Sagutha Doora Doora.Film Trailer Rel.

Tuesday, February 04, 2020

799

ಸಾಗುತದೂರದೂರಚಿತ್ರಜನರ ಹತ್ತಿರ

ಮಮತೆಕೊಡುವಎಲ್ಲಾ ಹೆಣ್ಣು ಪಾತ್ರಗಳು ತಾಯಿಯಾಗಿ ಕಾಣಿಸಿಕೊಳ್ಳುತ್ತದೆ.ಇಂತಹುದೆಕತೆಯುಳ್ಳ  ‘ಸಾಗುತದೂರದೂರ’ ಚಿತ್ರದಟ್ರೈಲರ್‌ನ್ನುಯಶ್‌ಬಿಡುಗಡೆ ಮಾಡಿದ್ದರೆ, ತಾಯಿಕುರಿತಾದ ಹಾಡನ್ನುಅನುಪ್ರಭಾಕರ್ ಲೋಕಾರ್ಪಣೆ ಮಾಡಿದ್ದರು. ಕೊನೆಯದಾಗಿಧ್ವನಿಸಾಂದ್ರಿಕೆಯನ್ನುತುಪ್ಪದರಾಣಿರಾಗಿಣಿಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಶೀರ್ಷಿಕೆ ಇಷ್ಟವಾಗಿದೆ.ಇದರಲ್ಲೆ ನಿರ್ಮಾಪಕರು ಶೇಕಡ ೫೦ರಷ್ಟು  ಗೆಲುವು ಕಂಡಿದ್ದಾರೆ. ಪ್ರಸಕ್ತ ಹೊಸಬರಿಗೆ ಅವಕಾಶ ಸಿಗುವುದು ಕಷ್ಟ.ಅಂತಹುದರಲ್ಲಿ ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿರುವುದುಶ್ಲಾಘನೀಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸುಮಾರು ಹದಿನೈದುಸಿನಿಮಾಗಳು ಬಂಡವಾಳ ವಾಪಸ್ಸು ಬಂದಿದೆ.ಕತೆ ಮೇಲೆ ಆಸಕ್ತಿ ವಹಿಸಿ ಸಿನಿಮಾ ಮಾಡಬೇಕೆಂದು ಕಿವಿಮಾತು ಹೇಳಿದರು.ಇವರ ಮಾತಿಗೆ ಧ್ವನಿಗೂಡಿಸಿದ ಲಹರಿವೇಲುಕ್ವಾಂಟಿಟಿ ಜಾಸ್ತಿಯಾಗುತ್ತಿದೆ ಹೊರತುಕ್ವಾಲಿಟಿಕಡಿಮೆ.ಗುಣಮಟ್ಟವನ್ನು ಹೆಚ್ಚು ಮಾಡಿ ಸಂಖ್ಯೆಯನ್ನುಕಡಿಮೆ ಮಾಡಬೇಕುಎಂದರು.

ರಾಮ ಹುಟ್ಟಿದಾಗರಾವಣನು ಹುಟ್ಟಿದ್ದ.ಕೃಷ್ಣ ಹುಟ್ಟಿದಾಗ ಕಂಸನು ಜನ್ಮತಾಳಿದ್ದ.ಇವರಿಗೆ ಹೆತ್ತೋಳು ಒಬ್ಬಳೆ ತಾಯಿ. ಒಳ್ಳೇದು ಕೆಟ್ಟದ್ದುತಾಯಿಇಡುವ ಹೆಸರಿನಲ್ಲಿಇರೋಲ್ಲ. ನಾವು ತುಳಿಯೋ ಹಾದಿಯಲ್ಲಿಇರುತ್ತದೆಎಂಬಂತಹಒಂದು ಏಳೆಯ ಕತೆಗೆಧ್ವನಿ ನೀಡಿರುವುದು  ವಸಿಷ್ಟಸಿಂಹ.  ಕತೆಯಲ್ಲಿಯುವಕ ಮತ್ತು  ಹುಡುಗನೊಬ್ಬಯಾವುದೋಒಂದುಕಾರಣಕ್ಕಾಗಿ  ಮನೆ ಬಿಟ್ಟು ಹೋಗುತ್ತಾರೆ. ಇಬ್ಬರು ತಪ್ಪಿಸಿಕೊಂಡು ಒಟ್ಟಿಗೆ ಸೇರುತ್ತಾರೆ. ನಂತರಒಂದೊಂದು ಭಾಗದಲ್ಲಿಒಬ್ಬೊಬ್ಬರನ್ನು ಭೇಟಿ ಮಾಡಿ ಸಹಾಯತೆಗೆದುಕೊಂಡು,ಅವರದೊಂದುಗುರಿಇರುತ್ತದೆ.  ಆ ಗುರಿಗೆಚಿತ್ರದ ಶೀರ್ಷಿಕೆ ಅನ್ವಯವಾಗುತ್ತದೆ.ಮುಂದೇನುಎಂಬುದನ್ನು ಸಿನಿಮಾ ನೋಡಬೇಕಂತೆ.

ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ ಮತ್ತು  ಮೈಸೂರು ಭಾಗದಲ್ಲಿರುವಒಟ್ಟಾರೆಇನ್ನೂರು  ಹಳ್ಳಿಗಳಲ್ಲಿ   ಚಿತ್ರೀಕರಣ ನಡೆಸಲಾಗಿದೆ. ರವಿತೇಜ ನಿರ್ದೇಶಕರಾಗಿಎರಡನೆ ಪ್ರಯತ್ನ. ಮುಖ್ಯ ಭೂಮಿಕೆಯಲ್ಲಿಅಪೇಕ್ಷಾಪುರೋಹಿತ್‌ಗೆ  ಬೆಲವೆಣ್ಣು  ಪಾತ್ರ, ತಾಯಿಯಾಗಿಉಷಾಭಂಡಾರಿ, ಗೌಡರ ಮಗಳಾಗಿ ದಂತವೈದ್ಯೆಜಾನ್ವಿಜ್ಯೋತಿ, ಪೋಲೀಸ್‌ಅಧಿಕಾರಿಯಾಗಿಕುಮಾರ್‌ನವೀನ್, ಯುವಕನಾಗಿ ಮಹೇಶ್‌ಸಿದ್ದು ನಟನೆಇದೆ.  ಸಂಗೀತಕದ್ರಿಮಣಿಕಾಂತ್, ಛಾಯಾಗ್ರಾಹಕಅಭಿಅವರದಾಗಿದೆ. ಅಮ್ಮನ ಸಲುವಾಗಿ ಅನಿಲ್‌ಪೂಜಾರಿ ಖುಷಿ ಕನಸು ಕ್ರಿಯೇಶನ್ಸ್ ಮುಖಾಂತರ ನಿರ್ಮಾಣ ಮಾಡಿರುವಚಿತ್ರವು  ಪ್ರೇಮಿಗಳ ದಿನದಂದುತೆರೆಕಾಣುತ್ತಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,