www.meenabazaar.com.Film Press Meet.

Saturday, February 08, 2020

304

ಮೀನಾ ಬಜಾರ್ಟ್ರೈಲರ್ಬಿಡುಗಡೆ

 ‘ತಿತಿತಿ.ಮೀನಾಬಜಾರ್.,’ ಚಿತ್ರವು ಬಿಡುಗಡೆಗೆ ಸನಿಹವಾಗಿರುವುದರಿಂದ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಶೀರ್ಷಿಕೆ ಕೊನೆಯಲ್ಲಿಡಾಟ್‌ಕಾಮಾಎಂಬುದುಇರಲಿದೆ.ಇದುಕಾಮಾ, ಕಾಮ ಅಂದರೆ ಸೆಕ್ಸ್‌ಇರಬಹುದು.ಬಯಕೆಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ.ಕತೆಯಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರುಇಲ್ಲಯವರೆವಿಗೂಕುತೂಹಲ ಕಾಯ್ದಿರಿಸಿದ್ದಾರೆ.ಇಡೀ ಪ್ರಪಂಚ ಬಜಾರ್‌ನಿಂದತುಂಬಿಕೊಂಡಿದೆ.ಇಲ್ಲಿ ಏನು ಬೇಕಾದರೂ, ಎಲ್ಲವು ಸಿಗುತ್ತದೆಂದು ತುಣುಕುಗಳಲ್ಲಿ ಬರುವಡೈಲಾಗ್‌ಕುತೂಹಲ ಹುಟ್ಟಿಸಿದೆ. ಐದು ಪಾತ್ರದಲ್ಲಿ ಮುಖ್ಯವಾಗಿ ಬರಲಿದ್ದು, ಒಂದೊಂದು ಪಾತ್ರಕ್ಕೂ ವಿಶೇಷತೆಇರಲಿದ್ದು, ಅದರ ಮೇಲೆಯೇಚಿತ್ರವು ನಿಂತುಕೊಳ್ಳುತ್ತದಂತೆ.

ಗತಕಾಲದಲ್ಲಿಕಿರುತೆರೆಯ ಸ್ಟಾರ್ ನಿರ್ದೇಶಕರಾಗಿದ್ದರಾಣ ಸುನಿಲ್‌ಕುಮಾರ್‌ಸಿಂಗ್  ಗ್ಯಾಪ್ ನಂತರಎರಡನೇ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ, ಆಕ್ಷನ್‌ಕಟ್ ಹೇಳುವ ಜೊತೆಗೆ ನಿರ್ದೇಶಕನ ಪಾತ್ರಕ್ಕೆ  ಬಣ್ಣ ಹಚ್ಚಿದ್ದಾರೆ. ನೇರ,ದಿಟ್ಟ, ನಿರಂತರ ಹೆಣ್ಣು ಮಗಳಾಗಿ ಬಾಂಬೆ ಮೂಲದ  ಶ್ರೀಜಿತಾಘೋಷ್ ನಾಯಕಿ. ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಐಟಂಡ್ಯಾನ್ಸರ್‌ಆಗಿದ್ದ ಆಲಿಷಾ ಕುಣಿಯುವುದನ್ನು  ಪಕ್ಕಕ್ಕೆ ಇಟ್ಟುಮೊದಲಬಾರಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆರಂಗಿತರಂಗಅರವಿಂದ್, ರಾಜೇಶ್‌ನಟರಂಗ, ಮಧುಸೂಧನ್, ಜೀವ, ಭಾಸ್ಕರ್, ಲಕ್ಷೀಹೆಗಡೆ, ರೂಪೇಶ್‌ಕುಮಾರ್ ಮುಂತಾದವರು ನಟಿಸಿದ್ದಾರೆ.ಸಂಗೀತಕದ್ರಿಮಣಿಕಾಂತ್, ಛಾಯಾಗ್ರಹಣ ಮಾಥ್ಯುರಾಜನ್, ಸಂಕಲನ ಶ್ರೀಕಾಂತ್, ನೃತ್ಯ ಸುಜಿ-ಅನೀ-ಕಲ್ಪನ್, ಸಾಹಸ ರಿಯಲ್‌ಸತೀಶ್‌ಅವರದಾಗಿದೆ.

ಕನ್ನಡದಲ್ಲಿ ‘ಯುಎ’ ತಲುಗುದಲ್ಲಿ ‘ಯು’ ಪ್ರಮಾಣ ಪತ್ರ ಪಡೆದುಕೊಂಡಿರುವಚಿತ್ರಕ್ಕೆ ಸೋದರ ನಾಗೇಂದ್ರಸಿಂಗ್ ಅವರು ಸಿಂಗ್ ಸಿನಿಮಾಸ್ ಮೂಲಕ ಬಂಡವಾಳ ಹೂಡಿರುವುದು ಹೊಸ ಅನುಭವ. ಚಿತ್ರವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,