ಜಗತ್ತಿನ ಸರ್ವಶ್ರೇಷ್ಟ ಮಾದ್ಯಮ ಸಿನಿಮಾ - ನೀನಾಸಂ ಸತೀಶ್
ಯಾವುದೇ ವಿದ್ಯೆಕಲಿತರೆಅದರಿಂದಲೇಜೀವನ ಸಾಗಿಸಬಹದು.ಆದರೆಚಿತ್ರರಂಗವುಎಲ್ಲದಕ್ಕಿಂತದೊಡ್ಡದು.ಇದನ್ನುಅಲ್ಲಿಗೆ ನಿಲ್ಲಿಸಲು ಆಗುವುದಿಲ್ಲ. ಪ್ರತಿ ಬಾರಿಯೂ ಹೊಸತನ್ನುಜನರಿಗೆಕೊಡುತ್ತಾಇದ್ದರೆ ಮಾತ್ರ ಉಳಿಯಲು ಸಾಧ್ಯ.ಇಲ್ಲಿ ನಾವುಗಳು ಕಲಿಯಬೇಕು, ಕಲಿಯುತ್ತಾಇರಬೇಕೆಂದು ನಟ ನೀನಾಸಂ ಸತೀಶ್‌ಅಭಿಪ್ರಾಯ ಪಟ್ಟರು.ಅವರು ವಿನೂತನ ಶೀರ್ಷಿಕೆಯ ‘ಸಕೂಚಿ’ ಚಿತ್ರದಧ್ವನಿಸಾಂದ್ರಿಕೆಯನ್ನುಜನಾರ್ಪಣೆ ಮಾಡಿ ಮಾತನಾಡುತ್ತಿದ್ದರು.ಇವರ ಮಾತಿಗೆ ಧ್ವನಿಗೂಡಿಸಿದ ಪ್ರಮೋದ್‌ಶೆಟ್ಟಿಇಂದು ನೀವುಗಳು ಚಪ್ಪಾಳೆ ಹೊಡದರೆ ಸಾಲದು.ಚಿತ್ರಮಂದಿರಕ್ಕೆ ಹೋದಾಗ ಮಾತ್ರ ಸಿನಿಮಾ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆಎಂದರು.
ರಚಿಸಿ ಪ್ರಥಮ ಬಾರಿ ನಿರ್ದೇಶನ ಮಾಡಿರುವಅಶೋಕ್.ಎಸ್. ಚಿತ್ರವನ್ನು ಬಣ್ಣಿಸಿದ ರೀತಿ ಹೀಗಿತ್ತು: ಒಮ್ಮೆ ಶೃಂಗೇರಿರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನೂರಡಿಎತ್ತರದ ಮರವೊಂದು ನೆಲಕ್ಕೆ ಉರುಳಿತ್ತು. ಪಕ್ಕದಲ್ಲೆ ಮನೆಯೊಂದರಿಂದ ಸಕೂಚಿಎನ್ನುವ ಶಬ್ದವೊಂದು ಕೇಳಿಸುತ್ತದೆ.ನಾಲ್ಕು ವರ್ಷದತರುವಾಯ ಬೆಂಗಳೂರಿನ ಪಡ್ಡೆಗಾರ ಪಾಳ್ಯದ ಮನೆಯಿಂದಲೂಇದೇ ಶಬ್ದ ಕೇಳಿಸುತ್ತದೆ.ಇದರಅರ್ಥವೇನೆಂದು ಸಂಶೋಧನೆ ನಡೆಸಿದಾಗ, ಇದೊಂದುಅತಿಘೋರವಾದ, ಭಯಾನಕ, ಅಘೋರವಾದ ವಾಮಚಾರದ ಹೆಸರೇ ಶೀರ್ಷಿಕೆಯಾಗಿದೆ.