Matthe Udbhava.Film Success Meet.

Tuesday, February 04, 2020

775

ಪ್ರಸ್ತುತ ವಿಷಯಗಳ ಕುರಿತಾದಮತ್ತೆಉದ್ಬವ

ಪ್ರಸಕ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತೆಗೆದುಕೊಂಡುಅದಕ್ಕೆಚಿತ್ರರೂಪ ನೀಡಿರುವ ‘ಮತ್ತೆಉದ್ಬವ’ ಚಿತ್ರದಲ್ಲಿ ಮೂರು ಮುಖ್ಯ ಮಂತ್ರ್ರಿಗಳು, ಸ್ವಾಮೀಜಿ ಪಾತ್ರಗಳು ಬರುವುದರಿಂದ ಬಿಡುಗಡೆ ನಂತರ ಬೆದರಿಕೆ ಕರೆಗಳು ಬರಹುದೆಂದು ನಿರ್ದೇಶಕಕೊಡ್ಲುರಾಮಕೃಷ್ಣಧೈರ್ಯದಿಂದ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆಸದರಿಕತೆಇರಲಿದೆ.ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ,  ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಅದುಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ.

ಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ.  ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾರ್ಪೋರೇಶನ್ ಲೆವಲ್‌ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗನಾಗಿ ನಾಯಕ. ವಕೀಲನಾಗಿ  ಮಂಡ್ಯಾರವಿ ಕಿರಿಮಗ.  ಅದೇ ಗುಣವುಳ್ಳ ಮತ್ತು ಪರಿಸರ ಪ್ರೇಮಿ, ನಟಿ, ರಾಜಕಾರಿಣಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಮಿಲನನಾಗರಾಜು ನಾಯಕಿ.  ಶೃಂಗಾರಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಸಿದ್ದಾರೆ.ಇವರ ಆಪ್ತ ಭಕ್ತೆಯಾಗಿ ಶುಭರಕ್ಷಾ ನಟನೆಇದೆ.

ಉಳಿದಂತೆ  ಸುಧಾಬೆಳವಾಡಿ,ಅವಿನಾಶ್, ಪಿ.ಡಿ.ಸತೀಶ್, ಗಿರೀಶ್‌ಭಟ್, ಚೇತನ್‌ಚಮನ್, ನರೇಶ್, ಶಂಕರ್‌ಅಶ್ವಥ್, ನಿರಂಜನ್‌ನಟಿಸಿದ್ದಾರೆ. ಜಯಂತ್‌ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ, ಮೋಹನ್‌ಛಾಯಾಗ್ರಹಣವಿದೆ. ನಿತ್ಯಾನಂದಭಟ್,ಸತ್ಯ, ಮಹೇಶ್‌ಮುದ್ಗಲ್ ಮತ್ತುರಾಜೇಶ್‌ಜಂಟಿಯಾಗಿ ವೈಟ್ ಪ್ಯಾಂಥರ‍್ಸ್‌ಕ್ರಿಯೇಟೀವ್ ಹಾಗೂ ಇನ್‌ಫಾನಿಟಿ ಫಿಲ್ಸ್, ಮುಂಬಯಿ ಇದರ ಮೂಲಕ ನಿರ್ಮಾಣಗೊಂಡಿರುವಚಿತ್ರವು ಶುಕ್ರವಾರದಂದು ೧೫೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶುಕ್ರವಾರದಂದು ಬಿಡುಗಡೆಯಾಗುತ್ತಿದ್ದು, ನಂತರ ಸಿಂಗಪೂರ್, ಗಲ್ಫ್, ಆಸ್ಟ್ರೇಲಿಯಾ, ಯುಕೆ, ಯುರೋಪ್ ದೇಶಗಳಲ್ಲಿ ಕನ್ನಡಿಗರಿಗೆತೋರಿಸಲು ಸನ್ನಾಹ ಮಾಡಿಕೊಂಡಿದ್ದಾರೆ.

 

 

 

 

Copyright@2018 Chitralahari | All Rights Reserved. Photo Journalist K.S. Mokshendra,