೆಗೆಯಲುಒಂದುಗಂಟೆಆಗುತ್ತಿತ್ತುಎನ್ನುತ್ತಾರೆ ನಾಯಕ ವಿಜಯರಾಘವೇಂದ್ರ.ಐಟಿ ಉದ್ಯೋಗಿಯಾಗಿ ಗ್ರೀಷ್ಮಾಶ್ರೀಧರ್ ನಾಯಕಿಯಾಗಿಎರಡು ತಲೆಮಾರುಗಳಲ್ಲಿ ಬರುತ್ತಾರೆ.ಬೇರೆಊರಿನ ಹೆಸರು ಬಳಸಿದರೆ, ಸ್ಥಳೀಯ ಪ್ರಾಂತ್ಯವಾಗುತ್ತದೆ.  ಮಾಲ್ಗುಡಿಎಲ್ಲರಿಗೂ ತಿಳಿದಿರುವುದರಿಂದ ಇದೇಟೈಟಲ್‌ಇಡಲಾಗಿದೆ. ಎಲ್ಲರ ಬಾಲ್ಯ, ನೆನಪುಗಳನ್ನು ಕಾಡುವಚಿತ್ರವಾಗಿರುವುದು ವಿಶೇಷ.

ತಾರಗಣದಲ್ಲಿ ಬಿಗ್‌ಬಾಸ್‌ಖ್ಯಾತಿಯಧನರಾಜ್, ಗೋಪಿನಾಥ್‌ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಮತ್ತಿತರುಇದ್ದಾರೆ. ಐದು ಹಾಡುಗಳಿಗೆ ಸಂಗೀತಗಗನೆಬಡೇರಿಯಾ, ಸಂಕಲನ ಪ್ರದೀಪ್‌ನಾಯಕ್, ಛಾಯಾಗ್ರಾಹಕಉದಯ್‌ಲೀಲಾ, ಕಾರ್ಯಕಾರಿ ನಿರ್ಮಾಪಕರವಿಶಂಕರ್‌ಪೈತಂಡದಲ್ಲಿಇದ್ದಾರೆ.ಸೂಪರ್‌ಹಿಟ್ ತುಳು ಚಿತ್ರ ನಿರ್ಮಿಸಿರುವ ಕೆ.ರತ್ನಾಕರ್‌ಕಾಮತ್‌ಬಂಡವಾಳ ಹೂಡಿರುವುದುಹೊಸ ಅನುಭವ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವು ಶುಕ್ರವಾರದಂದು ೭೫ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,