ಒಂದೊಂದು ಪಾತ್ರವು ವಿಭಿನ್ನತೆಯಿಂದಕೂಡಿದ್ದು, ನಲವತ್ತು ಮಂಗಳಮುಖಿಯರನ್ನು ಬೇರೆರೀತಿಯಲ್ಲಿತೋರಿಸಲಾಗಿದೆ.ಚಿತ್ರ ಶುರು ಮಾಡಿದಾಗಿನಿಂದತಂದೆ, ಮಾವತೀರಿಕೊಂಡರು. ಅದರೂಹೆದರದೆಜೀವನದಲ್ಲಿ ಪ್ರಯೋಗ ಮಾಡಬೇಕೆಂದುಧೈರ್ಯ ಮಾಡಿ ಮುಗಿಸಲಾಗಿದೆ.ಪೂರಕವಾಗಿ ಸಾವಿನ ಸೂಚಿಎಂಬುದಾಗಿಅಡಬರಹದಲ್ಲಿ ಹೇಳಿಕೊಂಡಿದೆ. ಕೊನೆಗೆ ನಿಘಂಟುದಲ್ಲಿ ಪದಗಳನ್ನು ಹುಡುಕಲಾಗಿ, ಇದಕ್ಕೆ ಹನುಮಾನ್ ಚಾಲಿಸ ಸೇರಿಸಿಕೊಂಡು ಮಂತ್ರಗಳನ್ನು ಸಿದ್ದಪಡಿಸಲಾಗಿದೆ. ಯಾರಿಗೆಏನಾದರೂತೊಂದರೆಆಗಿದ್ದರೆ, ಸದರಿ ಮಂತ್ರವನ್ನು ಹೇಳಿದರೆ ಸರಿಹೋಗುತ್ತದೆಂದು ವ್ಯಾಖ್ಯಾನ ಬಿಚ್ಚಿಟ್ಟರು.
ರಂಗನಾಯಕಿ ನಾಯಕ ಹಾಗೂ ಪದ್ಮಾವತಿಧಾರವಾಹಿಯಲ್ಲಿ ಗುರುತಿಸಿಕೊಂಡಿರುವ ತ್ರಿವಿಕ್ರಮ್‌ಕಷ್ಟಪಟ್ಟುಡ್ಯಾನ್ಸ್, ಫೈಟ್ ಮಾಡಿದ್ದು, ಅಲ್ಲದೆ ಸ್ಮಶಾನದಲ್ಲಿರಾತ್ರಿ ಹೊತ್ತು ೬-೩ ಅಡಿ ಜಾಗದಲ್ಲಿ ಇಳಿದು ನಟನೆ ಮಾಡಿರುವುದು ವಿಶೇಷ. ಮೈಸೂರು ಮಾಡಲ್‌ಡಯಾನಮೇರಿ ನಾಯಕಿ. ಇವರೊಂದಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಬೀಟ್‌ಗುರುಕಾರ್ಯಕ್ರಮ ನಡೆಸುತ್ತಿದ್ದಗಣೇಶ್‌ಗೋವಿಂದಸ್ವಾಮಿ ಮೊದಲ ಅನುಭವಎನ್ನುವಂತೆ ಸಂಗೀತ ಸಂಯೋಜಿಸಿದ್ದಾರೆ. ಸಾಹಿತ್ಯ ಹೃದಯಶಿವ, ಛಾಯಾಗ್ರಹಣಆನಂದ್‌ಸುಂದರೇಶ, ಸಂಕಲನ ಮಹೇಶ್‌ತಗೋಟ, ನೃತ್ಯಆನಂದ್‌ಯಾದವ್, ಸಾಹಸ ಕುಂಗುಫುಚಂದ್ರು ನಿರ್ವಹಿಸಿದ್ದಾರೆ. ರಾಂಪೇಜ್ ಪ್ರೊಡಕ್ಷನ್ಸ್‌ಅಡಿಯಲ್ಲಿ ಬಿ.ಸಿ.ಅಶ್ವಿನ್ ನಿರ್ಮಾಣ, ಮಹಾವೀರಪ್ರಸಾದ್ ಮತ್ತು ಮಧುಕರ್.ಜೆ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.