ಹಣಇದ್ದರೆ ಕೈಲಾಸ
೭೦ರ ದಶಕದಲ್ಲಿಡಾ.ರಾಜ್‌ಕುಮಾರ್‌ಅಭಿನಯದ ‘ಕಾಸಿದ್ರೆ ಕೈಲಾಸ’ ಚಿತ್ರವೊಂದುತೆರೆಕಂಡಿತ್ತು.ಕಟ್ ಮಾಡಿದರೆ ಈಗ ಹೊಸಬರ ‘ಕೈಲಾಸ’ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಅಡಿಬರಹದಲ್ಲಿ ಕಾಸಿದ್ರೆ ಎಂದು ಹೇಳಿಕೊಂಡಿದೆ.ಯೂತ್, ಕ್ರೈಮ್‌ಕಾಮಿಡಿಜೊತೆಗೆ ಬಂಧುರಎರಕಕತೆಇದೆ.ಬದುಕಿನಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ.ಆಕೆಯ ಮನಸ್ಸನ್ನುಗೆಲ್ಲಲುಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿಅವನ ಶ್ರಮಕ್ಕೆಫಲಿತಾಂಶ ಸಿಗುತ್ತಾದಾ ಎಂಬುದುಒಂದು ಏಳೆಯ ತಳಹದಿಯಾಗಿದೆ. ಹನ್ನೆರಡು ವರ್ಷಟೆಕ್ಕಿಯಾಗಿ ಕೆಲಸ ಮಾಡಿರುವ ಬಳ್ಳಾರಿ ಮೂಲದ ನಾಗ್‌ವೆಂಕಟ್‌ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿ, ವೆಬ್ ಸೀರೀಸ್ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿಅನುಭವ ಪಡೆದುಕೊಂಡಿದ್ದಾರೆ. ಇದರ ಪ್ರತಿಫಲವಾಗಿ ಚಿತ್ರಕ್ಕೆರಚನೆ, ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ.ಬೆಂಗಳೂರು ಸುತ್ತಮುತ್ತ, ಹಾಡುಗಳನ್ನು ತೀರ್ಥಹಳ್ಳಿ, ಕೊಡಗು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುಯೋಜನೆ ಹಾಕಲಾಗಿದೆ.
ಬಿಂದಾಸ್ ಹುಡುಗನಾಗಿ‘ತಾರಕಾಸುg’ಖ್ಯಾತಿಯ ವೈಭವ್ ನಾಯಕನಾಗಿಎರಡನೆ ಪ್ರಯತ್ನ.ಬದುಕಿನ ಮೌಲ್ಯಗಳ ಹೊಣೆ ಹೊತ್ತುಕೊಂಡ ಹುಡುಗಿ, ಮಂಗಳೂರಿನ ರಾಶಿಬಾಲಕೃಷ್ಣ ನಾಯಕಿಯಾಗಿ ಮೂರನೆ ಅವಕಾಶ. ಗೆಳಯನಾಗಿ ಕಾಮಿಡಿ ಕಿಲಾಡಿಗಳುದಲ್ಲಿ ಗುರುತಿಸಿಕೊಂಡಿದ್ದ ಸೂರಜ್, ಇವರೊಂದಿಗೆಇಪ್ಪತೈದು ಪಾತ್ರಗಳು ಬರಲಿದೆ.ಖಳನಟನಾಗಿ ತೆಲುಗಿನ ಪ್ರಸಿದ್ದ ನಟಅಭಿನಯಿಸುವ ಸಾದ್ಯತೆಇದ್ದು, ಒಂದು ಸುತ್ತಿನಚರ್ಚೆ ನಡೆಸಲಾಗಿದೆ.ನಾಲ್ಕು ಹಾಡುಗಳಿಗೆ ಆಶಿಕ್‌ಅರುಣ್ ಸಂಗೀತವಿದೆ.ಛಾಯಾಗ್ರಹಣಟಾಲಿವುಡ್‌ನ ವಿನೋಧ್‌ರಾಜೇಂದ್ರನ್, ಸಂಕಲನ ತ್ಯಾಗು.ಎಂ, ಸಾಹಸ ಸ್ಟನ್ನರ್‌ಸ್ಯಾಮ್. ಇಬ್ಬರು ಕಾಲಿವುಡ್‌ಕಡೆಯವರು.ಅನಂತಪುರದಯುವಉದ್ಯಮಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವಾಸಿಕ್ ಅಲ್‌ಸಾದ್ ಸಿನಿಮಾ ಕೃಷಿಗೆ ಮಹದ್ ಪಿಕ್ಚರ‍್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.ಮಹೂರ್ತ ಸಮಾರಂಭಕ್ಕೆಡಾಲಿಧನಂಜಯ್ ಆಗಮಿಸಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.