ಮತ್ತೋಂದು ಹಳ್ಳಿ ಹಿನ್ನಲೆಯಕಥನ
ಹಳ್ಳಿ ಹಿನ್ನಲೆಯಕುರಿತಾದ ಸಾಕಷ್ಟು ಚಿತ್ರಗಳು,ಅದರಲ್ಲೂ ಮಂಡ್ಯಾ ಭಾಷೆಯ ಸೊಗಡಿನ ಶೈಲಿಯಲ್ಲಿ ಹಲವು ಸಿನಿಮಾಗಳು ಬಂದಿವೆ, ಬರುತ್ತಲೆಇದೆ.ಇದರ ಸಾಲಿಗೆ ‘ಶಿವ’ ಸೇರ್ಪಡೆಯಾಗಿದೆ.ರಂಗಭೂಮಿಕಲಾವಿದ, ಸಾಹಿತಿ,ರೈತ, ಪೋಷಕ ನಟ, ಕಿರುತೆರೆಗೆ ‘ರೈತರ ಈ ಪರಿಯ ಪಾಡನ್ನುಒಮ್ಮೆ ನೋಡಿಕಾಪಾಡಿ’ ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿರುವ ಮೈಸೂರು ಮೂಲದರಘುವಿಜಯಕಸ್ತೂರಿಇವೆಲ್ಲಾ ಸಂವೇದನೆಗಳಿಂದ ಸಿನಿಮಾಕ್ಕೆಕತೆ,ಚಿತ್ರಕತೆ ರಚಿಸಿ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ,ಮನೆಗೆ ಮಾರಿ, ಊರಿಗೆಉಪಕಾರಿಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಮಂಡ್ಯಾದಗ್ರಾಮೀಣ ಭಾಗದಲ್ಲಿ ನಡೆಯುವ ನವಿರಾದ ಪ್ರೇಮಕತೆ, ಲೋಕಲ್‌ರೌಡಿಸಂ, ಗ್ಯಾಂಗ್‌ಸ್ಟರ್ ಮತ್ತುರಾಜಕೀಯ ಸುತ್ತ ಸಿನಿಮಾವು ಸಾಗಲಿದೆ. ಸಂಸ್ಕ್ರತಕಲಿತರೆದೇಶ ಸುತ್ತಬಹುದೆಂದು ಸಂಭಾಷಣೆಯಲ್ಲಿ ಹೇಳಲಾಗಿದೆ.ಪತ್ರಿಕೆಯಲ್ಲಿ ಬಂದಂತ ಲೇಖನ ನೋಡಿಡೈಲಾಗ್ ಬಳಸಿಕೊಂಡಿರುವುದಾಗಿ ಸ್ಪಷ್ಟನೆಕೊಡುತ್ತಾರೆ.
ಸಂಪ್ರದಾಯಸ್ಥ ಮನೆತನೆದವಳು, ಶಿಕ್ಷಕಿಯಾಗಿ ಧರಣಿ ನಾಯಕಿ.ಖಳನಟನಾಗಿ ನಿಶಾಂತ್, ಉಳಿದಂತೆ ಬೇಬಿ ಸಾನ್ವಿ, ಪಾಲಳ್ಳಿಉಮೇಶ್, ಸತೀಶ್, ಗೀತ, ರಂಜನ್‌ಶೆಟ್ಟಿ, ಶ್ರೀವತ್ಸ, ಚೇತನ್‌ರಾವ್, ಭೂಪತಿ, ಮಂಜುಸೂರ್ಯ, ಉಮೇಶ್‌ಕೋಟೆ ನಟಿಸಿದ್ದಾರೆ.ಸಹ ನಿರ್ದೇಶನ ವಿಕ್ರಂಯಶೋಧರ, ಸಂಗೀತ ಸತೀಶ್‌ಬಾಬು, ಛಾಯಾಗ್ರಹಣರಮೇಶ್‌ರಾಜು, ಸಂಕಲನ ಕುಮಾರ್‌ಕೋಟೆಕೊಪ್ಪ, ಸಾಹಸ ರಾಮ್‌ಬಾಬು ನಿರ್ವಹಿಸಿದ್ದಾರೆ.ರೌದ್ರ್ರ-ರೋಚಕ-ರಮಣೀಯಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಆರ್.ವಿ.ಕೆ.ಕ್ರಿಯೇಶನ್ಸ್ ಮೂಲಕ ಸಿದ್ದಗೊಂಡಿರುವ ಚಿತ್ರವು ಶಿವರಾತ್ರಿ ಹಬ್ಬದಂದುಶಿವ ಶಿವಎನ್ನಲು ಸಜ್ಜಾಗುತ್ತಿದೆ.