ಬಿಲ್ಗೇಟ್ಸ್ ನೋಡಲು ಬನ್ನಿ
ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ.ಸ್ಯಾಂಡಲ್‌ವುಡ್‌ದಲ್ಲಿಇದೇ ಹೆಸರಿನಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಹಾಗಂತಇದುಅವರಕುರಿತಾದಕತೆಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು.ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ.ಅಂದುಕೊಂಡಂತೆಆಗುತ್ತಾರಾ? ಎಂಬುದನ್ನು ಹಾಸ್ಯ, ಕುತೂಹಲದೊಂದಿಗೆತೋರಿಸುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶವನ್ನು ಹೇಳಲಾಗಿದೆ.
ಬಿಲ್ ಆಗಿ ಶಿಶಿರ್‌ಶಾಸ್ತ್ರೀಗೇಟ್ ಆಗಿ ಚಿಕ್ಕಣ್ಣ ನಾಯಕರುಗಳು.ಮಧ್ಯಮವರ್ಗದ ಹುಡುಗಿಯಾಗಿ ರಶ್ಮಿತಾರೋಜಾ ನಾಯಕಿ. ತಾರಗಣದಲ್ಲಿಕುರಿಪ್ರತಾಪ್, ಗಿರಿ, ರಾಜ್‌ಶೇಖರ್, ಅಕ್ಷರರೆಡ್ಡಿ, ರಾಜೇಶ್, ವಿ.ಮನೋಹರ್, ಬ್ಯಾಂಕ್‌ಜನಾರ್ಧನ್, ಯತಿರಾಜ್, ಪ್ರಿಯಾಂಕಚಿಂಚೊಳ್ಳಿ ಮುಂತಾದವರ ನಟನೆಇದೆ.ರಚನೆ, ನಿರ್ದೇಶನ ಶ್ರೀನಿವಾಸ.ಸಿ.ಮಂಡ್ಯಾ. ಒಂದಷ್ಟು ದೃಶ್ಯಗಳು ಚೆನ್ನಾಗಿ ಬಂದಿಲ್ಲದಕಾರಣ ಮರುಚಿತ್ರೀಕರಣ ನಡೆಸಲಾಗಿದೆ.ಯಮಲೋಕದ ಸನ್ನಿವೇಶಗಳು ೩೦ ಇರಲಿದ್ದು, ಇದನ್ನುಗ್ರಾಫಿಕ್ಸ್ ಮಾಡಿಸಲಾಗಿದೆ. ಮಜಾಖ್ಯಾತಿಯರಾಜಶೇಖರ್‌ಚಿತ್ರಕತೆ-ಸಂಭಾಷಣೆ, ರಾಕೇಶ್.ಸಿ.ತಿಲಕ್ ಛಾಯಾಗ್ರಹಣ ಮರಿಸ್ವಾಮಿಸಂಖಲನವಿದೆ. ರಾಜೇಶ್.ಡಿ ಹಾಗೂ ಅರುಣ್ ಸಾಹಿತ್ಯದ ಗೀತೆಗಳಿಗೆ ನೋಬಿನ್‌ಪೌಲ್ ಸಂಗೀತ ಸಂಯೋಜಿಸಿದ್ದಾರೆ.ಟೆಕ್ಕಿಗಳಾಗಿರುವ ಹನ್ನೊಂದು ಸಿನಿಮಾಮೋಹಿಗಳು ನಿರ್ಮಾಣ ಮಾಡುವ ಬಯಕೆಯಿಂದ ಶ್ರೀ ಪಾಂಚಜನ್ಯ ಸಿನಿ ಕ್ರಿಯೆಶೆನ್ಸ್ ಮೂಲಕ ಚಿತ್ರಕ್ಕೆಬಂಡವಾಳ ಹೂಡಿರುವ ಸಿನಿಮಾವುಇದೇ ಶುಕ್ರವಾರದಂದುತೆರೆಕಾಣುತ್ತಿದೆ.