Yellinanna Vilasa.Film Press Meet.

Monday, February 17, 2020

308

ಎಲ್ಲಿ ನನ್ನ ವಿಳಾಸದಲ್ಲಿ ಎರಡುಕ್ಲೈಮಾಕ್ಸ್

ಉತ್ತರಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಕೇವಲ ಕನ್ನಡವಷ್ಟೇಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹಒಂದು ಪ್ರೀತಿಯ ಪ್ರತೀಕವಾದಅಡ್ರೆಸ್‌ನ್ನು ಬಿಟ್ಟು ನಮ್ಮದೆಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುಗಳು ಏನೆಂಬುದನ್ನು  ಸೆಸ್ಟನ್ಸ್, ಥ್ರಿಲ್ಲರ್ ಮೂಲಕ ತೋರಿಸಲಾಗಿದೆ. ಎರಡು ಕ್ಲೈಮಾಕ್ಸ್‌ಗಳು ಇರಲಿದ್ದುಅದನ್ನುಚಿತ್ರಮಂದಿರದಲ್ಲೇ ನೋಡಬೇಕೆಂತೆ.

ನಾಯಕಅಜಯ್‌ಅದಿತ್, ಶಿವಮೊಗ್ಗದ ಪವಿತ್ರನಾಯಕ್ ನಾಯಕಿ.ಇವರೊಂದಿಗೆ ಸೂರ್ಯದೀಪ್, ಲಕ್ಕ್ಕಿರಘು, ಸಾಕ್ಷಿ, ಸುನಂದ ಮುಂತಾದವರು ಬಣ್ಣ ಹಚ್ಚಿದ್ದಾರೆ.ಸಾಗರ.ಎಸ್.ಗಾವಡೆ ನಿರ್ದೇಶಕ. ಕಿನ್ನಾಳ್‌ರಾಜು-ಶಿವು-ವಿನಯಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ  ಮಹೇಶ್‌ಜೋಗಿ ಸಂಗೀತವಿದೆ. ಛಾಯಾಗ್ರಹಣ ಸಿ.ಎಸ್.ಸತೀಶ್, ಸಂಕಲನ ಸುಜೇಂದ್ರ, ನೃತ್ಯಅಕುಲ್.ಎನ್, ಸಾಹಸ ವಿ.ರಾವ್‌ದೇವ್ ಮತ್ತು  ಕುಂಘು ಫುಚಂದ್ರುಅವರದಾಗಿದೆ. ಸೋದರನ ಸಿನಿಮಾಕ್ಕೆ ತಾಳಿಕೋಟೆಯ ಸಂತೋಷ್.ಎಸ್.ಗಾವಡೆ ಹಣ ಹೂಡಿದ್ದಾರೆ.ಇವರೊಂದಿಗೆ ಕಲಬುರ್ಗಿಯ  ಲತೀಫ್.ಎನ್.ನಧಾಫ್ ಮತ್ತು ಮಿರ್ಜಾ ನಾದೀರ್‌ಬೇಗ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಪ್ರಚಾರದಎರಡನೇಹಂತವಾಗಿ ತುಣುಕುಗಳನ್ನು  ಗಣ್ಯರುಗಳು ಅನಾವರಣಗೊಳಿಸಿ ತಂಡಕ್ಕೆ  ಶುಭಹಾರೈಸಿದರು. ಶ್ರೀ ಖಾಸ್ಗತೇಶ್ವರ ಪ್ರೊಡಕ್ಷನ್ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯದಲ್ಲೆ  ಬಿಡುಗಡೆಯಾಗುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,