ಒಂದೇ ವೇದಿಕೆಯಲ್ಲಿರೀಲ್, ರಿಯಲ್ಜಂಟಲ್ಮನ್
ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಕುರಿತಂತೆ ಹೇಳಲಾದ ‘ಜಂಟಲ್‌ಮನ್’ ಚಿತ್ರವುಅಂದುಕೊಂಡಂತೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸದರಿ ಖಾಯಿಲೆಗೆ ತುತ್ತಾಗಿರುವವರು ದಿನಕ್ಕೆ ಹದಿನೆಂಟುಗಂಟೆ ನಿದ್ರೆ, ಆರುಗಂಟೆಎಚ್ಚರದಿಂದಇರುತ್ತಾರೆ.ನೋಡುಗರಿಗೆಇಂತಹ ವ್ಯಕ್ತಿಇದ್ದಾರೆಂಬ ಸಂಶಯ ಬಂದಿತ್ತು.ಇದನ್ನುಅರಿತ ನಿರ್ಮಾಪಕಗುರುದೇಶಪಾಂಡೆ ಸಿನಿಮಾದ ಸಂತೋಷಕೂಟಕ್ಕೆರಿಯಲ್‌ಜಂಟಲ್‌ಮನ್‌ರನ್ನು ಕರೆಸಿದ್ದರು.ಖಾಯಿಲೆಗೆ ತುತ್ತಾಗಿರುವ ಬಾಂಬೆಯ ರಾಜೀವ್‌ಬಸೀನ್ ಮಾತನಾಡಿ ಹದಿನಾರು ವರ್ಷಕ್ಕೆ ಶುರುವಾಗಿ ಅಂದಿನಿಂದಕಷ್ಟದಲ್ಲಿ ನರುಳುತ್ತಿರುವೆ. ಪ್ರಾರಂಭದಲ್ಲಿಅಮ್ಮನ ಸಹಾಯ, ನಂತರ ಪತ್ನಿ ನೋಡಿಕೊಳ್ಳುತ್ತಿದ್ದಾರೆ. ಮೂರು ಎಪಿಸೋಡ್‌ಗಳಲ್ಲಿ ಬಂದಿದೆ. ಇದನ್ನುಕಂಡುಹಿಡಿಯಲು ವೈದ್ಯರು ಸುಮಾರು ವರ್ಷತೆಗೆದುಕೊಂಡಿದ್ದಾರೆ.ಚಿಕಿತ್ಸೆಮಾಡಲು ಔಷದಿ ಇರುವುದಿಲ್ಲ. ಏನಿದ್ದರೂಧ್ಯಾನದ ಮೂಲಕ ಸ್ವಲ್ಪಪರಿಹಾರ ಸಿಗಲಿದೆ ಎಂದು ಹೇಳುತ್ತಾ ಹೋದರು.
ಮೊದಲ ಸಿನಿಮಾ ಹೆಸರು ಮಾಡಲಿಲ್ಲ. ವಿನೂತನ ವಿಷಯವನ್ನುಜನರುಇಷ್ಟಪಟ್ಟಿದ್ದಾರೆ.ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. ಪ್ರಜ್ವಲ್ ಸರ್ ಕಸ,ವಾಸನೆ ನೋಡದೆಅಲ್ಲಿಯೇ ಅಭಿನಯಸಿದ್ದಾರೆ. ಮುಂದಿನ ಸಿನಿಮಾಕ್ಕೆಇದಕ್ಕಿಂತಲೂ ಒಳ್ಳೆಯ ಪ್ರಯತ್ನ ಮಾಡಲಾಗುವುದು.ಪ್ರಾರಂಭದಲ್ಲಿದುಗಡಇತ್ತು.ಈಗ ನಿರಾಳವಾಗಿದೆ ಎನ್ನುತ್ತಾರೆ ನಿರ್ದೇಶಕಜಡೇಶ್‌ಕುಮಾರ್.
ನಿರ್ದೇಶಕನ ಕನಸು ದೊಡ್ಡ ಪರದೆ ಮೇಲೆ ಕಾಣಿಸಿದಾಗ ಮಾತ್ರಚಿತ್ರ ಹಿಟ್ ಆಗಲು ಕಾರಣವಾಗುತ್ತದೆ.ಸಾಮಾನ್ಯಕಥಾವಸ್ತುವನ್ನು ನೋಡುಗರುಇಷ್ಟಪಡುವಂತೆತೋರಿಸಲಾಗಿದೆಎಂಬುದುಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್ ನುಡಿ.ಚಿತ್ರತಂಡ ಮತ್ತು ಸಿನಿಮಾಕ್ಕೆ ಸೇತುವೆಯಾಗಿ ಮಾದ್ಯಮದವರ ಸಹಕಾರ ಎಂದಿಗೂ ಮರೆಯಲಾಗದು. ಮೊನ್ನೆದರ್ಶನ್ ಹೇಳಿಕೆಯನ್ನು ತಪ್ಪಾಗಿಅರ್ಥೈಸಲಾಗಿದೆ.ನಿರ್ಮಾಪಕರ ಪಾಡು ಹೇಳುವಂತಿಲ್ಲ. ವಾರಕ್ಕೆ ೮-೧೦ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದಯಾವುದನ್ನು ನೋಡಬೇಕೆಂದುಜನರುಗೊಂದಲದಲ್ಲಿಇರುತ್ತಾರೆ.ಇದರನ್ವಯ ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿಯು ಸೂಕ್ತ ನಿಯಮವನ್ನುಜಾರಿಗೆತರಬೇಕೆಂದು ನಿರ್ಮಾಪಕರುಕೋರಿಕೊಂಡರು. ನಾಯಕ ಪ್ರಜ್ವಲ್‌ದೇವರಾಜ್, ನಾಯಕಿ ನಿಶ್ವಿಕಾನಾಯ್ಡು, ಪ್ರಶಾಂತ್‌ಸಿದ್ದಿ, ಅರ್ಜುನ್, ಬೇಬಿ ಆರಾಧ್ಯ,ಛಾಯಾಗ್ರಾಹಕಆರೂರುಸುಧಾಕರಶೆಟ್ಟಿ, ಗೋವಿಂದೇಗೌಡ, ಅರವಿಂದ್‌ರಾವ್ ಮುಂತಾದವರು ಉಪಸ್ತಿತರಿದ್ದು ಸಂತಸ ಹಂಚಿಕೊಂಡರು.