5Adi 7Angula.Film Audio Rel.

Saturday, February 08, 2020

712

ಕುಚೇಷ್ಟೆಕುತಂತ್ರ  ಮತ್ತುಕುಯುಕ್ತಿ

‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು,  ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‌ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ  ಕೊಲೆ ರಹಸ್ಯವಾಗಿರುತ್ತದೆ.  ಮುಂದೆಇದುದೊಡ್ಡತಿರುವನ್ನು ಪಡೆದು ನಂಬಲಾಗದಘಟನೆಗೆ ಸಾಕ್ಷಿಯಾಗುತ್ತದೆ.ಕೊನೆಗೆ ಆತನೇಅದರಲ್ಲಿ ಸಿಲುಕಿಕೊಂಡು ಪೋಲೀಸರಿಗೆಅಪರಾಧಿಯನ್ನುಹುಡುಕುವ ಸಂಕಷ್ಟ ಎದುರಾಗುತ್ತದೆ.ಆತನನ್ನು ಹುಡುಕುವುದು ಸಾಧ್ಯವೆ?ಅಥವಾಅಸಾಧ್ಯವೆಎಂಬುದುಸೆಸ್ಪನ್ಸ್, ಥ್ರಿಲ್ಲರ್‌ಕತೆಯ ಸಾರಾಂಶವಾಗಿದೆ.ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಗೆ ಕಾಣಿಸಿಕೊಂಡಿರುವುದು ವಿಶೇಷ.

ಹುಡುಗಾಟದಉದ್ಯಮಿಯಾಗಿ ರಾಸಿಕ್‌ಕುಮಾರ್ ನಾಯಕ.ಅದಿತಿ ನಾಯಕಿ. ಗೆಳಯನಾಗಿ ಭುವನ್‌ನಾರಾಯಣ್‌ಇವರೊಂದಿಗೆ ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿದಾವಣಗೆರೆ, ಮಹದೇವ, ಮಾ.ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ್ರ, ವಿನಯ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ಒಮನ್‌ದಲ್ಲಿ ಮೆಕಾನಿಕಲ್‌ಇಂಜಿನಿಯರಿಂಗ್ ಮುಗಿಸಿ, ಮುಂದೆಬಣ್ಣದ ಲೋಕದ ಮೋಹಕ್ಕೆ ಒಳಗಾಗಿ ಕೆಲಸಕ್ಕೆ ಬೆನ್ನು ತೋರಿಸಿ, ಭಾರತಕ್ಕೆ ಹಿಂದುರಿಗಿದ ನಂದಳಿಕೆ ನಿತ್ಯಾನಂದಪ್ರಭು ಸಂಕಲನ ಅನುಭವ ಹೊಂದಿದ್ದಾರೆ.

ಇದರಿಂದಲೇಚಿತ್ರಕ್ಕೆರಚನೆ ನಿರ್ಮಾಣ, ನಿರ್ದೇಶನಹಾಗೂ ಕೋಮಿಯೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿ.ವಿ.ಗೋಪಾಲ್ ಮತ್ತುಕಾರ್ತಿಕ್‌ಗುಬ್ಬಿ ಸಾಹಿತ್ಯದ ಮೂರು ಹಾಡುಗಳಿಗೆ ರಘುಠಾಣೆ ಸಂಗೀತವಿದೆ.ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್.ಕೆಂಪರಾಜುಸಂಕಲನ, ಹಿನ್ನಲೆ ಶಬ್ದ ಆರ್.ಎಸ್.ಗಣೇಶ್‌ನಾರಯಣ್ ನಿರ್ವಹಿಸಿರುತ್ತಾರೆ.

ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲ್, ಸುಂಟಿಕೊಪ್ಪ ಮತ್ತು ಮಡಕೇರಿಯಲ್ಲಿಚಿತ್ರೀಕರಣ ನಡೆದಿದೆ.ಮಗನ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದು ನಂದಳಿಕೆ ಚಂದ್ರಶೇಖರ್‌ಪ್ರಭು. ಬಿಯಾನ್‌ಡ್ರೀಮ್ಸ್‌ಕ್ರಿಯೇಶನ್ಸ್ ಮೂಲಕ ಸಿದ್ದಗೊಂಡಿರುವ ೧.೫೩ ನಿಮಿಷದಚಿತ್ರವುಯುಎ ಪ್ರಮಾಣಪತ್ರ ಪಡೆದುಕೊಂಡು ಸದ್ಯದಲ್ಲೆಬಿಡುಗಡೆಯಾಗುವ ಸಾದ್ಯತೆಇದೆ. ಪ್ರಚಾರದ ಮೊದಲ  ಹಂತವಾಗಿ ತುಣುಕುಗಳನ್ನು ಮಾದ್ಯಮದವರಿಗೆತೋರಿಸಲಾಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,