ಹೊಸಬರ ಸರ್ವಂ ಪ್ರೇಮಂ
ಚಂದನವನದಕ್ಕೆ ಹೊಸಬರು ಬರುತ್ತಿರುವುದುಆರೋಗ್ಯಕರ ಬೆಳವಣಿಗೆಯಾಗಿದೆ.ಇದಕ್ಕೆಕೊಂಡಿಯಾಗಿ ‘ಸರ್ವಂ ಪ್ರೇಮಂ’ ಚಿತ್ರವೊಂದು ಸೆಟ್ಟೇರಿದೆ. ನಿರ್ದೇಶಕರುಎರಡು ವರ್ಷ ಕೆಳಗೆತಮ್ಮದೆ ಹಣದಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿಒಂದಷ್ಟು ಭಾಗವನ್ನುಚಿತ್ರೀಕರಣ ನಡೆಸಿದ್ದಾರೆ. ಅದು ಸರಿಯಾಗಿ ಬಂದಿಲ್ಲವೆಂದುಯೋಜನೆಯನ್ನು ಕೈ ಬಿಟ್ಟಿದ್ದರು.ಈಗ ಬೇರೆ ನಿರ್ಮಾಪಕರು ಸಿಕ್ಕಿರುವುದರಿಂದ ಸರಿಯಾದ ಸಿದ್ದತೆಗಳನ್ನು ಮಾಡಿಕೊಂಡು ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಶೀರ್ಷಿಕೆ ಹೇಳುವಂತೆ ಎಲ್ಲವನ್ನು ಪ್ರೀತಿಯಿಂದಗೆಲ್ಲಬೇಕುಎಂಬುದನ್ನು ಹೇಳಲು ಹೊರಟಿದ್ದಾರೆ.ಶ್ರೀಮಂತ ಮನೆತನದ ಹುಡುಗನೊಬ್ಬ ಹೊರಗೆ ಬಂದಾಗ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ.ನೋಡುಗನಿಗೆಅವನನ್ನು ನೋಡಿಕೊಂಡಂತೆ ಭಾಸವಾಗುತ್ತದೆ. ನಮ್ಮದೇಜೀವನದಲ್ಲಿ ನಡೆದಂತೆ ಘಟನೆಗಳನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಷ್ಟೇ ವೈರತ್ವಇದ್ದರೂಅದನ್ನು ಪ್ರೀತಿಯಿಂದಗೆದ್ದಾಗ ಮಾತ್ರ ಫಲ ಸಿಗುತ್ತದೆ. ಹಳೆ ಕತೆಯಂತೆಇದ್ದರೂತೋರಿಸುವರೀತಿ ಭಿನ್ನವಾಗಿರುತ್ತದೆ. ಜೊತೆಗೆರಾಜಕೀಯ, ರೌಡಿಸಂ ನ್ನಿವೇಶಗಳು ಬರಲಿದೆ.
ಉದ್ಯಮಿಯಾಗಿಎರಡು ಶೇಡ್‌ದಲ್ಲಿಅಭಿ ನಾಯಕ.ಶಿಕ್ಷಕಿಯಾಗಿ ಸುಹಾನ ಮತ್ತು ಪುಣೆ ಮೂಲದಕನ್ನಡತಿಅಲ್ಮಾಸ್‌ಮೋತಿವಾಲ ನಾಯಕಿಯರು. ಸ್ಟೈಲಿಶ್ ಖಳನಾಗಿ ಹರ್ಷಅರ್ಜುನ್, ಶಾಸಕನಾಗಿ ಶೋಭರಾಜ್ ಇವರೊಂದಿಗೆ ಅವಿನಾಶ್, ಬಲರಾಜವಾಡಿ ಮುಂತಾದವರುಅಭಿನಯಿಸುತ್ತಿದ್ದಾರೆ. ಕೃತಿ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಶಿವುಕೋಲಾರ ಅವರಿಗೆ ಮೊದಲ ಅನುಭವ. ಕೆ.ಕಲ್ಯಾಣ್-ಗೌಸ್‌ಪೀಸ್ ಸಾಹಿತ್ಯದಐದು ಹಾಡುಗಳಿಗೆ ಲೋಕಿ ಸಂಗೀತ, ಶ್ರೀಸಾಯಿ ಛಾಯಾಗ್ರಹಣ, ಡಿಫರೆಂಟ್‌ಡ್ಯಾನಿ ಸಾಹಸ, ಮದನ್‌ಹರಣಿ ನೃತ್ಯವಿದೆ.ಸಂಪೂರ್ಣಚಿತ್ರೀಕರಣ ಬೆಂಗಳೂರು, ಹಾಡುಗಳಿಗೆ ಹೊಸಪೇಟೆ, ಬಳ್ಳಾರಿ, ಚಿಕ್ಕಮಗಳೂರು,ಕೆಜಿಎಫ್ ಕಡೆಗೆ ಹೋಗುವ ಇರಾದೆಇದೆ. ಮೆಡಿಕಲ್ ವೃತ್ತಿ ನಡೆಸುತ್ತಿರುವಯೋಗೇಶ್.ಡಿ.ಎನ್‌ಎರಡುಕೋಟಿ ಬಂಡವಾಳ ಹೂಡುವುದರ ಮೂಲಕ ಹದಿನೈದು ವರ್ಷದಕನಸನ್ನು ಈಡೇರಿಸಿಕೊಂಡಿದ್ದಾರೆ.ಇವರಜೊತೆಗೆರಾಜೀವ-ಗಿರೀಶ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.