Bichugathi.Film Teasor Rel.

Saturday, February 15, 2020

317

ಬಿಚ್ಚುಗತ್ತಿಗೆಚಂದನವನದ ಶುಭಹಾರೈಕೆ

ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಛಾಪ್ಟರ್-೧ ಚಿತ್ರದಟೀಸರ್, ಟ್ರೈಲರ್‌ಹರಿಪ್ರಿಯಾ ಅನುಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು. ಕಲಾವಿದರುಗಳಾದ ಧನಂಜಯ್, ವಿಕ್ಕಿ, ವೈಭವ್, ಸಚ್ಚಿನ್, ಶ್ರೀಲೀಲಾ, ಅಪೂರ್ವ, ನಿರ್ದೇಶಕರುಗಳಾದ ಎ.ಪಿ.ಅರ್ಜುನ್, ವಾಸು, ಮಹೇಶ್‌ಕುಮಾರ್, ಸಹನಾಮೂರ್ತಿ, ನವೀನ್‌ರೆಡ್ಡಿ, ಸಿಂಪಲ್‌ಸುನಿ, ಅದರಂತೆ ಸ್ಟಾರ್ ನಿರ್ಮಾಪಕರುಳಾದ ಸುಪ್ರಿತ್, ಟಿ.ಆರ್.ಚಂದ್ರಶೇಖರ್, ಜಾಗ್ವಾರ್‌ಮನೋಹರ್ ಮುಂತಾದವರು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಹಿರಿಯ ಸಾಹಿತಿಡಾ.ಬಿ.ಎಲ್.ವೇಣುವಿರಚಿತ ‘ದಳವಾಯಿ ಮುದ್ದಣ’ ಕಾದಂಬರಿಯನ್ನುಕುರಿತಾದನ್ನುಚಿತ್ರರೂಪಕ್ಕೆರೂಪಾಂತಿಸಲಾಗಿದ್ದು, ಇವರದೇಚಿತ್ರಕತೆ,ಸಂಭಾಷಣೆಇರಲಿದೆ.

ಭರಮಣ್ಣನಾಯಕನಾಗಿರಾಜವರ್ಧನ್ ನಾಯಕ, ಸಿದ್ದಾಂಬೆಯಾಗಿ ಹರಿಪ್ರಿಯಾ ನಾಯಕಿ. ಬಾಹುಬಲಿದಲ್ಲಿಖ್ಯಾತಿಯ ಪ್ರಭಾಕರ್  ದಳವಾಯಿಮುದ್ದಣ್ಣನಾಗಿ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತಮ್ಮ ಪಾತ್ರಕ್ಕೆಕಂಠದಾನ ಮಾಡಿದ್ದಾರೆ. ಉಳಿದಂತೆ ಶರತ್‌ಲೋಹಿತಾಶ್ವ, ಶ್ರೀನಿವಾಸಮೂರ್ತಿ, ಸ್ಪರ್ಶಾರೇಖಾ, ಡಿಂಗ್ರಿನಾಗರಾಜ್, ಕಲ್ಯಾಣಿ,ಪ್ರಕಾಶ್‌ಹೆಗ್ಗೋಡು, ರಮೇಶ್‌ಪಂಡಿತ್, ಸುನೇತ್ರಪಂಡಿತ್,ಉಗ್ರಂರವಿ  ಮುಂತಾದವರು ನಟಿಸಿದ್ದಾರೆ.

ಐತಿಹಾಸಿಕ ಚಿತ್ರ ಮಾಡುವುದು ಅಷ್ಟು ಸುಲುಭವಲ್ಲ. ಇದನ್ನು ನಾನೇ ಮಾಡಬೇಕಾಗಿತ್ತು. ನನ್ನ ಬಜೆಟ್‌ಗೆತಕ್ಕಂತೆ ನಿರ್ಮಾಪಕರು ಸಿದ್ದರಿರಲಿಲ್ಲ. ನಿರ್ದೇಶಕ ಸಂತುಗೆ ಒಳ್ಳೆ ಚಿತ್ರಕೊಡಿಸುತ್ತೇನೆಂದು ಮಾತುಕೊಟ್ಟಿದ್ದೆ.ಅದರಂತೆಅವರಿಗೆಜವಬ್ದಾರಿ ವಹಿಸಿಲಾಗಿ, ಅದನ್ನುಅವರುಚೆನ್ನಾಗಿ ನಿಭಾಯಿಸಿದ್ದಾರೆ.ರಾಜವರ್ಧನ್ ಭವಿಷ್ಯದ ನಟನಾಗಲಿದ್ದಾರೆ. ಬುದ್ದಿ ಉಪಯೋಗಿಸಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು. ಯಾವುದೇಕಾರಣಕ್ಕೂ ನಿರ್ದೇಶಕ, ನಿರ್ಮಾಪಕರಿಗೆ ಹೊರೆಯಾಗಬಾರದು.ಸಂಗೀತದಲ್ಲಿ ಬಂದಿರುವ ಹಾಡು, ಗಮ್ಮತ್ತು ನೋಡಲುಚೆನ್ನಾಗಿದೆ.ಇನ್ನುಕರ್ನಾಟಕ ಅನೇಕ ಸಾಧಕರು, ಪಾಳೇಗಾರರ ಕತೆಗಳು ಇದೆ. ಈಗಿನ ತಂತ್ರಜ್ಘಾನಕ್ಕೆ ಹೊಂದಿಕೊಳ್ಳುವಂತೆ ಇಂತಹ ಚಿತ್ರಗಳನ್ನು ಮಾಡಬಹುದೆಂದು ಹೇಳಿ ತುರ್ತು ಕೆಲಸ ನಿಮಿತ್ತ  ಹಂಸಲೇಖಾ ನಿರ್ಗಮಿಸಿದರು.

೪೫ ವರ್ಷಅನುಭವ, ೫೬೦ ಚಿತ್ರಕ್ಕೆ ಮಾದ್ಯಮದ ಪ್ರೋತ್ಸಾಹದಿಂದಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇನೆ. ಮಗ ರಾಜವರ್ಧನ್ ಸ್ವಪ್ರತಿಭೆಯಿಂದಇಲ್ಲಿಯವರೆಗೂ ಬಂದಿದ್ದಾನೆ. ನನಗೆ ನೀಡಿದ ಸಹಕಾರವನ್ನು ಇವನಿಗೂ ಕೊಡಬೇಕೆಂದುಡಿಂಗ್ರಿನಾಗರಾಜ್‌ಕೋರಿದರು.

ಕಮರ್ಷಿಯಲ್ ಚಿತ್ರಗಳನ್ನು  ನಿರ್ದೇಶಿಸಿರುವ ಹರಿಸಂತೋಷ್ ಮೊದಲ ಬಾರಿಆಕ್ಷನ್‌ಕಟ್ ಹೇಳಿದ್ದಾರೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವಚಿತ್ರವು ಫೆಬ್ರವರಿಕೊನೆವಾರದಂದುತೆರೆಕಾಣುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,