ಪ್ರಚಾರಕಾರ್ಯದಲ್ಲಿ ಸಮಾಜ ಸೇವೆ
ಚಿತ್ರವುಜನರನ್ನುತಲುಪಲು ಪ್ರಚಾರಅವಶ್ಯಕವಾಗಿರುತ್ತದೆ. ಇದಕ್ಕಾಗಿ ಸಾಕಷ್ಟು ಹಣಖರ್ಚಾಗುತ್ತದೆ. ಸೋಜಿಗಎನ್ನುವಂತೆ ಹೊಸಬರ ‘ಥರ್ಡ್‌ಕ್ಲಾಸ್’ ಸಿನಿಮಾತಂಡವು ಪ್ರಚಾರಕ್ಕಾಗಿಖರ್ಚು ಮಾಡುವ ಹಣವನ್ನು ಸಮಾಜ ಸೇವೆಗೆ ಮೀಸಲಿಟ್ಟು, ಇದೇ ಸಮಯದಲ್ಲಿಚಿತ್ರದಕುರಿತಂತೆ ಮಾಹಿತಿ ನೀಡುತ್ತಿದಾರೆ. ಈಗಾಗಲೇ ಬಾದಾಮಿತಾಲ್ಲೂಕು ಕರಳುಗೊಪ್ಪ ಸ್ಥಳಕ್ಕೆ ಭೇಟಿ ನೀಡಿಅವ್ಯವಸ್ಥೆಯಲ್ಲಿದ್ದ ಶಾಲೆಯನ್ನು ಅಭಿವೃದ್ದಿಗೊಳಿಸಿದೆ. ಈ ಹಿಂದೆಧ್ವನಿಸಾಂದ್ರಿಕೆಅನಾವರಣ ಸಂದರ್ಭದಲ್ಲಿಒಂದು ಲಕ್ಷಕ್ಕೆ ವಿಮೆಯನ್ನುಆಟೋ ಚಾಲಕಿಗೆ ಮಾಡಿಸಿದ್ದು, ಈಗ ಐವತ್ತು ಸಾವಿರ ವಿಮೆದಾರರುಆಗಿದ್ದಾರೆ. ಹಣೆಬರಹಕ್ಕೆ ಹೊಣೆ..?ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು ಈರೀತಿಇದ್ದರೂಕತೆ ಫಸ್ಟ್‌ಕ್ಲಾಸ್‌ಆಗಿದೆಅಂತಕತೆ ಬರೆದು ಮೊದಲಬಾರಿ ನಾಯಕಜೊತೆಗೆ ನಿರ್ಮಾಣ ಮಾಡಿರುವನಮ್‌ಜಗದೀಶ್ ಬಣ್ಣಿಸಿಕೊಂಡಿದ್ದಾರೆ. ಮೂರು ವಿಧದಜೀವನ ಶೈಲಿಯಾದಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು ಹೇಗೆ ನೋಡುತ್ತದೆಎಂಬುದನ್ನು ಹೇಳಲಾಗಿದೆ. ಜೀವನದಲ್ಲಿಯಾವುದೇ ತಪ್ಪುಗಳು, ಒಳ್ಳೆಯದು ಆದರೆ,ಅದನ್ನು ಹಣೆಬರಹಎನ್ನುವುದುಂಟು.ಶ್ರೀಮಂತ, ಮಧ್ಯಮ ವರ್ಗದಇಬ್ಬರು ಹುಡುಗಿಯರ ಹಣೆಬರಹದಲ್ಲಿ ಹೇಗೆ ಜೀವನವನ್ನು ಮುಂದುವರೆಸಿಕೊಂಡು ಹೋಗುತ್ತಾರೆಅಂತತೋರಿಸಲಾಗಿದೆ.ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಾಏನನ್ನು ಬಯಸದೆ, ಹಿಡಿದ ಕೆಲಸ ಬೇಕಾ,ಬೇಡವಾ ಎಂಬ ಗೊಂದಲದಲ್ಲಿಇರುವಾಗ ಏನು ನಡಿಯತ್ತೆಎಂಬುದರ ಪಾತ್ರದಲ್ಲಿ ನಟನೆ ಮಾಡಿದ್ದಾರೆ.
