Raaga Shrunga.Film Press Meet.

Saturday, February 15, 2020

263

ರಾಗ ಶೃಂಗಕ್ಕೆ ಬಿಡುಗಡೆ ಮೋಕ್ಷ

ಒಂಬತ್ತು ವರ್ಷದ ಕೆಳಗೆ ರೀಲ್‌ದಲ್ಲಿ ಚಿತ್ರೀಕರಿಸಿದ್ದ ‘ರಾಗ ಶೃಂಗ’ ಸಿನಿಮಾಕ್ಕೆ ಈಗಿನ ತಂತ್ರಜ್ಘಾನಕ್ಕೆಅನುಗುಣವಾಗಿಡಿಜಿಟೆಲ್ ಮಾದರಿಯಲ್ಲಿ ಸಿದ್ದಪಡಿಸಲು ಹತ್ತು ಲಕ್ಷಖರ್ಚುಆಗಿದೆ.ಸಂಗೀತದ ವಿಷಯವನ್ನೊಳಗೊಂಡ ಚಿತ್ರವುಇದಾಗಿದ್ದರೂ, ಸಂಗೀತ ವಿದ್ಯೆಯನ್ನುರೂಪಿಸುವ ಕಥಾವಸ್ತುಆಗಿರದೆ, ಅದರ ಪ್ರಭಾವದ ಪರಿಣಾಮಗಳನ್ನು ತೋರಿಸುವ ಮನರಂಜನೆಆಗಿರುತ್ತದೆ.ಉನ್ಮಾದ ಮಟ್ಟದಲ್ಲಿ ಮ್ಯೂಸಿಕ್ ಆಕರ್ಷಣೆಗೆ ಒಳಗಾದರೆ ಹಾನಿಕರತೊಂದರೆಗಳನ್ನು ಎದುರಿಸಬೇಕಾಗುವುದು ಎಂಬ ನೀತಿಇರಲಿದೆ. ಮಿತಿಯಲ್ಲೆಇದ್ದರೆಇದರ ಇಂಪು ಮನಮೋಹಕ, ಅದೇ ಮಿತಿಮೀರಿದರೆಇದರಿಂದಾಗುವ ಅವಘಡಗಳು ಹೇಳಲಾಗದು ಎಂಬುದನ್ನು ಸಿನಿಮಾದಲ್ಲಿ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಹಿರಿಯಛಾಯಾಗ್ರಾಹಕರಾಗಿದ್ದ ತುಳಸಿಗಣೇಶ್ ಮೊದಲ  ಅನುಭವಎನ್ನುವಂತೆಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ತಾರಗಣದಲ್ಲಿರಾಮಕೃಷ್ಣ, ರಾಘವೇಂದ್ರಪ್ರಸಾದ್, ಸುಕುಮಾರ್, ತಿರುಮಲೇಶ್, ಪುಷ್ಪಲತಾ ಮುಂತಾದವರು ನಟಿಸಿದ್ದಾರೆ. ವಾಸುದೇವಬ್ರಹ್ಮ ಸಂಗೀತದಲ್ಲಿಒಂಬತ್ತು ಹಾಡುಗಳು ಇರುವುದು ವಿಶೇಷ.ಕತೆ ಬರೆದು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಬಿ.ಆರ್.ನಟರಾಜ್ ಈ ಹಿಂದೆ ಮೂರು ಚಿತ್ರಗಳನ್ನು ಪಾರಮೌಂಟ್ ಫಿಲ್ಮ್‌ಇಂಟರ್‌ನ್ಯಾಷನಲ್ ಮೂಲಕ ನಿರ್ಮಾಣ ಮಾಡಿದ್ದು, ಸದ್ಯಸದರಿ ಸಿನಮಾದ ಗೀತೆಗೆಧ್ವನಿಯಾಗಿದ್ದು, ಪತ್ನಿರಂಜಿತಾನಟರಾಜ್ ಹೆಸರಿನಲ್ಲಿಬಂಡವಾಳ ಹೂಡಿದ್ದಾರೆ. ೨೦೧೮ರಂದು ಬಳ್ಳಾರಿಯಲ್ಲಿ ಚಿತ್ರವು ಬಿಡುಗಡೆಗೊಂಡು ಪ್ರಶಂಸೆಗೆ ಒಳಪಟ್ಟಿತ್ತು.ಇದರಿಂದಉತ್ತೇಜಿತರಾಗಿ ಶುಕ್ರವಾರದಂದುಜನರಿಗೆತೋರಿಸಲುನಿರ್ಮಾಪಕರುಸಿದ್ದತೆ ಮಾಡಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,