ಮೌನಂಗೆದರ್ಶನ್ ಸಾಥ್
ಹೊಸಬರ ಚಿತ್ರಗಳಿಗೆ ಕೊಡೆಯಂತೆಆಸರೆಯಾಗುವಛಾಲೆಂಜಿಂಗ್ ಸ್ಟಾರ್‌ದರ್ಶನ್ ಬ್ಯುಸಿ ಇದ್ದರೂ‘ಮೌನಂ’ ಚಿತ್ರದಧ್ವನಿಸಾಂದ್ರಿಕೆಯನ್ನುಜರ್ನಾಪಣೆ ಮಾಡಿದರು. ನಂತರ ಮಾತನಾಡುತ್ತಾಹಿರಿಯ ನಟ ಅವಿನಾಶ್ ಬೇರೆಯವರ ಮೂಲಕ ಆಹ್ವಾನ ನೀಡಿದ್ದಾರೆ. ಅವರು ನೇರವಾಗಿಕರೆದಲ್ಲಿ ನಾನು ಬರಲು ಸಿದ್ದ.ಇಲ್ಲಿಯವರೆಗೂ ೫೩ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು ೪೫ ರಲ್ಲಿಅವರೊಂದಿಗೆ ಅಭಿನಯಿಸಿದ್ದೇನೆ.ಸರ್‌ಸದಾಯಾವುದಾದರೂ ಸಿನಿಮಾದಲ್ಲಿತೊಡಗಿಕೊಂಡಿರುತ್ತಾರೆ.ಬಹುಶ: ಅವರದೇಸ್ವಿಸ್ ಬ್ಯಾಂಕ್‌ಖಾತೆಯ ಸಂಖ್ಯೆ ತಿಳಿಸಿದಲ್ಲಿ ಅದರಿಂದ ಹಣ ತೆಗೆದುಕೊಳ್ಳುವೆ. ಇವರನ್ನುಯಾವಚಿತ್ರಒಪ್ಪಿಕೊಂಡಿದ್ದೀರಾಅಂತ ಕೇಳುವ ಬದಲು, ಯಾವುದನ್ನು ಬಿಟ್ಟಿದ್ದೀರಾಎಂದು ಕೇಳಬೇಕು.ಇದರಲ್ಲಿ ವಿನೂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಎಲ್ಲರಿಗೂ ಒಳ್ಳೆಯದಾಗಲೆಂದು ಮಾತಿಗೆ ವಿರಾಮ ಹಾಕಿದರು.
ಶೀರ್ಷಿಕೆಯು ಸಂಸ್ಕ್ರತ ಭಾಷೆಆಗಿರುವುದರಿಂದಎಲ್ಲ ಭಾಷೆಗಳಿಗೂಹೊಂದಿಕೊಳ್ಳುತ್ತದೆ. ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಅಡಿಬರಹ ಹಾಗೂ ಭಾರತೀಯಚಿತ್ರರಂಗದ ವಿನೂತನ ಸಿನಿಮಾವೆಂದು ಹೇಳಿಕೊಂಡಿದೆ.ಚಿತ್ರದಕುರಿತು ಹೇಳುವುದಾದರೆ ನಾವುಗಳು ಬೇರೆಯವರನ್ನು ಶತ್ರುಗಳು ಅಂತ ನೋಡುತ್ತೇವೆ. ಆದರೆ ನಮ್ಮೊಳಗೆ ಇದರಗುಣಇರುವುದು ತಿಳಿದಿರುವುದಿಲ್ಲ. ಒಳ್ಳೇದು ಮಾಡಿದರೂಕಷ್ಟದಲ್ಲಿ ಸಿಲುಕುತ್ತೇವೆ. ಬುದ್ದಿ, ಜೀವನ ಬೇರೆ ಬೇರೆಯಾಗಿರುತ್ತದೆ. ಅತಿ ಬುದ್ದಿವಂತಿಕೆ ತೋರಿಸಿದರೆ ಏನಾದರೂ ಅವಘಡಗಳು ಸಂಭವಿಸುತ್ತದೆ.ಎಲ್ಲರೂತಮ್ಮ ಮಕ್ಕಳು ಒಳ್ಳೆಯ ದಾರಿಗೆ ಹೋಗಬೇಕೆಂದು ಹಿತವಚನಕೊಡುತ್ತಾರೆ.ಇದರಲ್ಲಿತಂದೆಯಾದವನು ಮಗನಿಗೆ ಮೊದಲುಕೆಟ್ಟದಾರಿಗೆಕರೆದುಕೊಂಡು ಹೋಗಿ, ಇಲ್ಲಿಗೆ ಹೋದರೆ ಈ ರೀತಿಆಗುತ್ತದೆ.ಅದಕ್ಕಾಗಿ ಸನ್ಮಾರ್ಗದಲ್ಲಿ ಹೋಗಲು ಅರಿವು ಮೂಡಿಸುತ್ತಾರೆ.ಇಂತಹ ಸನ್ನಿವೇಶಗಳು ಬರಲಿದ್ದು,
ಪ್ರತಿಯೊಂದುದೃಶ್ಯಕ್ಕೂಅರ್ಥಪೂರ್ಣ ಸಂದೇಶಇರುವುದು ವಿಶೇಷ.
