Old Monk.Film Pooja and Press Meet.

Wednesday, February 12, 2020

275

ಸೆಟ್ಟೇರಿದಓಲ್ಡ್ ಮಾಂಕ್

ಅದಿತಿಪ್ರಭುದೇವ ಮತ್ತು ಶ್ರೀನಿ ‘ರಂಗನಾಯಕಿ’ ಚಿತ್ರದಲ್ಲಿಜೋಡಿಯಾಗಿ ಕಾಣಿಸಿಕೊಂಡಿದ್ದರು.ಈಗ ಇಬ್ಬರು ‘ಓಲ್ಡ್ ಮಾಂಕ್’ ಸಿನಿಮಾಕ್ಕೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಹಾಲಕ್ಷೀ ಮಂದಿರದಲ್ಲಿ ನಡೆದ ಸರಳ ಮಹೂರ್ತ ಸಮಾರಂಭಕ್ಕೆಧ್ರುವಸರ್ಜಾ  ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿಟಗರು, ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಲವು ಸಿನಿಪಂಡಿತರು  ಹಾಜರಿದ್ದರು. ಶ್ರೀನಿ ನಾಯಕಅಲ್ಲದೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.ಐದು ಹಾಡುಗಳಿಗೆ ಸೌರಭ್ವೈಭವ್‌ಸಂಗೀತ, ಶ್ರೀಶಕೂದುವಳ್ಳಿ ಛಾಯಾಗ್ರಹಣ, ರಚನೆ ಸಂತೋಷ್‌ನಾರಾಯಣ್-ಶ್ರೀನಿ-ಪ್ರಸನ್ನವಿ.ಎಂ, ಸಂಭಾಷಣೆ ಪ್ರಸನ್ನ.ವಿ.ಎಂ, ಸಂಕಲನ ದೀಪು.ಎಸ್.ಕುಮಾರ್‌ಅವರದಾಗಿದೆ.ಎರಡು ಹಂತದಲ್ಲಿ ಬೆಂಗಳೂರು, ಮೈಸೂರು ಸುತ್ತಮುತ್ತಚಿತ್ರೀಕರಣ ನಡೆಸಲುಯೋಜನೆ ರೂಪಿಸಿಕೊಂಡಿದ್ದಾರೆ.

‘ಹಳೇ ಸನ್ಸಾಸಿ’ ಎಂದುಕನ್ನಡದಲ್ಲಿ ಶೀರ್ಷಿಕೆಗೆಅರ್ಥಕೊಡುತ್ತದೆ. ಪೋಸ್ಟರ್‌ದಲ್ಲಿ ಸಿನಿಮಾದಒಂದು ಏಳೆಯನ್ನು ಲೋಗೋದಲ್ಲಿ  ಹೇಳಲಾಗಿದೆ. ಮನರಂಜನೆತುಂಬಿದಕತೆಯು ನಾರದಮುನಿ ಬಗ್ಗೆ ಇರುತ್ತದೆ. ದೇವಲೋಕದಲ್ಲಿ ಕೃಷ್ಣ-ರಾಧೆ ಸಲ್ಲಾಪದಲ್ಲಿಇದ್ದಾಗ ಮಧ್ಯೆ ಬರುವ ನಾರದನಿಗೆ ಶ್ರೀಕೃಷ್ಣನು ಕೋಪದಿಂದ ನೀನು ಯಾರನ್ನೆ ಹುಡುಗಿ ನೋಡಿದರೂ ಅವಳ ಮೇಲೆ ಪ್ರೀತಿ ಹುಟ್ಟುವಂತೆ ಶಾಪ ಕೊಡುತ್ತಾನೆ. ಇದರಿಂದ ಭೂಲೋಕಕ್ಕೆ ಬರುವ ನಾರದ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆಎಂಬುದನ್ನುಕಾಮಿಡಿ ಮೂಲಕ ತೋರಿಸಲಾಗುವುದು. ತಂದೆಯಾಗಿಎಸ್.ನಾರಾಯಣ್ ನಟನೆಇದೆ. ಇವರು ಪಾತ್ರದಲ್ಲಿ ಮಗನ ಎಲ್ಲಾ ಕೆಲಸಕ್ಕೂ ಎಸ್, ಅದೇ  ಲವ್ ವಿಷಯ ಬಂದಾಗ ನೋ ಎನ್ನುತ್ತಾರಂತೆ. ಉಳಿದಂತೆ ರಾಮಕೃಷ್ಣ, ಅರುಣಬಾಲರಾಜ್ ನಟನೆಇದೆ.ಇದರಜೊತೆಗೆಆರು ಜಿಲ್ಲೆಗಳಲ್ಲಿ ಅಡಿಷನ್ ಮಾಡಲಾಗಿ ೧೦೦ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಂಬೆ ಮೂಲದ ಪ್ರದೀಪ್‌ಶರ್ಮಾಅವರು ಸಿದ್ದಿ ಎಂಟರ್‌ಟೈನ್ ಮೆಂಟ್ ಮೂಲಕ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ.

 

Copyright@2018 Chitralahari | All Rights Reserved. Photo Journalist K.S. Mokshendra,