Dheera Samrat.Film Pooja.

Thursday, January 30, 2020

740

ಹೊಸಬರ ಧೀರ ಸಾಮ್ರಾಟ್

ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ.ಆ ಸಾಲಿಗೆ ‘ಧೀರ ಸಾಮ್ರಾಟ್’ ಚಿತ್ರವು ಸೇರ್ಪಡೆಯಾಗುತ್ತದೆ.ವಾಹಿನಿಯಲ್ಲಿ ಹನ್ನೆರಡು ವರ್ಷ ಹಲವು ವಿಭಾಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ‘ಬೆಸುಗೆ’ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಪಡೆದಿರುವ ಪವನ್‌ಕುಮಾರ್‌ರಚಿಸಿ, ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಐದು ಸ್ನೇಹಿತರು ಆಗತಾನೆ ವಿದ್ಯಾಭ್ಯಾಸ ಮುಗಿಸಿ, ಕೆಲಸ ಸಿಕ್ಕಿದ ಮೇಲೆ ಯಾರು ಸಿಗಲಾರರು ಅಂದುಕೊಂಡುಒಂದುಕಡೆ ಸೇರುತ್ತಾರೆ.ಖುಷಿ ಅನುಭವಿಸಲು ಪಯಣ ಕೈಗೊಳ್ಳುತ್ತಾರೆ.ಅಲ್ಲಿ ಹಾಸ್ಯದಿಂದ ಶುರುವಾದ ಘಟನೆಗಳು ಕುತೂಹಲಕ್ಕೆತಿರುಗುತ್ತದೆ.ಇದರಿಂದಏರುಪೇರಾಗಿ ಕಷ್ಟಗಳು ಆವರಿಸಿಕೊಳ್ಳುತ್ತದೆ.ಅದೆಲ್ಲಾವನ್ನು ಎದುರಿಸಿ ಹೊರಗೆ ಬರುತ್ತಾರಾಎಂಬುದುಚಿತ್ರದ ಸಾರಾಂಶವಾಗಿದೆ.ಜೊತೆಗೆಕುಟುಂಬದ ಭಾವನೆಗಳು, ಕಾಮಿಡಿಇರಲಿದ್ದು, ನೋಡುಗನಿಗೆ ಬೇರೆಯದೆರೀತಿಯ ಆಸಕ್ತಿ ಹುಟ್ಟಿಸುತ್ತದೆ. ಶೀರ್ಷಿಕೆ ಯಾರೆಂದು ಕೊನೆತನಕಗೊತ್ತಾಗದಂತೆಸನ್ನಿವೇಶಗಳು ಸಾಗುತ್ತಾ, ಆರ್ಥಪೂರ್ಣ ಸಂದೇಶಇರಲಿದೆ.ಇದಕ್ಕೆ ಪೂರಕವಾಗಿಡೆಡ್ ವಾಂಟ್‌ಡೈಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.೪೫ ದಿನಗಳ ಕಾಲ ಬೆಂಗಳೂರು, ಮೈಸೂರು ಮತ್ತು ಹಾಡುಗಳಿಗೆ ಪಾಂಡಿಚೇರಿಗೆ ಹೋಗುವ ಇರಾದೆಇದೆ.

ರಾಕೇಶ್‌ಬಿರದಾರ್ ನಾಯಕ.ಕಾಲೇಜು ಮುಗಿಸಿ ಪಟ್ಟಣ್ಣಕ್ಕೆ ಬರುವಅದ್ವಿತಿಶೆಟ್ಟಿ ನಾಯಕಿ.ಗೆಳಯರುಗಳಾಗಿ ರವಿರಾಜ್, ಸಂಕಲ್ಪಪಾಟೀಲ್, ಹರೀಶ್‌ಅರಸ್, ಗಿರಿಧರ್‌ಮಂಜುನಾಥ್‌ಇವರೊಂದಿಗೆ ಹಿರಿಯ ಕಲಾವಿದರುಗಳಾದ ಶೋಭರಾಜ್, ರಮೇಶ್‌ಭಟ್, ಮನ್‌ಮೋಹನ್, ರಾಜುಬಲವಾಡಿ, ನಾಗೇಂದ್ರಅರಸ್ ಉಳಿದಂತೆ ಮಂಡ್ಯಚಂದ್ರು ಮುಂತಾದವರು ನಟಿಸುತ್ತಿದ್ದಾರೆ.ಡಾ.ನಾಗೇಂದ್ರಪ್ರಸಾದ್, ಚೇತನ್‌ಕುಮಾರ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ರಾಘವ್‌ಸುಭಾಷ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕತೆ-ಸಂಭಾಷಣೆ ಎ.ಆರ್.ಸಾಯಿರಾಮ್, ಛಾಯಾಗ್ರಹಣ ವೀರೇಶ್.ಎನ್.ಟಿ.ಎ, ಸಂಕಲನ ಸತೀಶ್‌ಚಂದ್ರಯ್ಯ, ಸಾಹಸ ಕೌರವವೆಂಕಟೇಶ್, ನೃತ್ಯ ಸಾಗರ್‌ಅವರದಾಗಿದೆ. ಗುಲ್ಬಾರ್ಗದಗುರುಬಂಡಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಸಿನಿಮಾ ಮೋಹದಕಾರಣ ನಿರ್ಮಾಣ ಮಾಡುತ್ತಿದ್ದು, ರವಿಚೌವಾಣ್ ಸಹ ನಿರ್ಮಾಪಕರಾಗಿದ್ದಾರೆ.ಡಬ್ಬಿಂಗ್, ಕುಟುಂಬದಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರೂ ಗೆಳಯ ನಿರ್ದೇಶನ ಮಾಡುತ್ತಿರುವುದರಿಂದಧ್ರುವಸರ್ಜಾಮಹೂರ್ತ ಸಮಾರಂಭಕ್ಕೆ ಆಗಮಿಸಿ, ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,