Selfie Mummy Google Daddy.Film Press Meet.

Saturday, February 15, 2020

290

ಮಮ್ಮಿಡ್ಯಾಡಿಗೆ ೪೦ ಜನ  ನಿರ್ಮಾಪಕರು

ಒಂದುಚಿತ್ರಕ್ಕೆ ಹೆಚ್ಚಂದರೆ ಮೂರು-ನಾಲ್ಕು ನಿರ್ಮಾಪಕರುಇರುತ್ತಾರೆ.ಮೊನ್ನೆ ‘ಬಿಲ್ ಗೇಟ್ಸ್’ ಚಿತ್ರದಲ್ಲಿ ಹದಿನಾರು ಹೂಡಿಕೆದಾರರುಇದ್ದರು.ಈ ದಾಖಲೆಯನ್ನು ‘ಸೆಲ್ಫಿ ಮಮ್ಮಿಗೂಗಲ್‌ಡ್ಯಾಡಿ’ ಚಿತ್ರವು ಮುರಿದಿದೆ.ಅಂದರೆ ಬರೋಬ್ಬರಿ ೪೦ ಸಮಾನ ಮನಸ್ಕರು ಸೇರಿಕೊಂಡು ಬಂಡವಾಳ ಹೂಡಿರುವುದು ವಿಶೇಷ. ಮೊಬೈಲ್ ಫೋನ್‌ಗೆಅಡಿಕ್ಟ್‌ಆಗಿರುವವರಗಾಥೆಯನ್ನುಹೇಳಲಿದೆ.ನಾಲ್ಕನೇ ಬಾರಿ ನಿರ್ದೇಶಕರಾಗಿರುವ ಮಧುಚಂದ್ರಒಂದಷ್ಟು ಮಂದಿಯನ್ನು ಭೇಟಿ ಮಾಡಿಅವರಿಂದ ಸಲಹೆ, ಅಭಿಪ್ರಾಯ ಪಡೆಯಲುಕತೆ ಹೇಳಿದ್ದಾರೆ. ನಮ್ಮ ಮನೆಯಲ್ಲಿಇದೇರೀತಿ ನಡೆಯುತ್ತಿದೆ.ನಾವೇಕೆ ಹಣ ಹಾಕಬಾರದೆಂದು ತೀರ್ಮಾನಿಸಿದ್ದೆ ಇಷ್ಟು ಮಂದಿ ಬರಲು ಸಾದ್ಯವಾಗಿದೆ.ಮೂರುಜನಸೇರಿಕೊಂಡರೆಅಲ್ಲಿ ಧೋರಣೆಗಳು ಹುಟ್ಟಿಕೊಳ್ಳುತ್ತದೆ.ಆದರೆ ನಿರ್ದೇಶಕರುಇವರೆಲ್ಲರನ್ನು ಸಂಭಾಳಿಸಿಕೊಂಡು ಬಿಡುಗಡೆ ಹಂತಕ್ಕೆತಂದಿರುವುದು ಸಾಧನೆಎನ್ನಬಹುದು.

ಇಬ್ಬರ ಮಕ್ಕಳ ಪೋಷಕರಾಗಿ ಸೃಜನ್‌ಲೋಕೇಶ್ ನಾಯಕ ಮತ್ತು ಮೇಘನಾರಾಜ್ ನಾಯಕಿ.ಪ್ರಸ್ತುತ ದಿನಗಳಲ್ಲಿ ಮನೆಮಂದಿಯೆಲ್ಲ ಮೊಬೈಲ್ ಫೋನ್‌ಗೆಅಂಟಿಕೊಂಡಿರುತ್ತಾರೆ.ಅದರಿಂದ ಆಗುವ ಪರಿಣಾಮಗಳೇನು?ಚಿತ್ರದಲ್ಲಿ ಪತಿಯಾವಾಗಲೂಗೂಗಲ್‌ದಲ್ಲಿ ಹೊಸ ಹೊಸ ವಿಷಯಗಳನ್ನು ಹುಡುಕುತ್ತಿದ್ದರೆ, ಪತ್ನಿಯಾರೇ ಮನೆಗೆ ಬಂದರೆ ಮೊದಲು ಸೆಲ್ಫಿತೆಗೆದುಕೊಂಡು ಫೇಸ್‌ಬುಕ್‌ದಲ್ಲಿಅಪಲೋಡ್ ಮಾಡುವುದು. ಮಕ್ಕಳು ಮೊಬೈಲ್‌ನೊಂದಿಗೆತಮ್ಮದೆ ಲೋಕದಲ್ಲಿಚರ್ಚೆ ನಡೆಸುತ್ತಿರುತ್ತಾರೆ.ಡಾಟಾ ಖಾಲಿ ಆದರೆ ಬೇರೆಯವರಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಏನೇನು ಅನಾಹುತಗಳು ಸಂಭವಿಸುತ್ತವೆ. ಮುಂದಿನ ಪರಿಣಾಮಗಳಿಗೆ ನಾವೇ ಜವಬ್ದಾರಿಗಳು ಆಗಿರುತ್ತವೆಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗುತ್ತಿದೆ.ತಾರಗಣದಲ್ಲಿಅಚ್ಯುತಕುಮಾರ್, ಪವನ್‌ಕುಮಾರ್, ಮಾ.ಅಲಾಪ್, ಬೇಬಿಶ್ರೀ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ಶಮಂತ್‌ನಾಗ್ ಸಂಗೀತ, ರವೀಂದ್ರನಾಥ್‌ಛಾಯಾಗ್ರಹಣ, ಸಂಕಲನ ಸುರೇಶ್‌ಆರ‍್ಮುಗಂ, ನೃತ್ಯ ಮದನ್‌ಹರಣಿಅವರದಾಗಿದೆ. ಆಕಾಶ ಬುತ್ತಿ ಫಿಲಿಂಸ್ ಮೂಲಕ ಸಿದ್ದಗೊಂಡಿರುವ ಸಿನಿಮಾಕ್ಕೆಇಲ್ಲಿಯವರೆಗೂ ೧೨೫ ಲಕ್ಷಖರ್ಚುಆಗಿದೆ.ಯುಪ್ರಮಾಣ ಪತ್ರಪಡೆದುಕೊಂಡಿರುವಚಿತ್ರವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ. ಮೊಬೈಲ್‌ಬಿಡಿ-ಗಿಡನೆಡಿ ಪರಿಕಲ್ಪನೆಯೊಂದಿಗೆತಂಡವು ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,