ಸತ್ಯಘಟನೆಯ ಮಾಂಜ್ರಾ
೨೦೦೫ರಂದು ಬೆಳಗಾವಿ ಜಿಲ್ಲೆಯ ಬೊಂಬಾರಗ ಹಳ್ಳಿಯಲ್ಲಿ ನಡೆದ ಪ್ರೇಮಕತೆಯು‘ಈ ನಾಡು’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಇದನ್ನುಓದಿದ್ದ ಮುತ್ತುರಾಜರೆಡ್ಡಿ ‘ಮಾಂಜ್ರಾ’ ಚಿತ್ರಕ್ಕೆಇದೇಘಟನೆಯನ್ನುತೆಗೆದುಕೊಂಡುಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿಜ ಕತೆಯಲ್ಲಿ ಶಂಕರ್‌ಎನ್ನುವ ಹುಡುಗಕಾಲ್ಗೆಜ್ಜೆತೊಡಿಸಲು ಪದ್ಮಳ ಬಳಿ ಹೋಗುವಷ್ಟರಲ್ಲಿಆಕೆಯು ಕಾಣೆಯಾಗಿರುತ್ತಾಳೆ. ನಂತರ ಅವಳು ಕೊಲೆಯಾದಳೋ, ಆತ್ಮಹತ್ಯೆ ಮಾಡಿಕೊಂಡಳೋ ಎಂಬುದುಇಲ್ಲಿಯವರೆಗೂ ತಿಳಿದಿಲ್ಲ. ಇದೇಕೊರಗಿನಲ್ಲೆ ಅವನು ಅರ್ಧ ಮಾನಸಿಕ ಅಸ್ವಸ್ಥನಾಗಿದ್ದಾನೆ. ಕಾರ್ಯಕ್ರಮದಲ್ಲಿಶಂಕರ್ ಹಾಜರಿದ್ದು, ಅವರ ಪರಿಸ್ಥಿತಿ ನೋಡಿದವರಿಗೆಖೇದವಾಗಿತ್ತು. ಆತತನ್ನ ಪೋಸ್ಟರ್ ನೋಡುತ್ತಲೇ ಏನು ನೆನಪಾಯಿತೋಅಂತ ತಿಳಿಯದೆ ವೇದಿಕೆ ಮೇಲಿಂದ ದಿಡೀರ್‌ಎಂದು ಇಳಿದರು.ಸಿನಿಮಾದಲ್ಲಿರೀಲ್ ನಾಯಕಿಗೆಕಾಲ್ಗಜ್ಜೆ ತೊಡಿಸಿ ಶಂಕರ್‌ಆಸೆಯನ್ನು ನಿರ್ದೇಶಕರು ಪೂರೈಸಿದ್ದಾರೆ.ಪಾತ್ರವುಅದೇರೀತಿ ಬರಲೆಂದುಆರು ತಿಂಗಳು ಕಾಲ ಆತನ ಚಟುವಟಿಕೆಗಳನ್ನು ಗಮನಿಸಿ ಅದರಂತೆತೆರೆ ಮೇಲೆ ಮೂಡಿಸುವಲ್ಲಿ ಸಪಲರಾಗಿದ್ದಾರೆ.
ಮೂಲ ಕತೆಯಲ್ಲಿಮರಾಠಿ ಹುಡುಗಿಯಾಗಿರುವುದರಿಂದ ಶೇಕಡಇಪ್ಪತ್ತರಷ್ಟುಇದೇ ಭಾಷೆಯ ಡೈಲಾಗ್‌ಗಳು ಇರಲಿದೆ. ದೇಸಿಗ್ರಾಮೀಣ ಪ್ರದೇಶದಲ್ಲಿಯಾವರೀತಿ ಪ್ರೀತಿ ಮಾಡುತ್ತಾರೆಎಂಬುದನ್ನುತೋರಿಸಲಾಗಿದೆ. ಒಂದು ಭಾಗದಚಿತ್ರೀಕರಣವನ್ನು ಪದ್ಮಳ ಮನೆಯಲ್ಲಿ ನಡೆಸಿರುವುದು ವಿಶೇಷ. ಆಗಿನ ಕಾಲದಲ್ಲಿ ಮೊಬೈಲ್‌ಇಲ್ಲದೆಇರುವುದರಿಂದ ಬೆಂಕಿಪಟ್ಟಣದಲ್ಲಿ ಹೇಗೆ ಪ್ರೀತಿಸುತ್ತಿದ್ದು, ಪ್ರೇಮ ಪತ್ರಗಳ ವ್ಯವಹಾರಇವೆಲ್ಲವುದೃಶ್ಯದಲ್ಲಿ ಬರಲಿದೆ.ಪುಣೆ ಮೂಲದಕನ್ನಡಿಗಟೆಕ್ಕಿ ರಂಜಿತ್‌ಸಿಂಗ್ ಹಳ್ಳಿ ಹುಡುಗನಾಗಿ ನಾಯಕ.ಅಪೂರ್ವ ನಾಯಕಿ.ಖಳನಟನಾಗಿ ರಂಜನ್‌ಇದ್ದಾರೆ. ನಾಲ್ಕು ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಡಾ.ಚಿನ್ಮಯ.ಎಂ.ರಾವ್ ಸಂಗೀತಕ್ಕೆ ಹರಿಹರನ್,ಮೆಹಬೂಬಸಾಬ್, ಅನುರಾಧಭಟ್‌ಧ್ವನಿಯಾಗಿದ್ದಾರೆ. ಛಾಯಾಗ್ರಹಣಸೈಯದ್‌ಯಾಸೀನ್-ಶರತ್, ಹಿನ್ನಲೆ ಶಬ್ದ ಆಕಾಶ್‌ಜಾದವ್ ನಿರ್ವಹಿಸಿದ್ದಾರೆ.
ಬೀದರ್‌ಜಿಲ್ಲೆಯ ನದಿ ಮತ್ತು ನಾಯಕಿ ಹೆಸರು ಶೀರ್ಷಿಕೆಯಾಗಿದೆ.ಧ್ವನಿಸಾಂದ್ರಿಕೆಯನ್ನು ಲಹರಿವೇಲು, ಡ.ನಾಗೇಂದ್ರಪ್ರಸಾದ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ರವಿಅರ್ಜುನ್ ಪೂಜೇರಅವರುದುರ್ಗಾ ಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.