ಹನ್ನರಡನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಿದ್ದತೆ
ಪ್ರತಿ ವರ್ಷದಂತೆ ಈ ಬಾರಿಯು ‘೧೨ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಸಿದ್ದತೆಗಳು ನಡೆಯುತ್ತಿವೆ. ಕರ್ನಾಟಕ ಚಲನಚಿತ್ರಅಕಾಡಮಿಅಧ್ಯಕ್ಷ ಸುನಿಲ್‌ಪುರಾಣಿಕ್‌ಅವರುರವಿಚಂದ್ರನ್, ರಾಕ್‌ಲೈನ್‌ವೆಂಕಟೇಶ್ ಸೇರಿದಂತೆ ಹಲವು ಹಿರಿಯರೊಂದಿಗೆ ಸಮಾಲೋಚನೆನಡೆಸಿ, ಸಲಹೆಗಳನ್ನು ಸ್ವೀಕರಿಸಿದ್ದಾರೆ.ಫೆಬ್ರವರಿ ೨೬ರಿಂದ ಮಾರ್ಚ್ ೪ರ ವರೆಗೆಉತ್ಸವಜರುಗಲಿದೆ.ಉದ್ಗಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಚಾಲನೆ ನೀಡಲಿದ್ದು, ಸಮಾರಂಭ ಸಮಾರಂಭವನ್ನುರಾಜ್ಯಪಾಲ ವಜುಭಾಯ್‌ವಾಲಾವಿಜೇತರಿಗೆಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.೬೦ ದೇಶಗಳು, ೨೦೦ ಚಿತ್ರಗಳು ಭಾಗಿಯಾಗುತ್ತಿರುವುದು ವಿಶೇಷ. ಪ್ರೇಕ್ಷಕರಿಗೆ ಅನುಕೂಲವಾಗುವಂತೆಒರಾಯನ್ ಮಾಲ್ ೧೧ ಪರದೆಗಳು, ಕಲಾವಿದರ ಸಂಘ, ಸುಚಿತ್ರಚಿತ್ರ ಸಮಾಜ ಮತ್ತು ನವರಂಗ್‌ಚಿತ್ರಮಂದಿರದಲ್ಲಿ ಪ್ರದರ್ಶವನ್ನುಏರ್ಪಾಟು ಮಾಡಲಿದೆ.
ಉತ್ಸವದಲ್ಲಿ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ದೇಶಕೇಂದ್ರಿತ, ಪುನರಾವಲೋಕನ, ಪರಿಚಿತವಲ್ಲದ ಉಪಭಾಷೆಗಳ ಪರಿಚಯ, ಸಿನಿಮಾದ ೧೨೫ನೇ ವರ್ಷದ ನೆನಪಿಗೆ ವಿಶ್ವದ ಮಹಾನ್ ಚಿತ್ರಗಳ ಪ್ರದರ್ಶನ, ಭಾರತೀಯ ಪರಂಪರೆಕುರಿತಾದ ಚಿತ್ರಗಳ ಪ್ರದರ್ಶನ, ಕಾರ್ಯಾಗಾರ, ಸಂವಾದ ಮತ್ತುತಜ್ಘರಿಂದಉಪನ್ಯಾಸಇನ್ನು ಹಲವು ವಿಷಯಗಳ ಕುರಿತಂತೆ ಕಾರ್ಯಕ್ರಮಗಳು ನಡೆಯಲಿವೆ. ಪ್ಲಾಸ್ಟಿಕ್‌ನ್ನು ನಿಷೇದಿಸಿರುವ ಸಲುವಾಗಿ ಪಾಸುಗಳನ್ನು ದಪ್ಪಕಾಗದದಲ್ಲಿ ಸಿದ್ದಪಡಿಸಲಾಗಿದೆ. ಹಿರಿಯ ನಾಗರೀPರ ಸಲುವಾಗಿ, ಚಿತ್ರರಂಗದಎಲ್ಲಾ ವಿಭಾಗದಿಂದಇಬ್ಬರು ಸೇವೆ ಮಾಡಲು ಮುಂದು ಬಂದಿರುತ್ತಾರೆ. ಪೈರಸಿ ಹಾಗೂ ಸ್ಟೋರಿ ಬೋರ್ಡ್‌ಕುರಿತಂತೆ ಸಭೆ ನಡೆಸಲಾಗುವುದು.ಸಿನಿಮಾಸಕ್ತರುಆನ್‌ಲೈನ್ ಮೂಲಕ ನೊಂದಣಿ ಮಾಡಿಸಬಹುದು.