Navaratna.Film Press Meet.

Tuesday, February 11, 2020

300

ತಿರುವುಗಳು, ಕುತೂಹಲಗಳ ಗುಚ್ಚ  ನವರತ್ನ

ಹೊಸಬರ ‘ನವರತ್ನ’ ಚಿತ್ರವುಸೆಸ್ಪನ್, ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ.  ಒಂದುಕತೆ ಶುರುವಾದರೆ ಸಾಕಷ್ಟು ಆಟಗಳು ಬರುತ್ತದೆ, ಸಣ್ಣದೊಂದುಕುತೂಹಲ ತೆರೆದುಕೊಂಡರೆ, ಬೇರೊಂದು ಹುಟ್ಟಿಕೊಳ್ಳುತ್ತದೆ. ಇವೆಲ್ಲವುಇರುವುದರಿಂದಚಿತ್ರ್ರದಕುರಿತಂತೆ ಮಾಹಿತಿಯನ್ನುಗೌಪ್ಯವಾಗಿಇಡಲಾಗಿದೆ.ಇಬ್ಬರು ಹುಡುಗರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸೇರಿಕೊಳ್ಳುತ್ತಾಳೆ.ಆಕಸ್ಮಿಕವಾಗಿ ಮೂವರು ಕಾಡಿನೊಳಗೆ ಹೋಗುತ್ತಾರೆ, ಅದರಉದ್ದೇಶ, ಕಾರಣ ಏನು ಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಇದರಜೊತೆಗೆ ಶೀರ್ಷಿಕೆ, ನಾಯಕ ಹಾಗೂ ನಾಯಕಿಕತೆಯು ಬರಲಿದ್ದುಕ್ಲೈಮಾಕ್ಸ್‌ದಲ್ಲಿಎಲ್ಲವು ಮಿಶ್ರಣಗೊಳ್ಳುವುದು ವಿಶೇಷ. ಪ್ರಾರಂಭದಲ್ಲಿ ಸನ್ನಿವೇಶಗಳು ಗೊಂದಲ ಸೃಷ್ಟಿಸುತ್ತದೆ.ನಂತರದ ಭಾಗದಲ್ಲಿಅದಕ್ಕೆ ಸಮಜಾಯಷಿ ನೀಡಲಾಗಿದೆ.ಶೃಂಗೇರಿ ಬಳಿ ಇರುವ ಕಿಗ್ಗ ಅರಣ್ಯಪ್ರದೇಶ, ಇಂಡೋನೇಶಿಯಾ ಕಾಡಿನಲ್ಲಿ ಮಾತಿನ ಭಾಗ, ಹಾಡನ್ನು ಚಿತ್ರಿಸಿದ್ದು, ಮತ್ತೋಂದುಗೀತೆಗಾಗಿ ಲಡಾಕ್‌ಗೆ ಹೋಗಲಾಗಿದೆ.

ರಚನೆ, ನಿರ್ದೇಶನ ಮತ್ತು ನಾಯಕ ಪ್ರತಾಪ್‌ರಾಜ್. ವನ್ಯಜೀವಿ ಛಾಯಾಗ್ರಾಹಕಿಯಾಗಿ ನಿರ್ಭಂದಿತಅರಣ್ಯ ಪ್ರದೇಶಕ್ಕೆ ಹೋಗಲು ಬಲವಾದಕಾರಣವಿರುತ್ತದೆ.ಅಂತಹ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನಾಯಕಿ ಮೋಕ್ಷಾಕುಶಾಲ್. ಗೆಳೆಯನಾಗಿ ಅಮಿತ್ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವೆಂಗಿ ಸಂಗೀತ, ಛಾಯಾಗ್ರಹಣರೋಜಿ.ಪಿ.ಜಾನ್-ಲಕ್ಷೀರಾಜ್, ಸಂಕಲನ ವಿಷ್ಣು.ಎಸ್, ಹಿನ್ನಲೆ ಶಬ್ದ ಪ್ರವೀಣ್‌ಪೌಲ್,  ಮೂರು ಸಾಹಸಗಳಿಗೆ  ರಿಯಲ್‌ಸತೀಶ್ ಕೆಲಸ ಮಾಡಿದ್ದಾರೆ. ಸೋದರ ನಾಯಕನಾಗಿರುವ ಸಿನಿಮಾಕ್ಕೆ ಮಂಡ್ಯಾದ ಸಿ.ಪಿ.ಚಂದ್ರಶೇಖರ್ ನಿರ್ಮಾಣ ಮಾಡಿರುವಚಿತ್ರಕ್ಕೆಯುಎ ಪ್ರಮಾಣಪತ್ರ ಪಡೆದುಕೊಂಡಿದ್ದು, ಇದೇ ತಿಂಗಳು ಬಿಡುಗಡೆಯಾಗುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,