Sagutha Doora Doora.Film Sucess Meet.

Monday, February 17, 2020

304

ಮತ್ತೆ ಬುಕ್ ಮೈ ಶೋ ವಿರುದ್ದಆಕ್ರೋಶ

ಎರಡು ವಾರದ ಕೆಳಗೆ ಬಿಡುಗಡೆಗೊಂಡಿದ್ದ ‘ದಿಯಾ’ ‘ಜೆಂಟಲ್‌ಮನ್’ ಚಿತ್ರಗಳಿಗೆ ಬುಕ್ ಮೈ ಷೋದಿಂದಅನ್ಯಾಯವಾಗಿದೆಎಂಬುದಾಗಿಆರೋಪ ಕೇಳಿಬಂದಿತ್ತು.ಅದರಂತೆ ಈ ವಾರತೆರೆಕಂಡ ಸದಭಿರುಚಿಯ ‘ಸಾಗುತದೂರದೂರ’ ಚಿತ್ರಕ್ಕೂಇದೇರೀತಿಯಾಗಿದೆ.ಗೆಲುವಿನ ಸಂಭ್ರಮ ಹಂಚಿಕೊಳ್ಳಲು ತಂಡದೊಂದಿಗೆ ಹಾಜರಾಗಿದ್ದ ನಿರ್ದೇಶಕರವಿತೇಜ ಮಾತನಾಡಿ ನಾವು ಒಳ್ಳೆ ಸಿನಿಮಾವನ್ನುಜನರಿಗೆಕೊಟ್ಟಿದ್ದೇವೆ.ಎಲ್ಲಡೆಯಿಂದಲೂಉತ್ತಮ ಪ್ರಶಂಸೆ ಸಿಕ್ಕಿದೆ.ಆದರೆ ಬುಕ್‌ಮೈ ಷೋದವರುದುಡ್ಡುಕೊಟ್ಟವರಿಗೆ ಒಳ್ಳೆಯ ರೇಟಿಂಗ್‌ಕೊಡುತ್ತಾರೆ.ಇಲ್ಲದಿದ್ದರೆಕಡಿಮೆ ಅಂಕ ನೀಡುತ್ತಾರೆ.ಇವರುನಡೆಸುತ್ತಿರುವ ಮಾಫಿಯಾದಿಂದಕನ್ನಡ ಸಿನಿಮಾಗಳು ಸಾಯುವ ಸ್ಥಿತಿಗೆ ಬಂದಿದೆ.೧೧ ಸಾವಿರ ಲೈಕ್ಸ್ ಬಂದಿದ್ದರೂಒಂದು ವಿಮರ್ಶೆಇಲ್ಲ. ಇದನ್ನು ನಡೆಸೋರುಕನ್ನಡಿಗರಲ್ಲ. ದೊರದಊರಿನಲ್ಲಿ ಕುಳಿತುಕೊಂಡು ದಂದೆ ನಡೆಸುತ್ತಾರೆ.ಇದುದೊಡ್ಡಅನ್ಯಾಯ.ಇದರ ವಿರುದ್ದಎಲ್ಲರೂಧ್ವನಿಗೂಡಿಸಬೇಕು.ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘ, ನಿರ್ದೇಶಕ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪದಾದಿಕಾರಿಗಳು ಇದರ ಬಗ್ಗೆ ಚರ್ಚೆ ನಡೆಸಿ ಇದಕ್ಕೊಂದು ಸೂಕ್ತ ಪರಿಹಾರ ಸೂಚಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲುಯಾರು ಮುಂದೆ ಬರುವುದಿಲ್ಲ. ಇಲ್ಲಿನವರೇ ಸೇರಿಕೊಂಡುಕನ್ನಡಆಪ್‌ವೊಂದನ್ನುತೆರೆದಾಗ ಮಾತ್ರ, ಇಂತಹ ದುರಳರನ್ನು  ಮಟ್ಟಹಾಕಬಹುದೆಂಬುದಾಗಿಆಕ್ರೋಶದಿಂದ ಹೇಳಿಕೊಂಡರು.

ಮುಖ್ಯ ಪಾತ್ರದಲ್ಲಿ ನಟಿಸಿರುವ ಮಹೇಶ್‌ಸಿದ್ದು ಮಾತನಾಡಿ ಬೇರೆಯವರು ನಮ್ಮ ಭಾಷೆಯ ಸಿನಿಮಾಗಳನ್ನು ಸಾಯಿಸುತ್ತಿದ್ದಾರೆ.ಫೈಟರ್‌ಆಗಿದ್ದವನಿಗೆ ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರನ್ನು ಎಂದಿಗೂ ಮರೆಯಲಾರೆ.ಸಾಕಷ್ಟು ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೋಂಡುದೇಹದಲ್ಲಿ ಮೂಳೆಗಳ ಶಕ್ತಿ ಕುಂದಿದೆಎನ್ನುವಾಗಅವರ ಕಣ್ಣುಗಳು ಒದ್ದೆಯಾಗಿದ್ದವು.

ಸುದ್ದಿಗೋಷ್ಟಿಯಲ್ಲಿಉಷಾಭಂಡಾರಿ, ಡಾ.ಜಾನ್ವಿಜ್ಯೋತಿ, ನವೀನ್‌ಕುಮಾರ್, ವಿಜಯ್, ಸಾಹಿತಿ ಸಂತೋಷ್‌ಕುಮಾರ್ ಮತ್ತು ನಿರ್ಮಾಪಕ ಅಮಿತ್.ಓ.ಪೂಜಾರಿ ಉಪಸ್ತಿತರಿದ್ದು ಎಲ್ಲರೂಇದೇ ವಿಷಯಕ್ಕೆಖೇದ ವ್ಯಕ್ತಪಡಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,