Rambo 2.Chuttu Chuttu Song 100m.Press Meet.

Wednesday, February 12, 2020

288

ಚುಟುಚುಟು ಹಾಡಿಗೆ ೧೦ ಕೋಟಿಜನರು ಫಿದಾ

ಚಂದನವನದಲ್ಲಿ ಚಿತ್ರಗಳು ೫೦,೧೦೦ ಮತ್ತು ೧೫೦ ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯುವ ಕಾಲವೊಂದಿತ್ತು. ಈಗ ಅದು ಬದಲಾಗಿ ೨೫,೫೦ ದಿನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.  ಆದರೆ ಪ್ರಥಮಎನ್ನುವಂತೆ ‘ರ‍್ಯಾಂಬೊ ೨’ ಚಿತ್ರದಒಂದು ಹಾಡನ್ನು ಹತ್ತುಕೋಟಿಜನರು ವೀಕ್ಷಿಸಿದ್ದಾರೆ.ಇದರ ಹಕ್ಕುಗಳನ್ನು ಪಡೆದಿರುವಆನಂದ್‌ಆಡಿಯೋದವರುಇದರ ಯಶಸ್ಸಿಗಾಗಿ ಅರ್ಥಪೂರ್ಣ ಸಂಭ್ರಮಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ೨೦೧೮ರಲ್ಲಿ ಬಿಡುಗಡೆಯಾಗಿ, ಹಿಟ್‌ಆಗಿದ್ದ ಸಿನಿಮಾಕ್ಕೆ ಅನಿಲ್‌ಕುಮಾರ್ ನಿರ್ದೇಶನ,  ಶಿವು ಬೇರ್ಗಿ ಸಾಹಿತ್ಯ, ಅರ್ಜುನ್‌ಜನ್ಯಾ ಸಂಗೀತ, ಶಮಿತಮಲ್ನಾಡ್-ರವೀಂದ್ರಸೊರಗಾವಿ ಗಾಯನ, ಸುಧಾಕರ್.ಎಸ್. ಛಾಯಾಗ್ರಹಣ, ಮೋಹನ್.ಬಿ.ಕೆರೆ ಕಲೆ,ಕಾಸ್ಟ್ಯೂಮ್ ಸಚಿನಾಹೆಗ್ಗಾರ್,  ನೃತ್ಯಭೂಷಣ್ ಇವರುಗಳ ಸಾರಥ್ಯದಲ್ಲಿ ನಾಯಕ ಶರಣ್, ನಾಯಕಿ ಆಶಿಕಾರಂಗನಾಥ್ ಜಬರ್‌ದಸ್ತ್ ಹೆಜ್ಜೆ ಹಾಕಿದ್ದರು. ಉತ್ತರಕರ್ನಾಟಕದಜನಪದ ಶೈಲಿಯಲ್ಲಿ ಮೂಡಿಬಂದಿದ್ದ ಹಾಡುಎಷ್ಟರಮಟ್ಟಿಗೆಯಶಸ್ಸು ಗಳಿಸುತ್ತು ಎಂದg, ಶಾಲಾ, ಕಾಲೇಜುಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಸದರಿ ಹಾಡಿಗೆವಿದ್ಯಾರ್ಥಿಗಳು ಕುಣಿಯುತ್ತಿದ್ದರು.

ಆನಂದ್‌ಆಡಿಯೋ ಸಂಸ್ಥೆಯಆನಂದ್ ಮತ್ತು ಶ್ಯಾಮ್, ಸಂಸ್ಥೆಗೆ ಇಪ್ಪತ್ತು  ವರ್ಷತುಂಬಿದೆ. ಸಂಸ್ಥೆಯಿಂದ ಒಳ್ಳೆಯ ಹಾಡುಗಳು ಮೂಡಿಬರುತ್ತಿವೆಎಂದು ಖುಷಿ ಹಂಚಿಕೊಂಡರು.  

ಹಾಡಿನಚಿತ್ರೀಕರಣದಲ್ಲಿಪಾಲ್ಗೋಂಡಿದ್ದಾಗ ಮಂಡಿಗೆಏಟುಆಗಿತ್ತು. ಅದನ್ನು ಲೆಕ್ಕಿಸದೆ ಕೆಲಸ ಮಾಡಿದ ಶ್ರಮಇಂದುಎಲ್ಲರೂಗುರುತಿಸುವಂತಾಗಿದೆ.ಇದರ ಯಶಸ್ಸಿನ ಹಿಂದೆತಂತ್ರಜ್ಘರ ಶ್ರಮವೆಂದು  ಶರಣ್ ನೆನಪಿಗೆ ಜಾರಿದರು. ಪಾತ್ರದ ಸಲುವಾಗಿ ತೂಕ ಇಳಿಸಿಕೊಂಡಿರುವುದಾಗಿ ಆಶಿಕಾರಂಗನಾಥ್ ಹೇಳಿದರು.ಅಮೇರಿಕಾದಲ್ಲಿ ಹಾಡುಗಳು ಬರುವಾಗಇಂತಹ ಸಾಧನೆ ನಮ್ಮಕನ್ನಡದಲ್ಲಿಏಕಿಲ್ಲವೆಂದುಖೇದವಾಗುತ್ತಿತ್ತು.ಕಾಮಿಡಿ ಸಿನಿಮಾದಲ್ಲಿ ಹಾಡು ಹಿಟ್‌ಆಗಿದ್ದು ಸಂತಸತಂದಿದೆಅಂತಾರೆ ನಿರ್ಮಾಪಕಅಟ್ಲಾಂಟನಾಗೇಂದ್ರ.

ತಂತ್ರಜ್ಘರುಚಿತ್ರಕ್ಕೆ ಹಣ ಹೂಡಿದ್ದಾರೆ. ಇವರೊಂದಿಗೆ ನಾನು ಭಾಗಿಯಾಗಿರುವುದರಿಂದ ನಿರ್ಮಾಪಕನಾಗಿ ಮೊದಲ ಪ್ರಯತ್ನ ನೆಮ್ಮದಿ ತಂದಿದೆಎಂದುಚಿಕ್ಕಣ್ಣ ನಕ್ಕರು.ತಂಡದಲ್ಲಿ ಕೆಲಸ ಮಾಡಿದವರೆಲ್ಲಾ ನಿರ್ಮಾಪಕರು. ಶ್ರೀಮುರಳಿ ತಂತ್ರಜ್ಘರಿಗೆಗೌರವಕೊಡುವಕಾರಣಅವರಿದಲೇ ಫಲಕ ವಿತರಣೆ ಮಾಡಲುಯೋಜನೆ ಹಾಕಿಕೊಂಡಿರುವುದಾಗಿ ಸಿನಿಮಾಕ್ಕೆ ಶಕ್ತಿಯಾಗಿರುವತರುಣ್‌ಸುದೀರ್ ಹೇಳಿಕೊಂಡರು.ಏನೇ ಸಾಧನೆ ಮಾಡಿದರೂಅದರ ಹಿಂದೆತಂಡದ ಶ್ರಮಇರುತ್ತದೆ.ಗೀತೆಎಲ್ಲರಿಗೂಇಷ್ಟವಾದಾಗಕಷ್ಟಪಟ್ಟಿದ್ದು ಸಾರ್ಥಕವಾಗುತ್ತದೆಂದು ಶ್ರೀಮುರಳಿ ಅಭಿಪ್ರಾಯಪಟ್ಟರು.

 

Copyright@2018 Chitralahari | All Rights Reserved. Photo Journalist K.S. Mokshendra,