ನಿರ್ಮಾಪಕ ಸಂಘದಿಂದ ಶೇಕಡವಾರು ಪದ್ದತಿಗೆ ಬೇಡಿಕೆ
ಕರ್ನಾಟಕ ಹೂರತುಪಡಿಸಿ ಇತರೆ ರಾಜ್ಯಗಳಲ್ಲಿ ಈಗಾಗಲೇ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ದತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ನಮ್ಮಲ್ಲಿ ಮಾತ್ರೆ ಕೆಲವು ಟಾಕೀಸು, ಮಲ್ಟಿಪ್ಲೆಕ್ಸ್‌ಗಳು ಇದನ್ನುಅನುಸರಿಸುತ್ತಿದೆಎಂದು ಚಲನಚಿತ್ರ ನಿರ್ಮಾಪಕರ ಸಂಘದಅಧ್ಯಕ್ಷ ಡಿ.ಕೆ.ಪ್ರವೀಣ್‌ಕುಮಾರ್ ಮಾತನಾಡುತ್ತಿದ್ದರು. ಎಲ್ಲಾ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂಅದೇ ಮಾದರಿಯಲ್ಲಿ ಶೇಕಡವಾರು ಪದ್ದತಿಗೆಜಾರಿಗೆತರುವಂತೆಆಗ್ರಹ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಬಾಡಿಗೆಯಆಧಾರದ ಮೇಲೆ ಚಿತ್ರಗಳು ಪ್ರದರ್ಶನಗೊಳ್ಳುವುದರಿಂದ ನಿರ್ಮಾಪಕರಿಗೆ ಹೆಚ್ಚಿನ ಹೊರ ಬೀಳುತ್ತದೆ. ಇದರಿಂದದೊಡ್ಡ ಟಾಕೀಸುಗಳಲ್ಲಿ ಸಣ್ಣ ಚಿತ್ರಗಳು ಬಿಡುಗಡೆ ಮಾಡುವುದುಅಸಾಧ್ಯವಾಗುತ್ತಿದೆ.ಆದಷ್ಟು ಬೇಗನೇ ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಚಿತ್ರಮಂದಿರದಲ್ಲೂಇದೇ ಪದ್ದತಿಜಾರಿಯಾಗಬೇಕುಎಂದರು.
ಇದನ್ನು ಅನುಷ್ಟಾನಕ್ಕೆ ತಂದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರುಎಲ್ಲರಿಗೂ ಅನುಕೂಲವಾಗುತ್ತದೆ.ಇದಕ್ಕಾಗಿ ಮೂವರು ಒಳಗೊಂಡಂತೆ ಸಮಿತಿಯನ್ನು ಶೀಘ್ರದಲ್ಲೆ ರಚಿಸಿ, ಅವರ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಆ ನಂತರಎಲ್ಲರೊಂದಿಗೆ ಚರ್ಚಿಸಿ ಶೇಕಡವಾರು ಪದ್ದತಿಯನ್ನುಏಪ್ರಿಲ್ ೨ರಿಂದ ಇದನ್ನುಜಾರಿಗೆತರುವಯೋಚನೆಇದೆ.ಇದರಜೊತೆಗೆಎಲ್ಲಾ ಚಿತ್ರಮಂದಿರಗಳು ಗಣಕೀಕೃತವಾಗಬೇಕು ಮತ್ತು ಪ್ರೇಕ್ಷಕನಿಗೆಅಗತ್ಯ ಮೂಲ ಸೌಕರ್ಯಗಳು ಸಿಗುವಂತಾಗಬೇಕು. ಪ್ರದರ್ಶಕರು, ವಿತರಕರು ಮತ್ತು ನಿರ್ಮಾಪಕರ ನಡುವೆ ಪಾರದರ್ಶಕ ವ್ಯವಹಾರ ನಡೆಯುವಂತಾಗಬೇಕು. ಚಿತ್ರರಂಗದ ಬೆಳವಣಿಗೆ, ಉದ್ಯಮದ ಒಳಿತಿಗಾಗಿ ಇವೆಲ್ಲಾವನ್ನು ಮಾಡಲಾಗುತ್ತಿದೆ. ಬಹುತೇಕ ಪ್ರದರ್ಶಕರು, ನಿರ್ಮಾಪಕರುಈ ಸೂತ್ರವನ್ನುಒಪ್ಪಿಕೊಂಡಿದ್ದಾರೆಅಂತಅಧ್ಯಕ್ಷರು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿಉಪಾಧ್ಯಕ್ಷಎಂ.ಜಿ.ರಾಮಮೂರ್ತಿ, ಗೌರವ ಕಾರ್ಯದರ್ಶಿ ಕೆ.ಮಂಜು, ಜಂಟಿಕಾರ್ಯದರ್ಶಿ ರಮೇಶ್‌ಯಾದವ್, ಖಜಾಂಚಿಆರ್.ಎಸ್.ಗೌಡ, ನಿರ್ಮಾಪಕಕರಿಸುಬ್ಬು, ಪ್ರದರ್ಶಕ ನರಸಿಂಹಲು ಸೇರಿದಂತೆ ಸಂಘದ ಪದಾದಿಕಾರಿಗಳು ಉಪಸ್ತಿತರಿದ್ದರು.