ನಿರ್ದೇಶಕಅಶೋಕ್‌ದೇವ್‌ಗೆ ಹೊಸ ಅನುಭವ.
ಗೃಹ ಸಚಿವರ ಮುದ್ದಿನ ಮಗಳು, ಸಂಗೀತದಲ್ಲಿ ಸಾಧನೆ ಮಾಡಬೇಕಂಬ ಪಸೆ, ನಾಯಕಿರೂಪಿಕಾ ಮೂಲತ: ಭರತನಾಟ್ಯಕಲಾವಿದೆಯಾಗಿದ್ದು, ಹೆಜ್ಜೆ ಹಾಕಲು ಒಂದು ಹಾಡುಇರುವುದು ಖುಷಿ ನೀಡಿದೆಯಂತೆ. ತಾಯಿ ಪಾತ್ರದಲ್ಲಿ ಸಂಗೀತಾ, ತಂದೆಯಾಗಿ ಅವಿನಾಶ್, ಉಪನಾಯಕಿ ದಿವ್ಯಾರಾವ್, ಸಂಗೀತ ಶಿಕ್ಷಕನಾಗಿ ರಮೇಶ್‌ಭಟ್, ಮುಸ್ಲಿಂ ಹುಡುಗ ವಾಹನ ರಿಪೇರಿ ಮಾಡುವ ಪವನ್‌ಕುಮಾರ್, ತಮಿಳು ನಟ ನಿಪ್ಪು,ಅಗಲಿದ ಖಳನಟ ಉದಯ್ ಭಾವರಾಜ್‌ಉದಯ್ ವಿಲನ್ ಮತ್ತು ವಿಧಾನ ಪರಿಷತ್ ಸದಸ್ಯಶರವಣ ನಟಿಸಿದ್ದಾರೆ. ಡಾ.ನಾಗೇಂದ್ರಪ್ರಸಾದ್,ಕವಿರಾಜ್ ಮತ್ತುಚೇತನ್‌ಕುಮಾರ್ ಸಾಹಿತ್ಯದಐದು ಗೀತೆಗಳಿಗೆ ಜಸ್ಸಿಗಿಫ್ಟ್ ಸಂಗೀತವಿದೆ. ಶ್ರೀಕಾಂತ್ ಸಂಕಲನ, ಛಾಯಾಗ್ರಹಣ ಶ್ಯಾಮ್‌ರಾಜ್ ಕೆಲಸವಿದೆ.ಇದಲ್ಲದೆ ಮಲ್ಟಿಪ್ಲೆಕ್ಸ್ ಹೂರತುಪಡಿಸಿ, ಮೊದಲ ದಿನದಬೆಳಗಿನ ಪ್ರದರ್ಶನವನ್ನುಉಚಿತವಾಗಿ ತೋರಿಸಿವುದು, ಎರಡನೇ ವಾರದ ಗಳಿಕೆ ಹಣವನ್ನು ಪ್ರಕೃತಿ ವಿಕೋಪಕ್ಕೆ ತುತ್ತಾದವರಕುಟುಂಬಕ್ಕೆ ನೀಡಲುಯೋಜನೆ ಹಾಕಿಕೊಂಡಿದ್ದಾರೆ. ಸೆವೆನ್ ಹಿಲ್ಸ್ ಸ್ಟುಡಿಯೋ ಮೂಲಕ ಸಿದ್ದಗೊಂಡಿರುವ ಚಿತ್ರಕ್ಕೆ ನಿರ್ಮಾಪಕರ ಸೋದರಿ ಸಮಾಜ ಸೇವಕಿ ಚಂದ್ರಕಲಾ ಸಹನಿರ್ಮಾಪಕಿಯಾಗಿದ್ದಾರೆ.ಚಿತ್ರವುಇದೇ ಶುಕ್ರವಾರದಂದು ಸುಮಾರು ೧೦೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.