‘ಅಮೃತವರ್ಷಿಣಿ’ ಧಾರವಾಹಿ ಖ್ಯಾತಿಯ ಬಾಲಾಜಿಶರ್ಮ ಹಿರಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.ಹಾಸ್ಯ, ಭಾವನೆಗಳು, ರೋಮಾನ್ಸ್ ಹೀಗೆ ನಾಲ್ಕು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಕಾಲೇಜು ಹುಡುಗಿ, ಬಿಂದಾಸ್ ಆಗಿರುತ್ತಾಳೆ. ಬದುಕಿನಲ್ಲಿಘಟನೆಯೊಂದು ನಡೆದಾಗಅದುಎಲ್ಲಿಗೋತೆಗೆದುಕೊಂಡು ಹೋಗುತ್ತದೆ. ಪ್ರೀತಿಗೆ ಸಂರ್ಕೀಣ ಅರ್ಥಗಳು ಇರುತ್ತದೆಎಂದು ಹೇಳುವ ನಾಯಕಿ ಮಯೂರಿಎರಡು ಶೇಡ್‌ಗಳಲ್ಲಿ ನಟಿಸಿದ್ದಾರೆ.ಈಕೆಯನ್ನುಕೆಟ್ಟದಾರಿಗೆಕರೆದುಕೊಂಡು ಹೋಗುವ ಗೆಳತಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ. ಬಹು ಮುಖ್ಯವಾಗಿವೃತ್ತಿಜೀವನದಲ್ಲಿ ೮೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್‌ಇದೆಲ್ಲಾಕ್ಕಿಂತ ಭಿನ್ನವಾಗಿಕುಂಚಕಲಾವಿದರಾಗಿ, ಒಮ್ಮೆ ಮಗನೊಂದಿಗೆಗುಂಡು ಹಾಕುತ್ತಾರೆ, ಸೈಕೆಲ್‌ನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಗನ್ ಹಿಡಿಯುತ್ತಾರೆ.ಹೀಗೆ ನಾಲ್ಕಾರುರೀತಿಯಲ್ಲಿ ನಟಿಸಿರುವುದು ಖುಷಿ ತಂದಿದೆಯಂತೆ.ಉಳಿದಂತೆ ಗುಣವಂತಮಂಜು, ದುರಳನಾಗಿ ಕನ್ನಡಿಗ ಬಲರಾಂ, ರಿತೇಶ್, ನಯನ, ಹನುಮಂತೇಗೌಡ, ಜಯಲಕ್ಷೀ ಮುಂತಾದವರ ನಟನೆಇದೆ.
‘ದೇವರಿಗೆ ಪಾಠ’ ಎನ್ನುವಕಿರುಚಿತ್ರ ನಿರ್ದೇಶನ ಮಾಡಿರುವ ಬೀದರ್ ಮೂಲದರಾಜ್‌ಪಂಡಿತ್‌ರಚನೆ, ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳಿರುವುದು ಹೊಸ ಅನುಭವ. ಆಕಾಶ್.ಎಸ್ ಸಾಹಿತ್ಯದ ಮೂರು ಹಾಡುಗಳಿಗೆ ಆರವ್‌ರುಷಿಕ್‌ರಾಗ ಒದಗಿಸಿದ್ದಾರೆ. ಛಾಯಾಗ್ರಹಣ ಶಂಕರ್, ಸಂಕಲನ ಗುರುಮೂತಿಹೆಗಡೆ-ಹೆಚ್.ಆರ್.ಅನುರಂಜನ್, ಕಲೆ ಇಸ್ಮೈಲ್, ಸಾಹಸ ಅಲ್ಟಿಮೇಟ್‌ಶಿವು-ಕೌರವ ವೆಂಕಟೇಶ್, ನೃತ್ಯ ಸ್ಟಾರ್ ನಾಗಿ ನಿರ್ವಹಿಸಿದ್ದಾರೆ.ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಯೌವನ್ನದಲ್ಲಿದ್ದಾಗ ನಟನಾಗಬೇಕೆಂಬು ಬಯಸಿದ್ದ ಆಂಧ್ರದಕನ್ನಡಿಗ ಶ್ರೀಹರಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವಚಿತ್ರವು ಫೆಬ್ರವರಿ ೨೧ರಂದು ರಾಜ್ಯದ್ಯಂತತೆರೆಕಾಣುತ್ತಿದೆ.