Cinema Bazaar.Film Press Meet.

Saturday, February 15, 2020

283

ನಿರ್ಮಾಪಕರಿಗೆ ಅನುಕೂಲವಾಗುವ  ಫಿಲಿಂ ಬಜಾರ್

ಕನ್ನಡ ಚಿತ್ರಗಳ ಪರ್ಯಾಯ ಮಾರುಕಟ್ಟೆಗೆ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ವು ನೂತನಆಲೋಚನೆಯನ್ನು ರೂಪಿಸಿದೆ. ಬಿಡುಗಡೆ ನಂತರಚಿತ್ರವುಡಿಜಿಟಲ್ ಮತ್ತು ವಾಹಿನಿ ಜೊತೆಗೆ ವಿಶ್ವ ಮಾರುಕಟ್ಟೆಗಳಿಗೆ ಸಿನಿಮಾಗಳನ್ನು ತೆಗೆದುಕೊಂಡು ಹೋಗಲು ‘ಡೈರಕ್ಟರ್ ಫಿಲಿಂ ಬಜಾರ್’ ಎನ್ನುವ ಹೊಸ ವೇದಿಕೆಯನ್ನು ಶುರು ಮಾಡಿದೆ. ಇದರಕುರಿತಂತೆ ಮಾಹಿತಿ ನೀಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್, ಕನ್ನಡ ಚಿತ್ರಗಳಿಗೆ ವಿಶ್ವ ಮಾರುಕಟ್ಟೆಕಲ್ಪಿಸಲುಇದನ್ನುಆರಂಭಿಸಲಾಗಿದೆ.ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ವಿವಿಧ ಸಿನಿಮಾ ಮಾರುಕಟ್ಟೆ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿದೆ.  ಚಂದನವನದ ನಿರ್ದೇಶಕರು, ನಿರ್ಮಾಪಕರು, ವಿತರಕರು, ಪ್ರದರ್ಶಕರು, ತಂತ್ರಜ್ಘರು ಮತ್ತುಕಲಾವಿದರುಇದರ ಪ್ರಯೋಜನ ಪಡೆಯಬಹುದು.ಸಿನಿಮಾಗಳನ್ನು ಮಾಡುವಜೊತೆಗೆಅದರ ಮಾರಾಟದಅರಿವುಇರಬೆಕುಎಂದರು.

ಕರ್ನಾಟಕ ಚಲನಚಿತ್ರಅಕಾಡೆಮಿ ಸಹಯೋಗದಲ್ಲೇ ಫೆಬ್ರವರಿ ೨೬,೨೭ ಹಾಗೂ ೨೮ ರಂದು ನಿರ್ದೇಶಕರ ಸಂಘ ಕಾರ್ಯಾಗಾರ ಆಯೋಜಿಸಿದೆ. ಚಿತ್ರೋತ್ಸವಕ್ಕೆ ಬರುವತಜ್ಘರೆಲ್ಲರನ್ನುಕಾರ್ಯಾಗಾರಕ್ಕೆ ಆಹ್ವಾನಿಸಿದೆ.ಹಾಗೆಯೇ ಮಾರ್ಚ್ ೧ ರಂದುಉದ್ಗಾಟನೆಕಾರ್ಯಕ್ರಮದಲ್ಲಿಸಚಿವರು, ಸಿನಿಪಂಡಿತರು ಭಾಗವಹಿಸಲಿದ್ದಾರೆ.ಅಲ್ಲಿಂದ ಸಂಘವು ನಿರಂತರವಾಗಿ ಫಿಲಿಂ ಬಜಾರ್ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈಗಾಗಲೇ ೧೫೦  ನಿರ್ಮಾಪಕರು ನೋಂದಣಿ ಮಾಡಿಕೊಂಡಿದ್ದಾರೆ. ಸಿನಿಮಾಗಳಲ್ಲಿ ೧೫೯ ರೀತಿಯ ಹಕ್ಕುಗಳು ಇರುತ್ತವೆ. ಯಾರೇ ಬಂದರೂಅವರನ್ನು ಬಜಾರ್ ಬಗ್ಗೆ ಅರಿವು ಮೂಡಿಸಲಾಗುವುದುಎಂದು ತಿಳಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,