ಗುಂಡನಿಗೆ ಮನಸೋತ ಕಲಾ ಪೋಷಕರು
ಕಳೆದವಾರ ಬಿಡುಗಡೆಗೊಂಡ ‘ನಾನು ಮತ್ತುಗುಂಡ’ ಚಿತ್ರವುಅಂದುಕೊಂಡಂತೆಎರಡನೇ ವಾರಕ್ಕೆಕಾಲಿಡುತ್ತಿದೆ.ಸಂತೋಷಕೂಟದಲ್ಲಿ ನಿರ್ದೇಶಕ ಶ್ರೀನಿವಾಸ್‌ರಾಮಯ್ಯ ಮಾತನಾಡಿಎಲ್ಲರ ಸಹಕಾರದಿಂದ ಸಿನಿಮಾವುಗೆದ್ದಿದೆ.ಪ್ರಾಣಿ ಗುಣಗಳನ್ನು ತಿಳಿದುಕೊಂಡವರಿಗೆ ಇದುಆಪ್ತವಾಗಿದೆ.ಭಾವನೆಗಳಿಗೆ ತಕ್ಕಂತೆ ಹಿನ್ನಲೆ ಶಬ್ದ ಒದಗಿಸಿರುವುದು ಪ್ಲಸ್ ಪಾಯಿಂಟ್‌ಆಗಿದೆ. ಹಾಸನ ಭಾಷೆಯ ಸೊಗಡನ್ನುಜನರುಇಷ್ಟಪಟ್ಟಿದ್ದಾರೆ. ಪತ್ರಿಕೆಯಲ್ಲಿ ನಿಯತ್ತಿನ ಸಿನಿಮಾವೆಂದು ಹೇಳಿರುವುದು ನೋಡಿದಾಗ ಹತ್ತು ವರ್ಷಕಾದಿದ್ದಕ್ಕೂಇದರ ಮೂಲಕ ಸಾರ್ಥಕವಾಗಿದೆ.ಪ್ರತಿಯೊಬ್ಬರ ನಿಯತ್ತು ಪರದೆ ಮೇಲೆ ಕಾಣಿಸುತ್ತದೆಂದು ಭಾವುಕರಾಗುತ್ತಾ ವಿಧೇಯತೆಯಿಂದಎದ್ದು ನಿಂತು ನಮಸ್ಕಾರಮಾಡಿದರು. ಬಿಡುಗಡೆ ಮುಂಚೆ ಸಂಗೀತದ ಬಗ್ಗೆ ಹೇಳಿಕೊಂಡರೆ ಎಲ್ಲಿತಪ್ಪಾಗಿಅರ್ಥೈಸುತ್ತಾರೆಂದು ಹೆಚ್ಚಿನ ವಿಷಯ ಹಂಚಿಕೊಂಡಿರಲಿಲ್ಲ. ಈಗ ಯಶಸ್ಸುಕಂಡಿರುವುದರಿಂದ ಕೆಲಸ ಮಾಡಿದತೃಪ್ತಿಇದೆಎನ್ನುತ್ತಾರೆಕಾರ್ತಿಕ್‌ಶರ್ಮಾ.
ನಾಯಿ ಕತೆತೆಗೆದುಕೊಂಡುಚಿತ್ರ ಮಾಡುವುದು ಕಷ್ಟ.ಈಗಾಗಲೇ ಚಿತ್ರಮಂದಿರದಿಂದ ನಮಗೆ ಕೊಡಿಅಂತ ಬೇಡಿಕೆಇಟ್ಟಿದ್ದಾರೆ.ಹಾಡುಗಳು ಮನಸ್ಸಿಗೆ ಹಿತಕೊಡುತ್ತದೆ, ಕ್ಲೈಮಾಕ್ಸ್‌ಕಣ್ಣನ್ನುಒದ್ದೆ ಮಾಡಿಸುತದೆಂದುಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಹೇಳುತ್ತಾರೆ.ಎಲ್ಲರೂ ಸೇರಿ ಮಾಡಿರುವುದರಿಂದತಂಡಕ್ಕೆ ಸಕ್ಸಸ್ ಸಿಕ್ಕಿದೆ.ಗುಂಡ ಬ್ಯುಸಿ ಇದ್ದಾನೆಂದು ಖುಷಿ ಹಂಚಿಕೊಂಡರು ನಾಯಕ ಶಿವರಾಜ್.ಕೆ.ಆರ್.ಪೇಟೆ.
ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್‌ಗಳು ಶೇಕಡ ೭೦ರಷ್ಟು ಭರ್ತಿಯಾಗುತ್ತಿದೆ.ಹೀಗೆ ಮುಂದುವರೆದರೆಎರಡನೆ ವಾರಕ್ಕೆ ಬಂಡವಾಳ ವಾಪಸ್ಸು ಬರುತ್ತದೆಂದು ನಿರ್ಮಾಪಕರಘುಹಾಸನ್ ಹೇಳುವಾಗ ಅವರಆನನದಲ್ಲಿ ಸಂತಸತುಂಬಿಕೊಂಡಿತ್ತು.ಕತೆಗಾರ ವಿವೇಕನಂದತಂಜುರಾಯರ್, ಸಂಭಾಷಣೆ ಶರತ್‌ಚಕ್ರವರ್ತಿ, ಸೌಂಡ್‌ಇಂಜಿನಿಯರ್ ನವೀನ್, ನಟಗೋವಿಂದೇಗೌಡಸುಸಂದರ್ಭದಲ್ಲಿಭಾಗಿಯಾಗಿದ್ದರು.ಎಂದಿನಂತೆ ನಾಯಕಿ ಸಂಯುಕ್ತಹೂರನಾಡುಗೈರುಹಾಜರಿಇತ್ತು.