ಕಿಸ್ ನಿರ್ಮಾಪಕ, ನಿರ್ದೇಶಕರ ಹೊಸ ಚಿತ್ರ
ನವಿರಾದ ಪ್ರೇಮಕತೆ ಹೊಂದಿರುವ ‘ಕಿಸ್’ ಚಿತ್ರವುಸುಲಲಿತವಾಗಿಶತದಿನ ಪೂರೈಸಿದೆ.ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ಮಾಣ ಮಾಡಿರುವ ಎ.ಪಿ.ಅರ್ಜುನ್ ಸಿನಿಮಾಕ್ಕೆದುಡಿದವರಿಗೆ ನೆನಪಿನ ಕಾಣಿಕೆ ನೀಡುವಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ತಾತನಾಗಿ ಕಾಣಿಸಿಕೊಂಡಿರುವ ದತ್ತಣ್ಣಒಂದಷ್ಟು ಮಂದಿಗೆ ಫಲಕಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡುತ್ತಾಇಬ್ಬರು ಹೊಸಬರನ್ನುಇಟ್ಟುಕೊಂಡು ೧೦೦ ದಿವಸ ಆಟವಾಡಿಸಿದ್ದಾರೆ.ರಾಜಕುಮಾರ, ಯಜಮಾನ, ಈಗ ಕಿಸ್ ನೂರು ದಿನ ಕಂಡಿದೆ. ಮೂರರಲ್ಲೂ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಬಹುಶ: ನಾನಿರುವ ಚಿತ್ರಗಳು ಶತಕಕಾಣುತ್ತದೆಎಂದು ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.
ಪ್ರತಿಯೊಬ್ಬ ನಿರ್ಮಾಪಕರು ನೂರು ದಿವಸ ಪ್ರದರ್ಶನಕಾಣುವಚಿತ್ರ ಮಾಡಬೇಕಂಬ ಬಯಕೆಇರುತ್ತದೆ. ನಾವು ಕಷ್ಟಪಟ್ಟು ಪ್ರೀತಿಯಿಂದ ಮಾಡಿದ್ದನ್ನುಜನರು ಮುತ್ತಕೊಟ್ಟುಇಲ್ಲಿಯವರೆವಿಗೂತಂದು ನಿಲ್ಲಿಸಿದ್ದಾರೆ. ನಿರ್ದೇಶಕ ನಿರ್ಮಾಪಕಆದಾಗಅದರ ಕಷ್ಟ ಏನೆಂದು ತಿಳಿದುಕೊಂಡೆ. ಆ ಸ್ಥಾನಕ್ಕೆ ಬಂದ ಸಮಯದಲ್ಲಿಖಾತೆಯಲ್ಲಿ ಕೇವಲ ರೂ.೨೬೮ ಇತ್ತು. ಹಾಗೂ ಹೀಗೂ ಗೆಳಯರು, ಹಿತೈಷಿಗಳು ನನಗೆ ಒಳ್ಳೆಯದಾಗಲೆಂದು ಸಹಾಯ ಮಾಡಿದ್ದರಿಂದಲೇಒಂದೂವರೆಕೋಟಿ ಸಂದಾಯವಾಯಿತು. ಇದರಲ್ಲಿಚಿಕ್ಕಣ್ಣನ ಪಾಲು ಇದೆ. ಪ್ರತಿಯೊಬ್ಬರು ನಿರ್ಮಾಪಕರಾಗಿದ್ದರೂ ಪೋಸ್ಟರ್zಲ್ಲಿನನ್ನ ಹೆಸರುಇದೆ ಅಷ್ಟೇ. ಸೆಟ್ ಬಾಯ್‌ನಿಂದ ಹಿಡಿದುಕಲಾವಿದರು, ಪ್ರಚಾರಕರ್ತರು, ಮಾದ್ಯಮಗಳ ಸಹಕಾರದಿಂದಲೇಯಶಸ್ಸು ಸಿಕ್ಕಿದೆ. ಹರಿಕೃಷ್ಣ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಇರುವುದು ಪ್ಲಸ್ ಪಾಯಿಂಟ್‌ಆಗಿತ್ತು. ಇದರಲ್ಲಿಒಂದು ಹಾಡಿಗೆಅವರ ಮಗ ಆದಿಹರಿಕೃಷ್ಣ ಕೇವಲ ಹತ್ತು ನಿಮಷದಲ್ಲಿರಾಗ ಸಂಯೋಜಿಸಿದ್ದು, ಸೂಪರ್ ಹಿಟ್‌ಆಗಿದೆ. ಅವನಿಗೆ ಉಜ್ವಲ ಭವಿಷ್ಯವಿದೆಎನ್ನುತ್ತಾಅರ್ಜುನ್ ಮಾತಿಗೆ ವಿರಾಮ ಹಾಕಿದರು.
ನಾಯಕ ವಿರಾಟ್, ನಾಯಕಿ ಶ್ರೀಲೀಲಾ, ಶಿವರಾಜ್.ಕೆ.ಅರ್.ಪೇಟೆ, ಸುಂದರ್, ಶಮಂತ್‌ಶೆಟ್ಟಿ, ಗಿರಿ, ವಿ.ಹರಿಕೃಷ್ಣ, ತಂತ್ರಜ್ಘರುಗೌರವ ಸ್ವೀಕರಿಸಿದರು. ಡಿ ಬೀಟ್ಸ್‌ಒಡತಿ ಶೈಲಜನಾಗ್, ಅರ್ಜುನ್ ಪೋಷಕರು, ಕುಟುಂಬವರ್ಗದವರು ಹಾಜರಿದ್ದರು. ಇದರ ಮಧ್ಯೆ ‘ಕಿಸ್’ ಮೇಕಿಂಗ್, ನಡೆದು ಬಂದದಾರಿಕುರಿತಂತೆತುಣುಕುಗಳು, ‘ನೀನೆ ಮೊದಲು’ ಹಾಡು ಪ್ರದರ್ಶನಗೊಂಡಿತು.ಕೊನೆಂiiಲ್ಲಿ ನಿರ್ದೇಶಕರು ‘ಅದ್ದೂರಿ ಲವರ್’ ಚಿತ್ರನಿರ್ಮಾಣ ಮಾಡುವುದಾಗಿ ಹೇಳಿಕೊಂಡು ಎಲ್ಲರಿಂದ ಪೋಸ್ಟರ್ ಅನಾವರಣಗೊಳಿಸುವಲ್ಲಿಗೆ ಸುಂದರ ಸಮಯಕ್ಕೆ ಮಂಗಳ ಹಾಡಲಾಯಿತು.