Gentleman.Film Triler Rel.

Monday, February 03, 2020

794

                  

ಕನ್ನಡ ಚಿತ್ರಗಳಿಗೆ ಆದ್ಯತೆಕೊಡಿ ದರ್ಶನ್

ಸಾಮಾನ್ಯವಾಗಿದರ್ಶನ್‌ಯಾವುದೇಚಿತ್ರದಕಾರ್ಯಕ್ರಮಕ್ಕೆ ಹೋದರೆ ಹೆಚ್ಚು ಮಾತನಾಡದೆತಂಡಕ್ಕೆ ಶುಭ ಹಾರೈಸುತ್ತಾರೆ.ಆದರೆ ‘ಜಂಟಲ್‌ಮನ್’ ಸಿನಿಮಾಕ್ಕೆ ಹೋದಾಗ ಬೆಸ್ಟ್‌ಆಫ್ ಲಕ್ ಹೇಳುವುದಿಲ್ಲೆವೆಂದು ಪ್ರಾರಂಭದಲ್ಲೆ ತಿಳಿಸಿ ಅದಕ್ಕೆಕಾರಣವನ್ನು ನೀಡುತ್ತಾ ಹೋದರು.ತುಣುಕುಗಳು, ಹಾಡುಗಳು ನೋಡಿದಾಗಎಲ್ಲರ ಶ್ರಮ ಪರದೆ ಮೇಲೆ ಕಾಣಿಸಿದೆ.ನಾವುಗಳು ಬರ‍್ತೇವೆ, ಹೋಗ್ತೇವೆ. ಇಂದುಕನ್ನಡಜನರ ಪ್ರತಿನಿಧಿಯಾಗಿ ಕೇಳಿಕೊಳ್ಳುತ್ತೇನೆ. ಸಂಚಾರಿವಿಜಯ್‌ದೊಡ್ಡ ನಟ, ಇವರಿಗೆ ಬಂದಂತ ಪ್ರಶಸ್ತಿಯು ಬೇರೆರಾಜ್ಯದವರಿಗೆ ಬಂದರೆ, ನಾವುಗಳು ಅವರನ್ನುಕೊಂಡಾಡಿ ಪ್ರಚಾರ ಮಾಡುತ್ತವೆ. ನಿಜವಾಗಿಅನ್ಯಾಯ ಅನಿಸುತ್ತದೆ. ಹೆಮ್ಮೆಯಿಂದಕನ್ನಡಿಗರುಅಂತ ಹೇಳಿಕೊಳ್ಳಲು ಬೇಸರವಾಗುತ್ತದೆ. ಸಿನಿಮಾದಲ್ಲಿ ವುಮೆನ್‌ಟ್ರಾಫಿಕ್, ಸ್ಲಿಪಿಂಗ್ ಸಿಂಡ್ರೋಮ್ ಖಾಯಿಲೆಯನ್ನುತೆಗೆದುಕೊಂಡುಅದನ್ನುಕಮರ್ಷಿಯಲ್ ಆಗಿ ತೋರಿಸುವುದುಕಷ್ಟದ ಕೆಲಸ. ತಾನೊಬ್ಬತಂತ್ರಜ್ಘನಾಗಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯ.ಇಂಥಚಿತ್ರಕ್ಕೆ ಸಾಥ್‌ಕೊಟ್ಟರೆ ಬೇರೆಯವರು ಮೇಲಕ್ಕೆ ಬರಲು ಸಹಕಾರಿಯಗುತ್ತದೆ.ಕೆಲವೊಮ್ಮೆಚೆನ್ನಾಗಿರುವಕನ್ನಡ ಚಿತ್ರಗಳು ಬರುತ್ತಿಲ್ಲವೆಂದು ಹೇಳಿದಾಗ ಕೋಪ ಉಕ್ಕಿಬರುತ್ತದೆ.ಸರಿಯಾಗಿಅಂಡು ಬಗ್ಗಿಸಿ ಇಂತಹಚಿತ್ರ ನೋಡಿಎಂದುಎದೆತಟ್ಟಿ ಹೇಳಬಹುದುಅಂತ ಮಾತಿಗೆ ವಿರಾಮ ಹಾಕಿದರು.

ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು  ದಿನವೊಂದಕ್ಕೆ ಏಳು  ಗಂಟೆ  ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು  ಆರುಗಂಟೆ ಮಾತ್ರಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆಜಾರುತ್ತಾರೆ. 

ಅದಕ್ಕಾಗಿಅಡಿಬರಹದಲ್ಲಿಕುಂಭಕರ್ಣನೆಂದು ಹೇಳಲಾಗಿದೆ. ಈ ಅವಧಿಯಲ್ಲಿಆಹಾರ ಸೇವನೆ, ಪ್ರೀತಿ, ಹೊಡೆದಾಟ, ಅಳು ಸೇರಿದಂತೆಎಲ್ಲವನ್ನು ಮಾಡುವಒಂದುರೀತಿಯಅಸಾಮಾನ್ಯ ಮನುಷ್ಯ. ಅವರುಎದ್ದಿರುವ ಸಮಯದಲ್ಲಿಏನೆಲ್ಲಾ ಮಾಡುತ್ತಾರೆಎನ್ನುವುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

ನಾಯಕ ಪ್ರಜ್ವಲ್‌ದೇವರಾಜ್, ನಾಯಕಿ ನಿಶ್ವಿಕಾನಾಯ್ಡು, ಸಂಗೀತ ನಿರ್ದೇಶಕಅಜನೀಶ್‌ಲೋಕನಾಥ್, ನಿರ್ದೇಶಕಜಡೇಶ್‌ಕುಮಾರ್, ಸಂಭಾಷಣೆ ಮಾಸ್ತಿ-ಸಂತೋಷ್, ಸಂಚಾರಿವಿಜಯ್ ಮುಂತಾದವರುಉಪಸ್ತಿತರಿದ್ದು ಮಿತಭಾಷಿಯಾಗಿದ್ದರು.ಗಾಯಕ ಸಂಜಿತ್‌ಹೆಗ್ಗಡೆ-ಶಶಾಂಕ್‌ಶೇಷಗಿರಿಗೀತೆ ಹಾಡಿದರು.ಕಾಮಿಡಿ ಕಿಲಾಡಿಗಳು ಖ್ಯಾತಿಯಗೋವಿಂದೇಗೌಡ-ಅನೀಶ್ ಹಾಸ್ಯ ಪ್ರಸಂಗಎಲ್ಲರನ್ನು ನಗಿಸಿತು.ದೇವರಾಜ್‌ಕುಟುಂಬ ಸೇರಿದಂತೆ ಸಿನಿಪಂಡಿತರು ಹಾಜರಿದ್ದರು. ಅಂತಿಮವಾಗಿಎಲ್ಲರೂ ಸಿಡಿ ಬಿಡುಗಡೆ ಮಾಡಿ ಫೋಟೋಗೆ ಫೋಸ್‌ಕೊಟ್ಟರು.ಗುರುದೇಶಪಾಂಡೆ ಜಿ ಸಿನಿಮಾಸ್ ಮೂಲಕ ಮೊದಲ ಬಾರಿ ನಿರ್ಮಾಣ ಮಾಡುತ್ತಿರುವಚಿತ್ರವು ಶುಕ್ರವಾರದಂದು ಬಿಡುಗಡೆಯಾಗುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,