ಚಂದನವನದಜನತಾ ಬಜಾರ್
ಆಡು ಭಾಷೆ, ಊರು, ಇತರೆ ಹೆಸರುಗಳು ಶೀರ್ಷಿಕೆಯಾಗುತ್ತಿದೆ. ಈ ಸಾಲಿಗೆ ‘ಜನತಾ ಬಜಾರ್’ ಚಿತ್ರವು ಸೇರ್ಪಡೆಯಾಗಿದೆ. ಸಂಪೂರ್ಣ ಹೊಸಬರತಂಡವುಇದರಲ್ಲಿದೆ. ಹೆಸರೇ ಹೇಳುವಂತೆ ಶೇಕಡ ೮೦ರಷ್ಟು ಕತೆಯು ಮಾರ್ಕೆಟ್‌ದಲ್ಲಿ ನಡೆಯುತ್ತದೆ. ವೈದವ್ಯ ಮಹಿಳೆಯು ಇಬ್ಬರುಗಂಡು ಮಕ್ಕಳೊಂದಿಗೆ ವ್ಯಾಪಾರ, ಇನ್ನಿತರ ವ್ಯವಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬಾಳ್ವೆ ನಡೆಸುತ್ತಿರುತ್ತಾರೆ.ಒಮ್ಮೆಅಮಾಯಕ ವ್ಯಕ್ತಿಯಿಂದತೊಂದgಗೆ ಸಿಲುಕುತ್ತಾರೆ. ಇದನ್ನು ಮಕ್ಕಳಾದವರು ಹೇಗೆ ಎದುರಿಸುತ್ತಾರೆ?ಅದರಿಂದಯಾವರೀತಿಯಲ್ಲಿ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಅಂತಹ ಅವಘಡಗಳು ಏನು ಎಂಬುದನ್ನು ಸೆಸ್ಪನ್ಸ್‌ಥ್ರಿಲ್ಲರ್ ಮಾದರಿಯಲ್ಲಿತೋರಿಸಲಾಗುವುದು.ಮಂಗಳೂರು ಮೂಲದ ಆರ್.ಜೆ.ಪ್ರದೀಪ್ ಹಲವು ನಿರ್ದೇಶಕ ಬಳಿ ಅನುಭವ ಪಡೆದುಕೊಂಡು, ಚಿತ್ರಕ್ಕೆರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಚೆನ್ನರಾಯಪಟ್ಟಣದ ಮಾರ್ಕೆಟ್‌ದಲ್ಲಿಚಿತ್ರೀಕರಣ ನಡೆಸಲುಅನುಮತಿ ಪಡೆದುಕೊಂಡಿದೆ. ಇನ್ನುಳಿದಂತೆ ಹಾಸನ, ಸಕಲೇಶಪುರ, ಶ್ರವಣಬೆಳಗೋಳ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ೩೫ ದಿವಸ ಕ್ಯಾಮಾರಓಡಾಡಲಿದೆ.
ರಾಹುಲ್‌ಅರ್ಜುನ್ ನಾಯಕ, ಅದಿತಿ ನಾಯಕಿ. ಕುಮಾರ್ ಮತ್ತು ಅಶ್ವಿತ ಮತ್ತೋಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಉಳಿದಂತೆ ವಿನಯ್, ರಘು, ಪ್ರಜ್ವಲ್, ಕಿರಣ್ ಮತ್ತು ಪವನ್ ನಟನೆಇದೆ.ಸುಪ್ರಿತಾಸಂತೋಷ್-ಅಂಜನ್‌ಕುಮಾರ್-ಶಿವರಾಜ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ವೈಭವ್‌ರಾಗ ಹೊಸೆಯುತ್ತಿದ್ದಾರೆ.ಚಿತ್ರಕತೆ-ಸಂಕಲನ-ಎಫೆಕ್ಟ್ಸ್ ಪವನ್‌ದೇವ್, ಸಂಭಾಷಣೆಕಿರಣ್‌ಅಣ್ಣೆಗೇರಿ, ಛಾಯಾಗ್ರಹಣರಾಜೇಶ್‌ಗೌಡ, ವಸ್ತ್ರವಿನ್ಯಾಸ ಶ್ರೀಧರ್‌ಕಲರ್-ಪ್ರವೀಣ್.ಆರ್.ಜೆಅವರದಾಗಿದೆ. ಯಲಹಂಕದ ಬಿಲ್ಡರ್ ಕೆ.ಎಂ.ಮುರಳಿ ನಿರ್ಮಾಪಕರು.ಗುರುವಾರ ವೀರಾಂಜನೇಯದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಪತ್ನಿ ವಾಣಿಶ್ರೀವಿಶ್ವನಾಥ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು..ಈ ಸುಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕಡಾ.ಅನೂಪ್‌ದಯಾನಂದ್, ರಾಜಕೀಯಧುರೀಣರು ಹಾಜರಿದ್ದರು.